ಲೈಫ್‌ಸ್ಟೈಲ್

ದಾಲ್ಚಿನ್ನಿ ಮಿಶ್ರಿತ ಹಾಲು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆಯಾ? ಒಮ್ಮೆ ಟ್ರೈ ಮಾಡಿ ನೋಡಿ…

ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿಯನ್ನು ಹೆಚ್ಚಾಗಿ ನಮ್ಮಲ್ಲಿ ಬಳಸಲಾಗುತ್ತದೆ. ಈ ದಾಲ್ಚಿನ್ನಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ, ಯಾವುದನ್ನೇ ಆಗಲಿ ಮಿತವಾಗಿ ಸೇವನೆ ಮಾಡಬೇಕು.

ಅಂದಹಾಗೆ ದಾಲ್ಚಿನ್ನಿ ಆರೋಗ್ಯಕರ ಮತ್ತು ಟೇಸ್ಟಿ ಮಸಾಲೆಗಳಲ್ಲಿ ಒಂದಾಗಿದೆ. ಇದರ ಸುವಾಸನೆಯು ವ್ಯಸನಕಾರಿಯಾಗಿದೆ ಮತ್ತು ಪ್ರತಿ ಖಾದ್ಯದ ರುಚಿಯನ್ನು ಇದು ಹೆಚ್ಚಿಸುತ್ತದೆ. ಇನ್ನು ದಾಲ್ಚಿನ್ನಿ ಹಾಲು ನಿಮ್ಮ ದೇಹದಲ್ಲಿ ಚಮತ್ಕಾರಗಳನ್ನು ಮಾಡಲು ಪೌಷ್ಟಿಕಾಂಶದ ಆಗರವನ್ನೇ ಹೊಂದಿದೆ. ಈ ದಾಲ್ಚಿನ್ನಿ ಸೋಂಕುಗಳ ವಿರುದ್ಧ ಹೋರಾಡುತ್ತದೆ, ಹಾರ್ಮೋನ್ ಇನ್ಸುಲಿನ್ ಅನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ದಾಲ್ಚಿನ್ನಿಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಹಲವಾರು ಜೀವಸತ್ವಗಳು ಹಾಗೂ ಖನಿಜಗಳಿಂದ ತುಂಬಿರುತ್ತದೆ. ಹಾಗಾದರೆ, ದಾಲ್ಚಿನ್ನಿಯ ಪ್ರಯೋಜನಗಳು ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಿದ್ರೆ ಸಮಸ್ಯೆ ದೂರ

ದಾಲ್ಚಿನ್ನಿಯು ದೇಹಕ್ಕೆ ತುಂಬಾ ಒಳ್ಳೆಯದು. ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಒಂದು ಗಂಟೆಗೂ ಮುನ್ನ ಹಾಲಿನೊಂದಿಗೆ ದಾಲ್ಚಿನ್ನಿಯನ್ನು ಬೆರೆಸಿ ಸೇವಿಸುವುದರಿಂದ ಆರಾಮಾಗಿ ನಿದ್ರೆ ಮಾಡಬಹುದು. ಇದಿಷ್ಟೇ ಅಲ್ಲದೆ, ದಾಲ್ಚಿನ್ನಿ ಬೆರೆಸಿದ ಹಾಲು ಕುಡಿದರೆ ಚಳಿಗಾಲದಲ್ಲಿ ನೆಗಡಿ, ಕೆಮ್ಮಿನಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ತೂಕ ನಷ್ಟ

ದಾಲ್ಚಿನ್ನಿಯು ಉರಿಯೂತ ನಿವಾರಕವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವ ವಿಧಾನವನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಕೊಬ್ಬಿನ ಆಹಾರವನ್ನು ತಿಂದಾಗ ಬೀರುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಅಂದಹಾಗೆ ದಾಲ್ಚಿನ್ನಿಯನ್ನು ಹಾಗೇ ತಿನ್ನಲು ಸಾಧ್ಯವಿಲ್ಲ. ಆದ್ದರಿಂದ, ಅದರ ಪ್ರಯೋಜನಗಳನ್ನು ಪಡೆಯಲು ಬೆಚ್ಚಗಿನ ಹಾಲಿನೊಂದಿಗೆ ಮಿಶ್ರಣ ಮಾಡಿ. ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ.

ಮಧುಮೇಹ ನಿಯಂತ್ರಣ

ದಾಲ್ಚಿನ್ನಿ ಹಾಲು ವಿಶೇಷವಾಗಿ ಟೈಪ್ 2 ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಮತ್ತು ಹಾಲು ನಿಮ್ಮನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿ ಇರಿಸುತ್ತದೆ.

ಅಲರ್ಜಿ ಸಮಸ್ಯೆ ದೂರ

ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರೂ ಸಹ ರಾತ್ರಿ ಈ ದಾಲ್ಚಿನ್ನಿ ಹಾಲನ್ನು ಕುಡಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ, ಕೀಲು ನೋವಿನಿಂದ ಬಳಲುತ್ತಿರುವವರು ಕೂಡ ಈ ಹಾಲನ್ನು ಕುಡಿಯುವುದರಿಂದ ಪ್ರಯೋಜನವಾಗುತ್ತದೆ. ಯಾವುದೇ ರೀತಿಯ ಹಾನಿಕಾರಕ ಅಲರ್ಜಿ ಸಮಸ್ಯೆಗಳಿಗೆ ಈ ದಾಲ್ಚಿನ್ನಿ ಹಾಲನ್ನು ಸೇವಿಸುವುದರಿಂದ ಪರಿಹಾರ ಪಡೆಯಬಹುದು. ಹೆಚ್ಚುವರಿಯಾಗಿ, ದಾಲ್ಚಿನ್ನಿ ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡುತ್ತದೆ.

ಉಳಿದಂತೆ ಒಣ ಚರ್ಮ ಸಮಸ್ಯೆ ನಿವಾರಿಸಿ ಯಾವಾಗಲೂ ಚರ್ಮವನ್ನು ಮಾಶ್ಚರೈಸ್​ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಉತ್ತಮ ಪಾನೀಯವಾಗಿದೆ. ಮೊಡವೆ ಕಲೆಗಳನ್ನು ನಿವಾರಿಸುತ್ತದೆ.

ದಾಲ್ಚಿನ್ನಿ ಹಾಲು ಮಾಡುವುದು ಹೇಗೆ?

ದಾಲ್ಚಿನ್ನಿ ಹಾಲು ಅತ್ಯಂತ ಪ್ರಯೋಜನಕಾರಿ ಪಾನೀಯಗಳಲ್ಲಿ ಒಂದಾಗಿದೆ ಎಂಬುದು ಸಾಬೀತಾಗಿದೆ. ಇದನ್ನು ಮಾಡುವುದು ವಿಧಾನದ ಬಗ್ಗೆ ನಾವೀಗ ತಿಳಿಯೋಣ. ಒಂದು ಕಪ್​ ಹಾಲು, 3ನೇ 1 ಒಂದು ದಾಲ್ಚಿನ್ನಿ ಪುಡಿ, ವೆನಿಲ್ಲಾ ಸಾರ ಮತ್ತು ಜೇನು ತುಪ್ಪ ಬೇಕಾಗುತ್ತದೆ. ಮೊದಲು ಪ್ಯಾನ್ ತೆಗೆದುಕೊಂಡು ಹಾಲನ್ನು ಅದರಲ್ಲಿ ಸುರಿದು ಮಧ್ಯಮ ಉರಿಯಲ್ಲಿ ಬೆಚ್ಚಗೆ ಮಾಡಬೇಕು. ಬಳಿಕ ದಾಲ್ಚಿನ್ನಿ ಪುಡಿಯನ್ನು ಸೇರಿಸಬೇಕು. ಒಂದು ಹನಿ ಅಥವಾ ಎರಡು ವೆನಿಲ್ಲಾ ಸಾರವನ್ನು ಸೇರಿಸುವ ಮುನ್ನ ಹಾಲು ಮತ್ತು ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಒಂದು ನಿಮಿಷಗಳ ಕಾಲ ಮಿಶ್ರಣ ಮಾಡಬೇಕು. ಬಳಿಕ ಹಾಲನ್ನು ಒಂದು ಗ್ಲಾಸ್​ಗೆ ಹಾಕಿಕೊಂಡು ರುಚಿಗೆ ಜೇನು ತುಪ್ಪವನ್ನು ಬೆರೆಸಿ ಸೇವಿಸಿ. (ಏಜೆನ್ಸೀಸ್​)