Basil | ಮನುಷ್ಯನಿಗೆ ಸುಂದರವಾದ ಮುಖದ ಜೊತೆಗೆ ಸುಂದರವಾಗಿ ಕಾಣುವ ಹಲ್ಲುಗಳು ಸಹ ಬಹಳ ಮುಖ್ಯವಾಗಿರುತ್ತದೆ. ಅನೇಕ ಜನರು ಹಳದಿ ಹಲ್ಲುಗಳಿಂದ ಮುಜುಗರಕ್ಕೊಳಗಾಗುತ್ತಾರೆ ಮತ್ತು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಜನರ ಮುಂದೆ ನಗುತ್ತಾ ಮತನಾಡಲು ನಾಚಿಕೆ ಪಡುತ್ತಾರೆ. ಈ ಹಳದಿ ಹಲ್ಲುಗಳು ವ್ಯಕ್ತಿಯ ಸುಂದರವಾದ ನಗುವನ್ನು ಸಹ ಹಾಳುಮಾಡುತ್ತವೆ. ಹಾಗಾದ್ರೆ ಈ ಹಳದಿ ಹಲ್ಲುಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.
ತುಳಸಿ ಎಲೆಗಳನ್ನು ಅಗಿಯಬಹುದು ಅಥವಾ ಅದನ್ನು ಪುಡಿ ಮಾಡಿ ಪೇಸ್ಟ್ ಆಗಿ ಬಳಸಬಹುದು. ತಮ್ಮ ಹಲ್ಲುಗಳನ್ನು ಆರೋಗ್ಯವಾಗಿಡಬಹುದು ಎಂದು ಡಾ. ರಾಶ್‌ಬಿಹಾರಿ ತಿವಾರಿ ಹೇಳುತ್ತಾರೆ. ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ತುಳಸಿಯಿಂದ ಕೆಲ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡಬಹುದಾಗಿದೆ. ಇದಕ್ಕಾಗಿ ಯಾರೂ ಕೂಡ ವೈದ್ಯರು ಅಥವಾ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವಿಲ್ಲ. ತುಳಸಿ ಎಲೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.
2) ತುಳಸಿ ಎಲೆಗಳು ಹಲ್ಲನ್ನು ಶುಚಿಯಾಗಿಡಲು ಹಾಗೂ ಆರೋಗ್ಯವಾಡಲು ಮಹತ್ಯದ ಪಾತ್ರ ವಹಿಸುತ್ತದೆ. ಅವುಗಳನ್ನು ಅಗಿಯುವುದರಿಂದ ಅಥವಾ ಅದರ ಪೇಸ್ಟ್‌ನಿಂದ ಹಲ್ಲು ಹುಜ್ಜುವುದರಿಂದ ನಿಮ್ಮ ಹಲ್ಲುಗಳು ಸ್ವಚ್ಛವಾಗಿರುತ್ತವೆ.
1) ಯಾರಾದರೂ ತಮ್ಮ ಹಲ್ಲುಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಇಟ್ಟುಕೊಳ್ಳಲು ಬಯಸಿದರೆ, ಅವರು ಮೊದಲು ತಮ್ಮ ಜೀವನಶೈಲಿಯ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಸಿಗರೇಟ್, ಗುಟ್ಕಾ ಇತ್ಯಾದಿಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
(ಏಜೆನ್ಸೀಸ್)
4) ತುಳಸಿ ಎಲೆಗಳನ್ನು ಅಗಿಯುವುದರಿಂದ ಅಥವಾ ಪುಡಿ ಮಾಡಿ ಪೇಸ್ಟ್ ಆಗಿ ಬಳಸುವುದರಿಂದ, ತಮ್ಮ ಹಲ್ಲುಗಳನ್ನು ಆರೋಗ್ಯವಾಗಿಡಬಹುದು ಮತ್ತು ಇದು ಹಲ್ಲುಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು.
3) ತುಳಸಿಯಲ್ಲಿ ಹೈಡ್ರಾಕ್ಸಿ ಅಲೈಲ್‌ಬೆನ್ಜೀನ್ ಇದ್ದು, ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದು 71% ಯುಜೆನಾಲ್ ಮತ್ತು 20% ಮೀಥೈಲ್ ಯುಜೆನಾಲ್ಅನ್ನು ಹೊಂದಿರುತ್ತದೆ. ಇದು ಹಲ್ಲು ಕೊಳೆಯುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ತುಳಸಿ ಎಲೆಗಳು ಬಾಯಿಯ ಸೋಂಕುಗಳಿಗೆ ಚಿಕಿತ್ಸೆ ನೀಡುವಲ್ಲಿ ಸಹ ಬಹಳ ಪ್ರಯೋಜನಕಾರಿ.