Hair Fall: ಕೂದಲು ಉದುರುವುದು ಜೀವನದ ಯಾವುದೋ ಒಂದು ಹಂತದಲ್ಲಿ ಹೆಚ್ಚಿನ ಜನರು ಎದುರಿಸುವ ಕಿರಿಕಿರಿ ಸಮಸ್ಯೆಗಳಲ್ಲಿ ಒಂದಾಗಿದೆ. ಒತ್ತಡ, ಮಾಲಿನ್ಯ, ಹಾರ್ಮೋನುಗಳ ಏರಿಳಿತಗಳು, ಪೌಷ್ಟಿಕಾಂಶದ ಕೊರತೆ ಹಾಗೂ ಋತುಮಾನಗಳಲ್ಲಾಗುವ ಬದಲಾವಣೆಯಿಂದಲೂ ಕಾರಣವಾಗಹುದು. ಎಣ್ಣೆಗಳು ಮತ್ತು ಸಲೂನ್ ಚಿಕಿತ್ಸೆಗಳನ್ನು ಅವಲಂಬಿಸುವುದು ಸಾಮಾನ್ಯವಾಗಿದ್ದರೂ, ಪ್ರತಿದಿನ ಸೇವಿಸುವ ಆಹಾರಗಳು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ.
ಇದನ್ನೂ ಓದಿ: ಸಹಕಾರಿ ಸಂಘಗಳಿಂದ ರೈತರು ಆರ್ಥಿಕ ಅಭಿವೃದ್ಧಿ
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳು ನಿಮ್ಮ ನೆತ್ತಿಯನ್ನು ಪೋಷಿಸುವುದಲ್ಲದೆ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಅಂತಹ ಕಡೆಗಣಿಸಲಾದ ಆಹಾರವೆಂದರೆ ಕರಿಬೇವು ಹಾಗೂ ಕಡಲೆ ಹಿಟ್ಟು ಆಗಿದೆ. ನಿಮ್ಮ ದಿನಿತ್ಯದ ಆಹಾರದಲ್ಲಿ ಈ ಪದಾರ್ಥವನ್ನು ಸೇವಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.
ಕರಿಬೇವಿನ ಎಲೆಗಳನ್ನು ಕುದಿಸಿ ಎಣ್ಣೆಯೊಂದಿಗೆ ಕೂದಲಿಗೆ ಹಚ್ಚುವುದರಿಂದ ಆಂತರಿಕವಾಗಿ ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ ನೋಡಿ...
ಕರಿಬೇವು ಎಲೆಗಳು ವಿಟಮಿನ್ ಸಿ, ವಿಟಮಿನ್ ಎ, ಫ್ಲೇವನಾಯ್ಡ್‌ಗಳು ಮತ್ತು ಕ್ಯಾರೊಟಿನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಇವು ಕೋಶದಲ್ಲಾಗುವ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳಲ್ಲಿರುವ ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ಒಳಗಿನಿಂದ ಬಲಪಡಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಕರಿಬೇವನ್ನು ಸಿಂಪಡಿಸುವುದರಿಂದ ಕೂದಲಿನ ಎಳೆಗಳು ಬಲಗೊಳ್ಳುತ್ತವೆ.
ಕರಿಬೇವಿನ ಎಲೆಗಳಲ್ಲಿರುವ ಬೀಟಾ-ಕ್ಯಾರೋಟಿನ್ ಹಾಗೂ ಬಿ ಜೀವಸತ್ವಗಳು ಸುಪ್ತ ಕೋಶಕಗಳನ್ನು ಸಕ್ರಿಯಗೊಳಿಸಲು ಮತ್ತು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ಕರಿಬೇವನ್ನು ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನಲ್ಲಿರುವ ಬ್ಯಾಕ್ಟೀರಿಯಾ ಹಾಗೂ ತಲೆಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* 200 ಮಿ.ಲೀ ಮೊಸರು
* 20 ಕರಿಬೇವು ಎಲೆಗಳು
* 100 ಗ್ರಾಂ ಹುರಿಗಡಲೆ
* ಅಗತ್ಯಕ್ಕೆ ಉಪ್ಪು
ಮೊದಲು ಹುರಿಗಡಲೆಯನ್ನು ಸಿಪ್ಪೆ ಬಿಡಿಸಿ, ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿ ಹಿಟ್ಟನ್ನು ರೆಡಿ ಮಾಡಿ ಪಕ್ಕಕ್ಕಿಟ್ಟುಕೊಳ್ಳಿ. ನಂತರ ಅದೇ ಜಾರಿಗೆ ಕೊತ್ತುಂಬರಿ ಸೊಪ್ಪು, ಜೀರಿಗೆ ಕರಿಬೇವು ಹಾಕಿ ಪೇಸ್ಟ್ ಮಾಡಬೇಕು. ನಂತರ ಒಂದು ಕಡಾಯಿಗೆ 200 ಮಿ.ಲೀ ಮೊಸರು ಹಾಕಿ ನಂತರ ರುಬ್ಬಿಟ್ಟಿರುವ ಪೇಸ್ಟ್ನ್ನು ಹಾಗೂ ಕಡಲೆಹಿಟ್ಟನ್ನು ಸೇರಿಸಿ ಪಾನೀಯ ರೀತಿಯಲ್ಲಿ ಹದಗೊಳಿಸಿ ತಕ್ಷಣವೇ ಸೇವಿಸಿ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.