ಲೈಫ್‌ಸ್ಟೈಲ್

ಕುಳಿತು ನೀರು ಕುಡಿಯೋದು ನಿಜಕ್ಕೂ ಉತ್ತಮವೇ? ಇದರಿಂದ ಏನ್ನೆಲ್ಲ ಪ್ರಯೋಜನ; ಇಲ್ಲಿದೆ ಉಪಯುಕ್ತ ಮಾಹಿತಿ | Water

Water: ನಮ್ಮ ಜೀವನದಲ್ಲಿ ಆಹಾರ ಮತ್ತು ನೀರು ಬಹಳ ಮುಖ್ಯವಾದ ಅಂಶ. ಏನ್ನಿಲ್ಲದೆ ಹೋದರೂ ಇವರೆಡು ಇರಲೇಬೇಕು. ಅದರಲ್ಲೂ, ಅತೀ ಮುಖ್ಯವಾಗಿ ನೀರು ಅತ್ಯಗತ್ಯ. ಊಟವಿಲ್ಲದೆ ಒಂದಷ್ಟು ದಿನಗಳ ಕಾಲ ಜೀವವನ್ನು ಮುಂದಕ್ಕೆ ಕೊಂಡೊಯ್ಯಬಹುದು. ಆದರೆ, ನೀರಿಲ್ಲದೆ ಒಂದು ದಿನ ಇರುವುದು ಕಷ್ಟಸಾಧ್ಯ. ನಮ್ಮಲ್ಲಿ ನೀರಿಗೆ ವಿಶೇಷ ಸ್ಥಾನವಿದೆ.

ಆರೋಗ್ಯಕ್ಕೆ ಪ್ರತಿದಿನ ನೀರು ಕುಡಿಯುವುದು ಎಷ್ಟು ಮುಖ್ಯ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಪಾಲಿಸುವಲ್ಲಿ ಎಡವುತ್ತಾರೆ. ನೀರು ಕುಡಿಯುವುದರಿಂದ ಎಷ್ಟು ಪ್ರಯೋಜನವಿದೆಯೋ ಕುಳಿತು ಕುಡಿಯುವುದರಿಂದ ಅಷ್ಟೇ ಪ್ರಯೋಜವಿದೆ ಎಂಬ ಮಾತುಗಳು ಸಾಕಷ್ಟು ಬಾರಿ ಕೇಳಿದ್ದೇವೆ. ಅಷ್ಟಕ್ಕೂ ಯಾವಾಗ ಕುಡಿಯಬೇಕು? ನಿಂತುಕೊಂಡು ಕುಡಿಯಬೇಕೇ? ಕುಳಿತು ಕುಡಿಯಬೇಕಾ? ಎಂಬ ಅನುಮಾನ ಇಂದಿಗೂ ಹಲವರಲ್ಲಿದೆ.

ಪ್ರಾಚೀನ ಆಯುರ್ವೇದ, ಯೋಗ ವಿಜ್ಞಾನ ಮತ್ತು ಆಧುನಿಕ ಆರೋಗ್ಯ ವಿಜ್ಞಾನದ ಪ್ರಕಾರ, ಕುಳಿತುಕೊಂಡು ನೀರು ಕುಡಿಯುವುದು ದೇಹಕ್ಕೆ ತುಂಬಾ ಒಳಿತು. ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಕುಳಿತುಕೊಂಡು ಕುಡಿಯುವ ನೀರಿನಿಂದ ನಮ್ಮ ದೇಹಕ್ಕೆ ಏನ್ನೆಲ್ಲ ಪ್ರಯೋಜನಗಳು ದೊರೆಯಲಿದೆ ಎಂಬುದರ ವಿವರ ಹೀಗಿದೆ ಗಮನಿಸಿ.

1. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಕಾರಿ

ಕುಳಿತು ನೀರು ಕುಡಿಯುವಾಗ, ನಾವು ನಿಧಾನವಾಗಿ ಕುಡಿಯುತ್ತೇವೆ. ಇದು ದೇಹದಾದ್ಯಂತ ನೀರನ್ನು ಸಮವಾಗಿ ವಿತರಿಸಲು ಸಹಾಯ ಮಾಡುತ್ತದೆ. ಮತ್ತು ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

2. ಕಿಡ್ನಿ ಮೇಲೆ ಕಡಿಮೆ ಒತ್ತಡ

ನಿಂತುಕೊಂಡು ನೀರು ಕುಡಿಯುವುದರಿಂದ ಮೂತ್ರಪಿಂಡಗಳ ಮೂಲಕ ವೇಗವಾಗಿ ಹಾದುಹೋಗುತ್ತದೆ. ಇದು ಏಕಕಾಲದಲ್ಲಿ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಆದರೆ, ನೀವು ಕುಳಿತು ಕುಡಿದರೆ, ನೀರು ಮೂತ್ರಪಿಂಡಗಳನ್ನು ನಿಧಾನವಾಗಿ ತಲುಪುತ್ತದೆ. ಅವುಗಳ ನೈಸರ್ಗಿಕ ಕಾರ್ಯವನ್ನು ನಿರ್ವಹಿಸುತ್ತದೆ.

3. ಜೀರ್ಣಕ್ರಿಯೆ ಸುಧಾರಣೆ

ಕುಳಿತಾಗ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಆರಾಮದಾಯಕವಾಗಿ ಕಾರ್ಯನಿರ್ವಹಿಸುತ್ತದೆ. ನೀವು ನಿಂತುಕೊಂಡು ನೀರು ಕುಡಿದಾಗ, ಜೀರ್ಣಕಾರಿ ರಸಗಳ ಉತ್ಪಾದನೆ ಕಡಿತಗೊಳ್ಳುತ್ತದೆ. ಇದು ಆಮ್ಲೀಯತೆ, ವಾಂತಿ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

4. ಚಯಾಪಚಯ ಕ್ರಿಯೆ ಸುಧಾರಣೆ

ಕುಳಿತುಕೊಂಡು ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ನೀವು ನಿಧಾನವಾಗಿ ಕುಳಿತುಕೊಂಡು ನೀರು ಕುಡಿದಾಗ, ನಿಮ್ಮ ಚಯಾಪಚಯ ಕ್ರಿಯೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.

ಮುಖ್ಯ ಸೂಚನೆ

  • ಕುಳಿತುಕೊಂಡು ನಿಧಾನವಾಗಿ ಕುಡಿಯಿರಿ. ನಿಂತಿರುವಾಗ ಅಥವಾ ವಾಹನದಲ್ಲಿ ಚಲಿಸುವಾಗ ಕುಡಿಯಬೇಡಿ.
  • ಗಾಜಿನಿಂದ ಅಥವಾ ಮಣ್ಣಿನ ಪಾತ್ರೆಯಿಂದ ಕುಡಿಯಿರಿ. ಬಾಟಲಿಯಿಂದ ನೇರವಾಗಿ ಕುಡಿಯಬೇಡಿ ಮತ್ತು ಪ್ಲಾಸ್ಟಿಕ್​ ಬಾಟಲಿ ತ್ಯಜಿಸಿ.
  • ಹಸಿವಾದರೆ ಊಟ ಮಾಡುವ ಮೊದಲು ನೀರು ಕುಡಿಯುವುದು ಉತ್ತಮ. ಅನ್ನ ತಿನ್ನುವಾಗ ಹೆಚ್ಚು ನೀರು ಸೇವಿಸಬೇಡಿ.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.