ಲೈಫ್‌ಸ್ಟೈಲ್

ದೇಹದಲ್ಲಿನ ವಿಷ ಫಿಲ್ಟರ್​ ಮಾಡುವ ಲಿವರ್​ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?: ಇಲ್ಲಿದೆ ಸುಲಭ ಮಾರ್ಗ

ಲಿವರ್​​ ದೇಹದ ಅತಿದೊಡ್ಡ ಆಂತರಿಕ ಅಂಗವಾಗಿದೆ. ಕೇವಲ ಎರಡರಿಂದ ನಾಲ್ಕು ಇಂಚುಗಳಷ್ಟು ಮತ್ತು ಎರಡರಿಂದ ಮೂರು ಪೌಂಡ್‌ಗಳಷ್ಟು ತೂಕವಿರುವ ಈ ಯಕೃತ್ತು ಪ್ರತಿದಿನ ದೇಹದಲ್ಲಿ 3,000ಕ್ಕೂ ಹೆಚ್ಚು ಅಗತ್ಯ ಕೆಲಸಗಳನ್ನು ಮಾಡುತ್ತದೆ. ನಿಮ್ಮ ದೇಹದಲ್ಲಿನ ವಿಷವನ್ನು ಫಿಲ್ಟರ್ ಮಾಡುವ ಏಕೈಕ ಅಂಗ ಎಂದರೆ ಅದು ಯಕೃತ್ತು. 200 ವರ್ಷಗಳವರೆಗೆ ಆರಾಮವಾಗಿ ಕೆಲಸ ಮಾಡುವ ಶಕ್ತಿ ಯಕೃತ್ತಿಗಿದೆ. ಆದರೆ ನಮ್ಮ ತಪ್ಪಿನಿಂದಾಗಿ ಅದರ ಸ್ಥಿತಿ ಕೇವಲ 20 ವರ್ಷಗಳಲ್ಲಿ ಹದಗೆಡುತ್ತದೆ. ಅತಿಯಾದ ಆಲ್ಕೊಹಾಲ್​​, ಮದ್ಯಪಾನ ಚಟ ಯಕೃತ್ತಿಗೆ ಹಾನಿಯುಂಟು ಮಾಡುತ್ತದೆ. ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿಮ್ಮ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುವುದು ಅವಶ್ಯಕವಾಗಿದೆ.

ದುರ್ಬಲ ಯಕೃತ್ತಿನ ಲಕ್ಷಣಗಳು: ಮಲಬದ್ಧತೆ, ತೀವ್ರ ರಕ್ತದೊತ್ತಡ, ಡಾರ್ಕ್ ಮೂತ್ರ, ಆಸಿಡ್ ರಿಫ್ಲೆಕ್ಸ್ ಮತ್ತು ಎದೆಯುರಿ, ದೀರ್ಘಕಾಲದ ಆಯಾಸ, ಸುಲಭವಾಗಿ ಮೂಗೇಟುಗಳು, ಹಸಿವು, ಖಿನ್ನತೆ, ರೋಸೇಸಿಯಾ, ವಿಪರೀತ ಬೆವರುವುದು ದುರ್ಬಲ ಯಕೃತ್ತಿನ ರೋಗಲಕ್ಷಣಗಳಾಗಿವೆ.

ಯಕೃತ್ತು(ಲಿವರ್​​​) ಡಿಟಾಕ್ಸ್ ಮಾಡಲು ಇರುವ ಮಾರ್ಗ:

  • ಅರಿಶಿನ ಹಾಲು: ರಾತ್ರಿ ಮಲಗುವ ಮೊದಲು, ಒಂದು ಲೋಟ ಬೆಚ್ಚಗಿನ ಹಾಲನ್ನು ಒಂದು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ ಕುಡಿಯಿರಿ. ಇದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ.
  • ಆಮ್ಲಾ ಮತ್ತು ನಿಂಬೆ ನೀರು: ಯಕೃತ್ತಿನಿಂದ ಆಲ್ಕೋಹಾಲ್ ಮತ್ತು ಸಕ್ಕರೆಯ ಕಲ್ಮಶಗಳನ್ನು ತೆಗೆದುಹಾಕಲು ಆಮ್ಲಾವನ್ನು ಸೇವಿಸಿ. ಇದರಲ್ಲಿರುವ ವಿಟಮಿನ್ ಸಿ ಲಿವರ್ ಅನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯಿರಿ. ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ನಿಂಬೆ ಹಿಂಡಿ ಕುಡಿದರೆ ಜೀರ್ಣಕ್ರಿಯೆ ಹೆಚ್ಚುತ್ತದೆ ಮತ್ತು ಲಿವರ್ ಶುಚಿಯಾಗುತ್ತದೆ.
  • ಎಳನೀರು: ಎಲೆಕ್ಟ್ರೋಲೈಟ್ ಭರಿತ ಎಳನೀರನ್ನು ಕುಡಿಯಿರಿ. ಇದು ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿದ್ದು ಯಕೃತ್ತನ್ನು ಹೈಡ್ರೀಕರಿಸುತ್ತದೆ. ಇದು ವಿಷವನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ದೇಹವು ಹೆಚ್ಚು ಶಕ್ತಿಯುತವಾಗಿರುತ್ತದೆ.