ಲೈಫ್‌ಸ್ಟೈಲ್

ಬ್ಯಾಚುಲರ್ಸ್​ಗಾಗಿ Food Recipes; ಮುಂಜಾನೆ ತಡವಾಗಿ ಎದ್ದು ತಡಕಾಡ್ಬೇಡಿ 10 ನಿಮಿಷದಲ್ಲಿ ಆಲೂಗಡ್ಡೆ ರೈಸ್ ಮಾಡಿ

Simple Potato Rice For Busy Mornings: ರಾತ್ರಿ ಲೇಟಾಗಿ ಮಲಗಿ ಮುಂಜಾನೆ ತಡವಾಗಿ ಎದ್ದು ಅಡುಗೆ ಏನು ಮಾಡಿಕೊಳ್ಳೋದು ಎಂದು ತಡಕಾಡೋದು ಬೇಡ. ಹೋಟೆಲ್​ನಲ್ಲಿ ತಿನ್ನೋಣ ಎಂದು ಗ್ಯಾಸ್ಟಿಕ್​ ಸಮಸ್ಯೆಗೆ ಒಳಗಾಗೋದು ಬೇಡ. ಬದಲಾಗಿ, ಕಡಿಮೆ ಸಮಯಲ್ಲಿ ನಿಮ್ಮ ಮನೆಯಲ್ಲಿರುವ ಆಲೂಗಡ್ಡೆಯಲ್ಲಿ ರೈಸ್ ಮಾಡುವ ಸಿಂಪಲ್​ ರೆಸಿಪಿಯನ್ನು ಇಂದು ತಿಳಿದುಕೊಳ್ಳೋಣ.

ಆಲೂಗಡ್ಡೆ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು

  • ಆಲೂಗಡ್ಡೆ-21 ಸಣ್ಣಗೆ ಎಚ್ಚಿಟ್ಟುಕೊಳ್ಳಿ

  • ಅಕ್ಕಿ -1 ಗ್ಲಾಸ್ (ಮೊದಲೇ ಬೇಯಿಸಿಟ್ಟುಕೊಂಡಿರಿ)

  • ಈರುಳ್ಳಿ-1 ಸಣ್ಣಗೆ ಎಚ್ಚಿಟ್ಟುಕೊಳ್ಳಿ

  • ಬೆಳ್ಳುಳ್ಳಿ- 5-6 ಎಸಳು

  • ಕೊತ್ತಂಬರಿ- ಸ್ವಲ್ಪ

  • ಖಾರದ ಪುಡಿ-1/2 ಸ್ಪೂನ್

  • ಉಪ್ಪು-ಚಿಟಿಕೆ

  • ಟೊಮ್ಯಾಟೋ-2

  • ಸಾಸಿವೆ -ಕಾಲು ಸ್ಪೂನ್

  • ಜೀರಿಗೆ-ಕಾಲು ಸ್ಪೂನ್

  • ಗರಂ ಮಸಾಲ- ಕಾಲು ಸ್ಪೂನ್

  • ಪಲಾವ್ ಪೌಡರ್- ಕಾಲು ಸ್ಪೂನ್

ಮಾಡುವ ವಿಧಾನ

ಒಂದು ಬಾಂಡ್ಲಿಗೆ ಎಣ್ಣೆ ಹಾಕಿ, ಬಿಸಿಯಾದ ಎಣ್ಣೆಗೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ, ಆನಂತರ ಜಜ್ಜಿದ ಬೆಳ್ಳುಳ್ಳಿ ಹಾಗೂ ಶುಂಠಿ, ಪಲಾವ್​ ಎಲೆ, ಚಕ್ಕೆ ಹಾಕಿ ಉರಿದುಕೊಳ್ಳಿ. ಈಗ ಈರುಳ್ಳಿ ಹಾಕಿ ಗೋಲ್ಡನ್​ ಬ್ರೌನ್​ ಆಗುವವರೆಗೂ ಉರಿದುಕೊಳ್ಳಿ.

ಈರುಳ್ಳಿ ಬೆಂದ ನಂತರ ಟೊಮ್ಯಾಟೋ ಹಾಗೂ ಆಲೂಗಡ್ಡೆ ಹಾಕಿ ಉರಿದುಕೊಳ್ಳಿ. ಆಲೂಗಡ್ಡೆ ಮೆದುವಾಗುವವರೆಗೂ ಯಾವುದೇ ಮಿಶ್ರಣ ಹಾಕದೇ ಮುಚ್ಚಿಡಿ, ಆಗಾಗ ಪಾತ್ರೆಗೆ ಸೌಟಾಡಿಸಿ ತಳ ಕಟ್ಟದಂತೆ ನೋಡಿಕೊಳ್ಳಿ. ಈಗ ಬೇಯಿಸಿದ ಆಲೂಗಡ್ಡೆಗೆ ಖಾರದ ಪುಡಿ ಅರಿಶಿನ, ಗರಂ ಮಸಾಲ ಕೊಂಚ ಪಲಾವ್​ ಪೌಡರ್​ ಹಾಕಿ ಹಸಿ ವಾಸನೆ ಹೋಗುವಂತೆ ಉರಿದುಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.

ಎಲ್ಲವೂ ಆದ ನಂತರ ಮೊದಲೇ ಬೇಯಿಸಿಟ್ಟ ಅನ್ನವನ್ನು ಕುಕ್ಕರ್​ನಿಂದ ತೆಗೆದು, ರೆಡಿಯಾಗಿರುವ ಆಲೂಗಡ್ಡೆ ಫ್ರೈಗೆ ಅನ್ನ ಕಲಿಸಿ ಮತ್ತೊಮ್ಮೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಈ ಕಡಿಮೆ ಸಮಯದಲ್ಲಿ ತಯಾರಾದ ಆಲೂಗಡ್ಡೆ ರೈಸ್​ ತಿನ್ನಲು ರೆಡಿಯಾಗಿದೆ.

ಇದನ್ನೂ ಓದಿ: ಬ್ಯಾಚುಲರ್ಸ್​​ಗಾಗಿ Food Recipes: 15 ನಿಮಿಷದಲ್ಲಿ ಮೆಂತ್ಯೆ ಸೊಪ್ಪು-ಮೊಟ್ಟೆ ಪಲ್ಯ ಮಾಡೋದು ಹೇಗೆ?

ಆಲೂಗಡ್ಡೆ ಆರೋಗ್ಯ ಪ್ರಯೋಜನ

ಆಲೂಗಡ್ಡೆಯಲ್ಲಿ ವಿಟಮಿನ್​ ಸಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶವಿದೆ. ಇದರಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಆಲೂಗಡ್ಡೆ ಚರ್ಮಕ್ಕೆ ಬಳಕೆ

ಆಲೂಗಡ್ಡೆಯಲ್ಲಿರುವ ಕ್ಯಾಟೆಕೊಲೇಸ್ ಕಿಣ್ವವು ಕಪ್ಪು ಕಲೆಯನ್ನು ತೆಗೆದು ಹಾಕಿ ಮಚ್ಚೆಗಳನ್ನು ಹೋಗಲಾಡಿಸುತ್ತದೆ. ಮುಖದ ಮೇಲೆ ಕಾಡುವ ಮೊಡವೆ ಮತ್ತು ಉರಿಯೂತದಂತಹ ಸಮಸ್ಯೆಗೆ ಇದು ಮುಕ್ತಿ ನೀಡುತ್ತದೆ. ನಿದ್ದೆಗೆಡುವುದರಿಂದ ಕಣ್ಣಿನ ಸುತ್ತ ಕಾಡುವ ಕಪ್ಪು ವರ್ತುಲ ಹೋಗಲಾಡಿಸಲು ಆಲೂಗಡ್ಡೆ ರಸ ಸಹಾಯ ಮಾಡುತ್ತದೆ, (ಏಜೆನ್ಸೀಸ್).