ಬ್ಯಾಚುಲರ್ಸ್​​ಗಾಗಿ Food Recipes: 15 ನಿಮಿಷದಲ್ಲಿ ಮೆಂತ್ಯೆ ಸೊಪ್ಪು-ಮೊಟ್ಟೆ ಪಲ್ಯ ಮಾಡೋದು ಹೇಗೆ?

 ಬ್ಯಾಚುಲರ್ಸ್​​ಗಾಗಿ Food Recipes: 15 ನಿಮಿಷದಲ್ಲಿ ಮೆಂತ್ಯೆ ಸೊಪ್ಪು-ಮೊಟ್ಟೆ ಪಲ್ಯ ಮಾಡೋದು ಹೇಗೆ?
Published on: 

ಸಾಮಾನ್ಯವಾಗಿ ನುಗ್ಗೆ ಸೊಪ್ಪಿನ ಜೊತೆಗೆ ಮೊಟ್ಟೆ ಪಲ್ಯ ಮಾಡಿರ್ತೇವೆ. ಅದನ್ನು ಬಿಟ್ಟು ಬೇರೆ ಯಾವುದೇ ಸೊಪ್ಪಿನೊಂದಿಗೆ ಮೊಟ್ಟೆ ಬಳಕೆ ಮಾಡೋದನ್ನು ನೋಡಿರಲ್ಲ, ಮಾಡಿಯೂ ಇರೋದಿಲ್ಲ. ನಾವು ಮೆಂತ್ಯೆ ಸೊಪ್ಪನ್ನು ಪಲಾವ್​, ಸಾರು, ದಾಲ್​ಗೆ ಬಳಕೆ ಮಾಡುವುದು ಗೊತ್ತೇ ಇದೆ. ಹೀಗಾಗಿ ಈ ದಿನ ಮೊಟ್ಟೆ ಪಲ್ಯಕ್ಕೆ ಮೆಂತ್ಯೆ ಬಳಕೆ ಮಾಡಿ ದೋಸೆ, ಚಪಾತಿ ಹಾಗೂ ಪರೋಟದೊಂದಿಗೆ ಸೇವಿಸಿ.

ಆರೋಗ್ಯ ಪ್ರಯೋಜನಗಳು

ಮೆಂತ್ಯೆ: ಮೆಂತ್ಯ ಸೊಪ್ಪಿನಲ್ಲಿ ನಾರಿನಾಂಶ ಹಾಗೂ ಕಬ್ಬಿಣಾಂಶ ಸಮೃದ್ಧವಾಗಿದೆ. ಇದರಲ್ಲಿರುವ ಅಮೈನೋ ಆಮ್ಲಾವು ರಕ್ತದಲ್ಲಿನ ಇನ್ಸುಲಿನ್​ ಮಟ್ಟ ನಿಯಂತ್ರಣ ಮಾಡಲು ಸಹಾಯ ಮಾಡುವ ಮೂಲ ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇನ್ನೂ ಮೆಂತ್ಯೆ ಸೊಪ್ಪಿನಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತ ಹೀನತೆ ನಿವಾರಣೆಗೆ ಇದು ಮದ್ದು.

ಮೊಟ್ಟೆಯಿಂದಾಗುವ ಆರೋಗ್ಯ ಪ್ರಯೋಜನವೇನು?

ಮೊಟ್ಟೆಯಲ್ಲಿ ವಿಟಮಿನ್​ ಎ, ಟಿ ಮತ್ತು ಇ, ಬಿ ಅಂಶವು ಸಮೃದ್ಧವಾಗಿದೆ. ಇದರಲ್ಲಿ ಪ್ರೋಟಿನ್​, ಸೆಲೆನಿಯಮ್​​ ಇದೆ. ಮೊಟ್ಟೆಯು ಸ್ನಾಯು ಹಾಗೂ ಮೂಳೆ, ಕಣ್ಣಿನ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹಲವರಿಗೆ ವೈದ್ಯರು ಮೊಟ್ಟೆ ತಿನ್ನಲು ಸಜೆಸ್ಟ್​ ಮಾಡುತ್ತಾರೆ. ಮೊಟ್ಟೆಯು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೆಂತ್ಯೆ ಹಾಗೂ ಮೊಟ್ಟೆ ಸೇರಿಸಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು

  • ಮೆಂತ್ಯೆ ಸೊಪ್ಪು: ಒಂದು ಕಟ್ಟು

  • ಮೊಟ್ಟೆ: 4

  • ಈರುಳ್ಳಿ: ಸಣ್ಣದಾಗಿ ಹೆಚ್ಚಿಕೊಂಡಿದ್ದು 1

  • ಟೊಮ್ಯಾಟೋ: ಸಣ್ಣದಾಗಿ ಹೆಚ್ಚಿಕೊಂಡಿದ್ದು 1

  • ಬೆಳ್ಳುಳ್ಳಿ: 5-6 ಎಸಳು

  • ಅರಿಶಿನ:ಚಿಟಿಕೆ

  • ಖಾರದ ಪುಡಿ: ಅರ್ಧ ಚಮಚ

  • ಧನಿಯಾ ಪುಡಿ:ಅರ್ಧ ಚಮಚ

  • ಸಾಸಿವೆ: ಚಿಟಿಕೆ

  • ಎಣ್ಣೆ: 2 ಚಮಚ

  • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಉರಿದುಕೊಳ್ಳಿ. ಆನಂತರ ಕಟ್ ಮಾಡಿದ ಮೆಂತ್ಯೆ ಅಥವಾ ಮೆಂತ್ಯೆ ತೊಳೆದ ನಂತರ ಕಟ್ ಮಾಡುವ ಅಗತ್ಯವಿಲ್ಲ ಎಣ್ಣೆಗೆ ಹಾಕಿದ ನಂತರ ಸಾಮಾನ್ಯವಾಗಿ ಮೃದುವಾಗುವ ಹಿನ್ನೆಲೆ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಈಗ ಮೆಂತ್ಯೆ ಸ್ವಲ್ಪ ಕಹಿ ಬಿಟ್ಟುಕೊಂಡು ಮೆತ್ತಗಾಗುತ್ತಿದೆ ಎನಿಸುತ್ತಿದೆಯಾ ಎನ್ನುವುದನ್ನು ನೋಡಿಕೊಳ್ಳಿ..

ಬೆಂದ ಮೆಂತ್ಯೆಗೆ ಖಾರದ ಪುಡಿ, ಧನಿಯಾ ಪುಡಿ ಹಾಕಿ ಅದು ಹಸಿ ವಾಸನೆ ಬಿಟ್ಟ ಮೇಲೆ ನಾಲ್ಕು ಮೊಟ್ಟೆ ಹೊಡೆದು ಬಿಡಿಯಾಗುವವರೆಗೂ ಚೆನ್ನಾಗಿ ತಿರುವಿಕೊಳ್ಳಿ. ಮೊಟ್ಟೆಯ ಭಾಗವು ಚೆನ್ನಾಗಿ ಬಿಡಿಯಾದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿ. ಈಗ ಮೆಂತ್ಯೆ ಮೊಟ್ಟೆ ಪಲ್ಯ ತಿನ್ನಲು ರೆಡಿ. ಇದನ್ನು ದೋಸೆ, ಚಪಾತಿ, ರೊಟ್ಟಿಯೊಂದಿಗೆ ಸೇವನೆ ಮಾಡಬಹುದು. ಅಥವಾ ಬಾಯ್ಲ್ಡ್​​ ರೈಸ್​​ ಮಾಡಿಕೊಂಡು ಮೊಸರು, ಪಲ್ಯ, ಉಪ್ಪಿನಕಾಯಿಯೊಂದಿಗೆ ಇದನ್ನು ಸೇವಿಸಬಹುದಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net