ಲೈಫ್‌ಸ್ಟೈಲ್

ತಮ್ಮ ಹೊಳೆಯುವ ಚರ್ಮದ ರಹಸ್ಯ ಹೇಳಿದ ಶ್ರದ್ಧಾ ಕಪೂರ್; ಈ 3 ನಿಯಮ ಫಾಲೋ ಮಾಡಿ ಎಂದ್ರು ನ್ಯಾಚುರಲ್​ ಬ್ಯೂಟಿ! | Glowing Skin

Glowing Skin:ಸಿನಿಮಾ ನಟಿಯರು ಇಷ್ಟೊಂದು ಅದೇಗೆ ಹೊಳೆಯುವಂತೆ ಕಾಣುತ್ತಾರೆ ಎಂದು ನಮಗೆ ಯಾವಾಗಲದರೂ ಒಂದು ಬಾರಿ ಅನಿಸಿರುತ್ತದೆ. ಸಾಮಾನ್ಯವಾಗಿ ಅವರು, ಅಧಿಕ ಬೆಲೆಯ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುತ್ತಾರೆ. ಹೀಗಾಗಿ, ಅವರ ಸೌಂದರ್ಯದಿಂದ ಇದ್ದಾರೆ ಎಂದುಕೊಳ್ಳುತ್ತೇವೆ. ಆದರೆ, ಕೆಲ ಪ್ರಶ್ನೆಗಳಿಗೆ ಉತ್ತರ ಸಿಗಲ್ಲ. ಇದೀಗ ನೈಸರ್ಗಿಕ ಸುಂದರಿ ಎಂದೇ ಬಿಂಬಿತವಾಗಿರುವ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ತಮ್ಮ ಹೊಳೆಯುವ ಚರ್ಮದ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು, ಹೊಳೆಯುವ ಮತ್ತು ತಾಜಾವಾಗಿಡಲು ಏನು ಮಾಡುತ್ತಾರೆ? ಎನ್ನುವುದನ್ನು ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರದ್ಧಾ, ತಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ಮೂರು ವಿಷಯಗಳಿವೆ ಮತ್ತು ಚರ್ಮದ ಆರೈಕೆಗೆ ಇದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಇದು ತುಂಬಾ ಮೂಲಭೂತ ವಿಷಯ, ಇದನ್ನು ನೀವು ನಿಮ್ಮ ದಿನಚರಿಯಲ್ಲಿ ಅನುಸರಿಸಬಹುದು ಮತ್ತು ಉತ್ತಮ ಚರ್ಮವನ್ನು ಪಡೆಯಬಹುದು ಎಂದು ಹೇಳಿದ್ದಾರೆ.

ಶ್ರದ್ಧಾ ಹೇಳಿದ್ದೇನು..?

ನೈಸರ್ಗಿಕ ವಸ್ತುಗಳಲ್ಲಿ ನಂಬಿಕೆ ಇಟ್ಟಿರುವ ನಟಿ ಶ್ರದ್ಧಾ, ನಿಮ್ಮ ಚರ್ಮ ಒಳಗಿನಿಂದ ಸ್ವಚ್ಛವಾಗಿದ್ರೆ ಮಾತ್ರ ಅದು ಬಾಹ್ಯವಾಗಿ ಹೊಳೆಯುವಂತೆ ಕಾಣುತ್ತದೆ ಎನ್ನುತ್ತಾರೆ.

ನನ್ನ ಚರ್ಮ ಕಾಂತಿಯಾಗಿರಲು ನಾನು ದಿನನಿತ್ಯ ಸಾಕಷ್ಟು ನೀರು ಕುಡಿಯುತ್ತೇನೆ. ಇದರಿಂದ ನನ್ನ ಚರ್ಮ ಹೊಳೆಯಲು ಸಹಾಯ ಮಾಡುತ್ತದೆ.

ಚರ್ಮ ಹೊಳೆಯಲು ನಾನು ದಿನನಿತ್ಯ 7 ರಿಂದ 8 ಗಂಟೆಗಳ ಕಾಲ ಗಾಢ ನಿದ್ರೆ ಮಾಡುತ್ತೇನೆ ಎಂದಿದ್ದಾರೆ.

ಅಲ್ಲದೆ, ಅತ್ಯಂತ ಮುಖ್ಯವಾದ ನಿರ್ಣಾಯಕ ವಿಷಯವೆಂದರೆ ನಾವು ಯಾವಗಲೂ ಸಂತೋಷವಾಗಿರುವುದು. ನೀವು ಮನಸ್ಸಿನಿಂದ ಸಂತೋಷವಾಗಿದ್ರೆ, ಚರ್ಮವೂ ಹೊರಗಿನಿಂದ ಹೊಳೆಯುತ್ತದೆ. ಈ ಮೂರು ವಿಷಯಗಳನ್ನು ನಾನು ದಿನನಿತ್ಯದ ಜೀವನದಲ್ಲಿ ಆಳವಡಿಕೊಂಡಿದ್ದೇನೆ. ನನ್ನ ಚರ್ಮ ಹೊಳೆಯಲು ಇವೇ ಕಾರಣ ಎಂದು ನಂಬುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)