ಲೈಫ್‌ಸ್ಟೈಲ್

ಬಾಲಿವುಡ್​ ನಟ ಶಾರುಖ್​ ಖಾನ್​ ಫಿಟ್​ ಆಗಿರಲು ಈ 4 ಆಹಾರಗಳನ್ನು ಸೇವಿಸುತ್ತಾರಂತೆ! | Shah Rukh Khan

Shah Rukh Khan: ಬಾಲಿವುಡ್​ನ ಕಿಂಗ್​ ಎಂದೇ ಖ್ಯಾತಿ ಪಡೆದ ಶಾರುಖಾನ್​ 59 ವರ್ಷವಾದರು ತಮ್ಮ ಫಿಟ್ನೆಸ್​ನಿಂದ ಇಂದಿಗೂ ಯುವ ತರುಣನಂತೆ ಕಾಣುವ ನಟರಾಗಿದ್ದಾರೆ. ಇವರು ತಮ್ಮ ಉತ್ಸಾಹಭರಿತ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಬೆರಗುಗೊಳಿಸುತ್ತಲೇ ಇದ್ದಾರೆ. ಅವರ ದೇಹದ ಫಿಟ್ನೆಸ್​ ನೋಡಿದವರು ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಚಕಿತರಾಗಿದ್ದಾರೆ.

ಶಾರುಖ್​ ತಮ್ಮ ಜೀವನದುದ್ದಕ್ಕೂ ಆಹಾರದ ಬಗ್ಗೆ ಕಾಳಜಿ ಹಾಗೂ ಶಿಸ್ತಿನಲ್ಲಿ ಎಂದಿಗೂ ಅಂದಾಜು ಕಡಿಮೆ ಮಾಡಿಲ್ಲ. ಅವರೇನು ದುಬಾರಿ ಆಹಾರ ಹಾಗೂ ಸಂಕೀರ್ಣತೆಯನ್ನು ಹೊಂದಿಲ್ಲ. ಬದಲಿಗೆ ಸರಳ ಹಾಗೂ ಸುಲಭ ರೀತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಿ ಸಧೃಡ ಮೈಕಟ್ಟನ್ನು ಹೊಂದಿದ್ದಾರೆ.

ಶಾರುಖ್​ ಅವರ ದೈನಂದಿನ ಆಹಾರದ ಪ್ರಮುಖ ಭಾಗವಾಗಿ ಬೇಯಿಸಿದ ಕೋಳಿ, ಬ್ರೊಕೊಲಿ, ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳ ಸೇವಿಸುವುದಾಗಿ ತಿಳಿಸಿದ್ದಾರೆ. ಇನ್ನು ಈ ಆಹಾರಗಳು ಶಕ್ತಿಯನ್ನು ಒದಗಿಸುವುದಲ್ಲದೆ, ಸ್ನಾಯುಗಳ ಬಲವನ್ನು ಹೆಚ್ಚಿಸುತ್ತವೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರುತ್ತವೆ ಎಂದು ತಿಳಿಸಿದ್ದಾರೆ.

1. ಬೇಯಿಸಿದ ಕೋಳಿ ಪ್ರಯೋಜನಗಳು

ಶಾರುಖ್ ಖಾನ್ ಅವರ ಆಹಾರದ ಪ್ರಮುಖ ಭಾಗವೆಂದರೆ ಗ್ರಿಲ್ಡ್ ಚಿಕನ್. ಈ ಆಹಾರದ ಸೇವನೆಯು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಕ್ಯಾಲೋರಿ ಮತ್ತು ಫ್ಯಾಟ್ ಹೊಂದಿರುವಂತಹ ಜನರಲ್ಲಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಪ್ರೋಟೀನ್, ಬಿ ವಿಟಮಿನ್‌ಗಳು, ಐರನ್, ಪೊಟ್ಯಾಷಿಯಂ ಮತ್ತು ಸೆಲೇನಿಯಂನಂತಹ ಖನಿಜಗಳು ಇದರಲ್ಲಿ ಸಮೃದ್ಧವಾಗಿವೆ. ಇದರ ಸೇವನೆಯು ಮಾಂಸಖಂಡಗಳ ಬಲಪಡಿಸಲು, ಹೃದಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

2. ಬ್ರೊಕೊಲಿ

ಬ್ರೊಕೊಲಿ ಸೇವನೆಯು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಸುಲ್ಫರಫೇನ್ ಸೇರಿದಂತೆ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಕೆ ಮತ್ತು ಫೈಬರ್ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಸುಧಾರಿಸಿ, ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

3. ಮೊಳಕೆ ಕಾಳು

ಶಾರುಖ್ ಅವರ ದೈನಂದಿನ ಆಹಾರದಲ್ಲಿ ನುಣ್ಣಗೆ ಕತ್ತರಿಸಿದ ಧಾನ್ಯಗಳು ನಿಯಮಿತ ಭಾಗವಾಗಿದೆ. ಅವು ಜೀವಸತ್ವಗಳು, ಖನಿಜಗಳು ಮತ್ತು ಜೀರ್ಣಕಾರಿ ಕಿಣ್ವಗಳಿಂದ ಸಮೃದ್ಧವಾಗಿವೆ. ಇದರಲ್ಲಿ ಪ್ರೊಟೀನ್​ ಸಮೃದ್ಧವಾಗಿರುವುದರಿಂದ ಮಾಂಸಖಂಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಸೇವನೆಯು ತೂಕ ಹೆಚ್ಚಿಸಲು ಉಪಯುಕ್ತವಾಗಿದೆ. ಇದರಲ್ಲಿ ಐರನ್ ಹೆಚ್ಚು ಇರುವುದರಿಂದ ರಕ್ತದೊತ್ತಡವನ್ನು ತಡೆಯುತ್ತದೆ. ಇದರ ಸೇವನೆಯು ಹೃದಯದ ಆರೋಗ್ಯ, ಕೊಬ್ಬು ಕಡಿಮೆ, ಮೂಳೆಗಳು ಮತ್ತು ಚರ್ಮ ಆರೋಗ್ಯ, ಮುಖದ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

4. ದ್ವಿದಳ ಧಾನ್ಯಗಳ

ಶಾರುಖ್ ಖಾನ್ ತಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಸೇರಿಸಿಕೊಳ್ಳುತ್ತಾರೆ. ದ್ವಿದಳ ಧಾನ್ಯಗಳು ಸಸ್ಯ ಆಧಾರಿತ ಪ್ರೋಟೀನ್, ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಆದ್ದರಿಂದ, ಇವು ಸಮತೋಲಿತ ಆಹಾರದ ಅತ್ಯುತ್ತಮ ಭಾಗವಾಗಿದೆ. ಇದನ್ನು ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹಕ್ಕೆ ಅಗತ್ಯವಿರುವ ಪ್ರೊಟೀನ್​ಗಳನ್ನು ನೀಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ