ಲೈಫ್‌ಸ್ಟೈಲ್

ಫ್ಲಿಪ್​ಕಾರ್ಟ್​ನಲ್ಲಿ ಬೌನ್ಸ್​ ಇಲೆಕ್ಟ್ರಿಕ್ ಸ್ಕೂಟರ್​ ಬಿಗ್​ ಆಫರ್​: 15 ದಿನಗಳಲ್ಲಿಯೇ ಮನೆ ಬಾಗಿಲಿಗೆ!

ಬೆಂಗಳೂರು: ಪೆಟ್ರೋಲ್​ ಬೆಲೆ ಏರುತ್ತಿದ್ದಂತೆಯೇ ಇಲೆಕ್ಟ್ರಿಕ್​ ವಾಹನದತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಪೆಟ್ರೋಲ್​ ಬೆಲೆ ಹಾಗೂ ವಾತಾವರಣ ಕಲುಷಿತವಾಗುತ್ತಿರುವುದನ್ನು ಮನಗಂಡು ಇಲೆಕ್ಟ್ರಿಕ್​ ಬೈಕ್​, ಸ್ಕೂಟರ್​, ಕಾರುಗಳಿಗೆ ಈಗ ಒಲಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಆದರೆ ಸಾಮಾನ್ಯವಾಗಿ ಈಗ ಲಭ್ಯ ಇರುವ ಇಲೆಕ್ಟ್ರಿಕ್​ ಬೈಕ್​, ಸ್ಕೂಟರ್​ ಬೆಲೆ ಒಂದು ಲಕ್ಷ ರೂಪಾಯಿಗೂ ಹೆಚ್ಚಿಗೆ ಇದೆ. ಆದ್ದರಿಂದ ಹೆಚ್ಚಿನ ಮಂದಿ ಇದರ ಬೆಲೆ ಯಾವಾಗ ಕಮ್ಮಿಯಾಗುತ್ತದೋ ಎಂದು ಕಾಯುತ್ತಿದ್ದಾರೆ. ಜತೆಗೆ ಬೈಕ್​ ಬುಕ್​ ಮಾಡಿದ ಮೇಲೆ ಕೆಲ ತಿಂಗಳು ಕಾಯುವ ಸ್ಥಿತಿಯೂ ಇದೆ. ಇಂಥವರಿಗೆ ಖುಷಿ ಸುದ್ದಿಯೊಂದನ್ನು ಇದೀಗ ಬೆಂಗಳೂರು ಮೂಲದ ಇಲೆಕ್ಟ್ರಿಕ್ ವಾಹನ ಕಂಪೆನಿ ಬೌನ್ಸ್ ನೀಡಿದೆ.

ಬೌನ್ಸ್​ ತಯಾರಿಸಿರುವ ಇನ್ಫಿನಿಟಿ ಸ್ಕೂಟರ್ ಈಗ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಉಳಿದವುಗಳಿಗೆ ಹೋಲಿಸಿದರೆ ಬೆಲೆ ಕೂಡ ಕಡಿಮೆ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭವಾಗಿದ್ದು, ಇದರ ಅಂಗವಾಗಿ ಸಾಮಾನ್ಯ ದರಕ್ಕಿಂತ ಕಡಿಮೆ ದರದಲ್ಲಿ ಇನ್ಫಿನಿಟಿ ಸ್ಕೂಟರ್ ಇಂದಿನಿಂದ (ಜುಲೈ 22) ಮಾರಾಟ ಮಾಡುತ್ತಿದೆ.

ಗ್ರಾಹಕರು ಆರ್ಡರ್ ಮಾಡಿದ 15 ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮನೆಗೆ ತಲುಪಿಸಲಾಗುತ್ತದೆ. ಕರ್ನಾಟಕ, ತೆಲಂಗಾಣ, ನವದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದ ಗ್ರಾಹಕರು ಇದರ ಸೌಲಭ್ಯ ಪಡೆಯಬಹುದು. ಇಂದಿನಿಂದ ಇದರ ಆಫರ್​ ಶುರುವಾಗಿದೆ.

ಬೌನ್ಸ್ ಇನ್ಫಿನಿಟಿ ಇ.1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.74,499 ರಿಂದ ಪ್ರಾರಂಭವಾಗುತ್ತದೆ. ಹೈದರಾಬಾದ್, ದೆಹಲಿ, ಮುಂಬೈ, ಪುಣೆ, ಅಹಮದಾಬಾದ್, ಬೆಂಗಳೂರಿನಲ್ಲಿ ಲಭ್ಯವಿದೆ. ಇದರ ಬೆಲೆ ಈ ರೀತಿ ಇದೆ.

ಈ ಸ್ಕೂಟರ್​ನ ಎಕ್ಸ್​ ಷೋರೂಮ್​ ಬೆಲೆ 79,999 ರೂಪಾಯಿಗಳಿವೆ. ಕೆಲವು ರಾಜ್ಯಗಳು ಸಬ್ಸಿಡಿ ಘೋಷಿಸಿರುವ ಹಿನ್ನೆಲೆಯಲ್ಲಿ ಇದರ ಬೆಲೆ ಇನ್ನೂ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ ಈ ಸ್ಕೂಟರ್​ 58,999ಕ್ಕೆ ಸಿಗಲಿದೆ. ರಾಜಸ್ಥಾನದಲ್ಲಿ 72,999 ರೂ. ಮಹಾರಾಷ್ಟ್ರದಲ್ಲಿ 69,999, ದೆಹಲಿಯಲ್ಲಿ 58,999 ಹಾಗೂ ಗುಜರಾತ್​ನಲ್ಲಿ 59,999ಕ್ಕೆ ಬೌನ್ಸ್ ಇನ್ಫಿನಿಟಿ ಇ.1 ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ. (ಏಜೆನ್ಸೀಸ್​)