ಲೈಫ್‌ಸ್ಟೈಲ್

ಯುವಕನಾದರೂ ಯುವತಿಯರ ಕಂಡರೆ ಅಸಹ್ಯವಾಗುತ್ತಿದ್ದು, ಭಯ ಶುರುವಾಗಿದೆ... ಏನಿದು?

ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಮಾನಸಿಕವಾಗಿ ತುಂಬ ಕಿರಿಕಿರಿಯೆನಿಸುತ್ತಿದೆ. ನಾನು ಗಂಡಸಾದರೂ ಒಳಗೆ ಹೆಣ್ಣುಮಕ್ಕಳ ಗುಣವಿದೆ. ಬರೆ ಹೆಣ್ಣುಮಕ್ಕಳಂತೆ ತಯಾರಾಗಬೇಕು, ಅವರಿಗಿಂತ ಚೆನ್ನಾಗಿ ಕಾಣಬೇಕು ಅನಿಸುತ್ತದೆ. ಏಕೋ ಏನೋ ಹುಡುಗರನ್ನು ನೋಡಿದರೆ ಸೆಕ್ಸ್ ಮಾಡಬೇಕು ಅನಿಸುತ್ತದೆ. ಯಾಕೆ ಹೀಗೆ ಆಗುತ್ತದೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

ಉತ್ತರ: ನಿಮ್ಮ ಮನಸ್ಸು ಹೆಣ್ಣು, ದೇಹ ಗಂಡಿನದ್ದು ಎಂದಿರುವಿರಿ. ನಿಮ್ಮ ಆಲೋಚನಾ ಕ್ರಮ, ವಸuಉಧಾರಣೆ ಎಲ್ಲವೂ ಹೆಣ್ಣಿನ ರೀತಿಯಲ್ಲೇ ಇದೆ ಎಂದಿರುವಿರಿ. ಈ ವಿಷಯವನ್ನು ಮನಸಲ್ಲೇ ಇಟ್ಟುಕೊಂಡು ಕೊರಗದೆ ನಿಮ್ಮ ಅಪ್ಪ, ಅಮ್ಮನ ಬಳಿ ವಿಷಯ ತಿಳಿಸಿ. ಒಬ್ಬ ಮನೋವೈದ್ಯರು, ಎಂಡೋಕ್ರೈನಾಲಾಜಿಸ್ಟರನ್ನು ಭೇಟಿಯಾಗಿ ಸಲಹೆ, ಚಿಕಿತ್ಸೆ ಪಡೆಯಿರಿ.

ಶಸ್ತ್ರಚಿಕಿತ್ಸೆ ಮುಖಾಂತರ ಲಿಂಗ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಸಂಪೂರ್ಣವಾಗಿ ದೈಹಿಕವಾಗಿ ಮಹಿಳೆಯಾಗಲು ಸಾಧ್ಯವಿಲ್ಲವಾದರೂ ಸ್ವಲ್ಪಮಟ್ಟಿಗೆ ಸಾಧ್ಯವಾಗುತ್ತದೆ. ನಂತರ ನಿಮಗೆ ಇಷ್ಟಬಂದ ಹಾಗೆ ಇರಬಹುದು. ಆದರೆ ಅದಕ್ಕೆ ಬಹಳಷ್ಟು ಮಾನಸಿಕ ಸಿದ್ಧತೆ ಬೇಕು. ಮನೋವೈದ್ಯರ ಬಳಿ ಕೌನ್ಸೆಲಿಂಗ್ ಬೇಕೇಬೇಕು.