ಲೈಫ್‌ಸ್ಟೈಲ್

ಪತ್ನಿಗೆ ತೃಪ್ತಿ ನೀಡಲಾಗದೇ ನೊಂದು ಹೋಗಿದ್ದೇನೆ- ಆಕೆಯನ್ನು ಕಳೆದುಕೊಳ್ಳುವ ಭಯ ಕಾಡುತ್ತಿದೆ... ಪ್ಲೀಸ್ ಪರಿಹಾರ ಹೇಳಿ

ವಯಸ್ಸು 24. ತುಂಬಾ ಆರೋಗ್ಯದಿಂದ ಇದ್ದೇನೆ. ಆದರೆ ಮೊದಲಿನಿಂದಲೂ ನನ್ನದೊಂದು ಕೆಟ್ಟಚಟವಿತ್ತು. ಅದು ಹಸ್ತಮೈಥುನ ಮಾಡಿಕೊಳ್ಳುವುದು. ನನಗೆ ಬಿ.ಪಿ., ಶುಗರ್ ಯಾವುದೇ ಇಲ್ಲ. ಆದರೆ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರಿಂದಲೋ ಏನೋ. ನಾನು ಸಂಭೋಗ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗಾತಿಯನ್ನು ಮುಟ್ಟುತ್ತಿರುವಾಗಲೇ ವೀರ್ಯ ಹೊರಹೋಗುತ್ತದೆ. ಇದರಿಂದ ನನ್ನ ಸಂಗಾತಿಗೆ ನನ್ನ ಮೇಲೆ ಜಿಗುಪ್ಸೆ ಬಂದುಬಿಟ್ಟಿದೆ. ಆಕೆಯನ್ನು ಕಳೆದುಕೊಳ್ಳುವ ಭಯ ಕೊಡುತ್ತಿದೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.

ಉತ್ತರ: ಹಸ್ತ ಮೈಥುನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ. ನಿಮಗೆ ಶೀಘ್ರ ಸ್ಖಲನದ ಸಮಸ್ಯೆ ಇದೆ ಎನಿಸುತ್ತದೆ. ನೀವು ಆತಂಕ ಮಾಡಿಕೊಂಡಿದ್ದೀರೇನೋ ಅನಿಸುತ್ತದೆ. ಮನಸ್ಸಿನಲ್ಲಿಯೇ ಮಾರ್ಗದಶ್ರನ ಮಾಡಿಕೊಳ್ಳಿ.

ಲೈಂಗಿಕ ಕ್ರಿಯೆಯ ಹೊರತಾದ ಸಮಯದಲ್ಲಿ ಬೇಗ ಸ್ಖಲನವಾಗಬಾರದು ಎಂದು ಪದೇಪದೆ ಹೇಳಿಕೊಳ್ಳಿ. ಹೆಚ್ಚು ಹೊತ್ತು ನಿಯಂತ್ರಿಸುವಂತೆ ದೇಹಕ್ಕೆ ಆದೇಶ ನೀಡಿ. ದೇಹ, ಮನಸ್ಸುಗಳೆರಡೂ ಒಂದಕ್ಕೊಂದು ಪೂರಕವಾಗಿ ದೇಹದ ರಸದೂತಗಳ ಸ್ರವಿಸುವಿಕೆ ಹೆಚ್ಚಾಗಿ ಮಿದಳು ಲೈಂಗಿಕ ಆಸಕ್ತಿಗೆ ಆದೇಶ ನೀಡುತ್ತದೆ. ನೀವು ಸಂತೋಷವಾಗಿದ್ದಷ್ಟೂ ಖುಷಿಯ ಅಂಶ ಹೊರಹಾಕುವ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ.