ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಮದುವೆಯಾಗಿ 10 ವರ್ಷಕ್ಕೇನೇ ಪತ್ನಿ ಇಂಟರೆಸ್ಟ್​ ಕಳೆದುಕೊಂಡರೆ ನಾನು ಏನು ಮಾಡಲಿ?

ನನ್ನ ಪತ್ನಿಗೆ 35 ವರ್ಷ. ಮದುವೆಯಾಗಿ 10 ವರ್ಷಗಳಾದವು. 9 ವರ್ಷದ ಮಗಳಿದ್ದಾಳೆ. ಒಂದು ವರ್ಷದಿಂದ ನಾನು ನನ್ನ ಪತ್ನಿ ರಾತ್ರಿ ಸೇರುವುದನ್ನು ಬಿಟ್ಟಿದ್ದೀವಿ. ಯಾಕೆಂದರೆ ನಾನು ಅವಳನ್ನು ಮುಟ್ಟೋಕೆ ಬಂದಾಗ ಅವಳು ಸಿಡಿಮಿಡಿಗೊಳ್ಳುತ್ತಾಳೆ. ಅಲರ್ಜಿ ಬೇರೆ ಶುರುವಾಗಿದೆ ಅವಳಿಗೆ. ಲೈಂಗಿಕ ಸಂಬಂಧದಲ್ಲಿ ಅವಳಿಗೆ ಆಸಕ್ತಿ ಇಲ್ಲ. ಸಂಭೋಗವೆಂದರೆ ಅಸಹ್ಯಪಡುತ್ತಾಳೆ. ಇದನ್ನು ನನಗೆ ತುಂಬ ಬೇಜಾರು ಆಗಿದೆ. ದಯವಿಟ್ಟು ಇದಕ್ಕೆ ಏನು ಪರಿಹಾರವಿದೆ ಅಂತ ತಿಳಿಸಿ.

ಉತ್ತರ: ನೀವು ನಿಮ್ಮ ಪತ್ರದಲ್ಲಿ ಪತ್ನಿಯ ಅಲರ್ಜಿಯ ಬಗ್ಗೆ ತಿಳಿಸಿದ್ದೀರಿ. ಆದರೆ ಅದರ ಬಗ್ಗೆ ಸ್ಪಷ್ಟವಾಗಿ ವಿವರ ನೀಡಿಲ್ಲ. ಒಮ್ಮೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಲ್ಲಿ ಅಲರ್ಜಿಯ ತೊಂದರೆ ಸರಿಪಡಿಸಿಕೊಳ್ಳಬಹುದು.

ಅಲರ್ಜಿಯಿಂದಾಗಿ ಲೈಂಗಿಕ ಜೀವನವನ್ನೇಕೆ ಕಳೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿ. ಅಷ್ಟಕ್ಕೂ ಕೇವಲ ಅಲರ್ಜಿ ಒಂದೇ ಕಾರಣವೆ ಎಂಬುದರ ಬಗ್ಗೆ ನೀವೂ ಗಮನ ಹರಿಸಿ. ಏಕೆಂದರೆ ದಂಪತಿ ನಡುವೆ ಲೈಂಗಿಕ ಸಮಸ್ಯೆ ಬಂದಾಗ ಅದು ಕೇವಲ ದೈಹಿಕವಾಗಿ ಅಷ್ಟೇ ಇರಲಾರದು, ವೈವಾಹಿಕ ಬದುಕು ಭಾವನಾತ್ಮಕತೆಯ ಮೇಲೂ ನಿಂತಿರುತ್ತದೆ. ಆದ್ದರಿಂದ ನೀವಿಬ್ಬರೂ ಪರಸ್ಪರ ಸಂತೋಷದಿಂದ, ನೆಮ್ಮದಿಯಿಂದ ದಾಂಪತ್ಯ ನಡೆಸಬೇಕಾಗುತ್ತದೆ.

ಪರಸ್ಪರ ಪ್ರೀತಿಯ ನೋಟ, ನಗು, ಮಾತು, ಸ್ಪರ್ಶ ಎಲ್ಲವೂ ಇದ್ದಲ್ಲಿ ಮಾತ್ರ ಇಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಹಾಗಾಗಿ ಈ ಕುರಿತು ಕೂಡ ಯೋಚಿಸಿ. ನಿಮ್ಮ ಪತ್ನಿಯನ್ನು ಒಮ್ಮೆ ಲೈಂಗಿಕ ತಜ್ಞರು ಹಾಗೂ ಆಪ್ತಸಮಾಲೋಚಕರ ಬಳಿ ಭೇಟಿ ಮಾಡಿಸಿ ಕೌನ್ಸೆಲಿಂಗ್ ಕೊಡಿಸಿ.

ಡಾ.ವಸುಂಧರಾ ಭೂಪತಿಯವರ ಇನ್ನಷ್ಟು ಸಲಹೆಗೆ ಕ್ಲಿಕ್ಕಿಸಿ: