ಲೈಫ್‌ಸ್ಟೈಲ್

ಮನೆಯಲ್ಲೇ ಮಾಡಿ ಸ್ಪೈಸಿ ಟೇಸ್ಟಿ ಸಮೋಸಾ; ಇಲ್ಲಿದೆ ತಯಾರಿಸುವ ವಿಧಾನ | Recipe

ಭಾರತದಲ್ಲಿ ಕಾಣಸಿಗುವ ವೈರಟಿ ಆಹಾರ ನೋಡಿದ್ರೆ ತಿಳಿಯುತ್ತೆ ನಾವು ಆಹಾರ ಪ್ರಿಯರು ಅಂಥಾ. ಕೆಲವರು ಸಿಹಿ ಮತ್ತೆಕೆಲವರು ಖಾರವನ್ನು ಇಷ್ಟಪಡುತ್ತಾರೆ. ಆದರೆ ಚಿಕ್ಕವರಿಂದ ಹಿರಿಯರು ಇಷ್ಟ ಪಡುವ ಸಂಜೆ ಸಮಯದ್ಲಿ ತಿನ್ನಬೇಕೆನ್ನಿಸುವ ತಿನಿಸು ಎಂದರೆ ಅದು ಸಮೋಸಾ.(Recipe)

ಎಷ್ಟೋ ಮಂದಿಗೆ ಮನೆಯಲ್ಲೆ ಸಮೋಸಾ ಮಾಡುವ ಆಸೆ ಇರುತ್ತದೆ. ಮನೆಮಂದಿಗೆ ಬಿಸಿಬಿಸಿಯಾದ ಸಮೋಸಾ ಮಾಡಿ ಸವಿಯಲು ನೀಡದರೆ ಅದೆನೋ ಒಂದು ರೀತಿ ತೃಪ್ತಿ. ತಿಂಡಿ ತಿನಿಸುಗಳನ್ನು ಮಾಡುವುದಕ್ಕಿಂತ ಅದನ್ನು ಇಷ್ಟಪಟ್ಟು ಸವಿದರೆ ಹೆಚ್ಚು ಖುಷಿ ಎನ್ನುತ್ತಾರೆ ನಮ್ಮ ಹೆಂಗಳೆಯರು. ಆದರೆ ಮನೆಯಲ್ಲಿ ಸಿಂಪಲ್​ ಆಗಿ ಸಮೋಸಾ ಮಾಡುವುದು ಹೇಗೆ. ನಿಮಗಾಗಿಯೇ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಸಮೋಸಾ ಮಾಡಲು ಬೇಕಾಗುವ ಪದಾರ್ಥಗಳು

  • ಹಿಟ್ಟು
  • ಸೆಲರಿ
  • ಉಪ್ಪು
  • ಅಡುಗೆ ಎಣ್ಣೆ
  • ಈರುಳ್ಳಿ
  • ಹಸಿರು ಮೆಣಸಿನಕಾಯಿ
  • ಆಲೂಗಡ್ಡೆ
  • ಬಟಾಣಿ
  • ಅರಿಶಿನಪುಡಿ
  • ಚಿಲ್ಲಿ ಪೌಡರ್​​
  • ಧನಿಯಾ

ಸಮೋಸಾ ಮಾಡುವ ವಿಧಾನ

ಮೊದಲು ಪಾತ್ರೆಯಲ್ಲಿ ಹಿಟ್ಟು, ಉಪ್ಪು ಮತ್ತು ಸೆಲರಿ ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ತಯಾರಿಸಿ. ಅದರ ಮೇಲೆ ಅಡುಗೆ ಎಣ್ಣೆಯನ್ನು ಅಪ್ಲೈ ಮಾಡಿ ಬಟ್ಟೆಯಲ್ಲಿ ಸುತ್ತಿಟ್ಟು 15 ನಿಮಿಷ ಬಿಡಿ. ಈಗ ಸ್ಟಫಿಂಗ್​​ಗಾಗಿ ಬಿಸಿ ಪ್ಯಾನ್​ನಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ, ಬಟಾಣಿ, ಅರಿಶಿನ ಪುಡಿ, ಚಿಲ್ಲಿ ಪೌಡರ್​​ ಮತ್ತು ಇತರ ಅನೇಕ ಮಸಾಲೆಗಳನ್ನು ಸೇರಿಸಿ ಮಿಶ್ರಣವನ್ನು ತಯಾರಿಸಬೇಕು. ಬಳಿಕ ಹಿಟ್ಟನ್ನು ತೆಳುವಾಗಿ ಲಟ್ಟಿಸಿ ತ್ರಿಕೋನ ಆಕಾರ ಮಾಡಿ. ಅದರೊಳಗೆ ಸಿದ್ಧಪಡಿಸಿರುವ ಆಲೂಗೆಡ್ಡೆ ಸ್ಟಫಿಂಗ್​ ಹಾಕಿ ನೀರಿನ ಸಹಾಯದಿಂದ ಅಂಚುಗಳನ್ನು ಅಂಟಿಸಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಎಲ್ಲಾ ಸಮೋಸಾಗಳನ್ನು ಬೇಯಿಸಿ. ಅದು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾದಾಗ ಅದನ್ನು ಹೊರತೆಗೆದು ಚಟ್ನಿಯೊಂದಿಗೆ ಬಡಿಸಿ.