ಲೈಫ್‌ಸ್ಟೈಲ್

ಮನೆಯಲ್ಲೇ ಮಾಡಿ ಡ್ರೈಫ್ರೂಟ್​​ ಗುಲಾಬ್ ಜಾಮೂನ್; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಜಾಮೂನ್​​ ಭಾರತದ ಪ್ರಸಿದ್ಧ ಡೆಸರ್ಟ್ ರೆಸಿಪಿ. ಇದನ್ನು ಮಾಡಲು, ಅವುಗಳನ್ನು ಮೊದಲು ಡೀಪ್ ಫ್ರೈ ಮಾಡಿ ನಂತರ ಸಕ್ಕರೆ ಪಾಕದಲ್ಲಿ ಹಾಕಬೇಕು. ದೇಶದ ಯಾವುದೇ ಪ್ರದೇಶಕೆ ಹೋದರು ಜಾಮೂನ್​​ ಇಷ್ಟಪಡದವರೇ ಇಲ್ಲ. ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಹೊಸ ವಿಧಾನವನ್ನು ಇಲ್ಲಿ ನಿಮಗೆ ಹೇಳುತ್ತಿದ್ದೇವೆ. ಈ ವಿಧಾನದಲ್ಲಿ ಗುಲಾಬ್ ಜಾಮೂನ್ ಒಳಗೆ ಹಲವು ರೀತಿಯ ಡ್ರೈಫ್ರೂಟ್ಸ್​ ಅನ್ನು ಸೇರಿಸಿ ಮಾಡಲಾಗುತ್ತದೆ. ನೀವು ಇದನ್ನು ಸ್ಟಫ್ಡ್ ಗುಲಾಬ್ ಜಾಮೂನ್ ಎಂದು ಕರೆಯಬಹುದು. (Recipe)

ಸ್ಟಫಿಂಗ್ ಮೂಲಕ ಗುಲಾಬ್​​ ಜಾಮೂನ್​​​​ ಅನ್ನು ಇನ್ನಷ್ಟು ವಿಶೇಷವಾಗಿ ಮಾಡಬಹುದು. ಇದರೊಂದಿಗೆ ನಿಮ್ಮ ಗುಲಾಬ್ ಜಾಮೂನ್ ಕೂಡ ವಿಶೇಷ ಪರಿಮಳವನ್ನು ಪಡೆಯುತ್ತದೆ. ಹಾಗಾದ್ರೆ ಅದನ್ನು ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಡ್ರೈಫ್ರೂಟ್ಸ್​ ಗುಲಾಬ್​ ಜಾಮೂನ್​ ಮಾಡಲು ಬೇಕಾಗುವ ಪದಾರ್ಥಗಳು

  • 200 ಗ್ರಾಂ ಖೋಯಾ
  • 6 ಟೇಬಲ್​ಸ್ಪೂನ್​​​ ಗುಲಾಬ್​​ ಜಾಮೂನ್​ ಮಿಕ್ಸ್​​​
  • 1/2 ಕಪ್ ಮಿಶ್ರ ಡ್ರೈಫ್ರೂಟ್ಸ್​​
  • 3 ಕಪ್ ಸಕ್ಕರೆ
  • ಅಗತ್ಯವಿರುವಂತೆ ಏಲಕ್ಕಿ
  • ಅಗತ್ಯವಿರುವಷ್ಟು ಕೇಸರಿ
  • ಹಾಲು
  • 4 ಟೀಸ್ಪೂನ್ ಬೇಕಿಂಗ್ ಪೌಡರ್
  • ಅಡುಗೆ ಎಣ್ಣೆ

ಮಾಡುವ ವಿಧಾನ

  • ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ಖೋಯಾವನ್ನು ತೆಗೆದುಕೊಂಡು ಹಿಟ್ಟನ್ನು ಬೆರೆಸಿದ ರೀತಿಯಲ್ಲಿಯೇ ಚೆನ್ನಾಗಿ ಮ್ಯಾಶ್ ಮಾಡಿ. ಇದರ ನಂತರ ಗುಲಾಬ್​​ ಜಾಮೂನ್​​​ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು ಕನಿಷ್ಠ 4 ರಿಂದ 5 ನಿಮಿಷಗಳ ಕಾಲ ಬೆರೆಸುವುದರಿಂದ ಅದು ಮೃದುವಾಗುತ್ತದೆ. ಖೋಯಾ ಮತ್ತು ಹಿಟ್ಟನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸುವುದರಿಂದ ಹಿಟ್ಟು ಸಂಪೂರ್ಣವಾಗಿ ಮೃದುವಾಗುತ್ತದೆ. ಇದು ಗುಲಾಬ್ ಜಾಮೂನ್ ಅನ್ನು ಮೃದುಗೊಳಿಸುತ್ತದೆ. ಈಗ ಅದಕ್ಕೆ ಚಿಟಿಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿ. ಇದರ ನಂತರ ಅದಕ್ಕೆ ಅಡಿಗೆ ಸೋಡಾ ಸೇರಿಸಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
  • ಮತ್ತೊಂದು ಬೌಲ್​ನಲ್ಲಿ ಡ್ರೈ ಫ್ರೂಟ್ಸ್ ತೆಗೆದುಕೊಳ್ಳಿ, ಜತೆಗೆ ಅದಕ್ಕೆ ಖೋಯಾ, ಕೇಸರಿ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ.
  • ಒಂದು ಪ್ಯಾನ್ ತೆಗೆದುಕೊಂಡು ಬಾಣಲೆಯಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಏಲಕ್ಕಿ ಪುಡಿ, ಕೇಸರಿ ದಳಗಳನ್ನು ಸೇರಿಸಿ ಮತ್ತು ದಪ್ಪವಾಗುವವರೆಗೆ ಚೆನ್ನಾಗಿ ಬೇಯಿಸಿ.(ಸಕ್ಕರೆ ಪಾಕ ರೆಡಿಯಾಗಿದೆ)
  • ಈಗ ಹಿಟ್ಟಿನಿಂದ ಸಣ್ಣ ಚೆಂಡಿನಂತಹ ಉಂಡೆಗಳನ್ನು ತಯಾರಿಸಿ ನಂತರ ಮಧ್ಯದಲ್ಲಿ ಹೂರಣವನ್ನು ತುಂಬಿಸಿ ಅದನ್ನು ಮುಚ್ಚಿ. ಒಂದು ಪ್ಯಾನ್ ತೆಗೆದುಕೊಳ್ಳಿ. ಪ್ಯಾನ್​ನಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾಗಲಿ. ನಂತರ ಅದರಲ್ಲಿ ಸಿದ್ಧಪಡಿಸಿದ ಗುಲಾಬ್ ಜಾಮೂನ್‌ಗಳನ್ನು ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಕಲರ್​ ಬರುವವರೆಗೂ ಬೇಯಿಸಿ.. ಈಗ ಅವುಗಳನ್ನು ತೆಗೆದುಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಈ ಗುಲಾಬ್ ಜಾಮೂನ್​​ಗಳನ್ನು ಸಿದ್ಧವಿರುವ ಸಕ್ಕರೆ ಪಾಕದಲ್ಲಿ ಅದ್ದಿ. ಅವುಗಳನ್ನು 2 ರಿಂದ 3 ಗಂಟೆಗಳ ಕಾಲ ಹೀಗೆ ನೆನೆಯಲು ಬಿಡಿ.ಈಗ ನಿಮ್ಮ ಸ್ಟಫ್ಡ್ ಗುಲಾಬ್ ಜಾಮೂನ್‌ಗಳು ಸಿದ್ಧವಾಗಿವೆ.