ಲೈಫ್‌ಸ್ಟೈಲ್

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ ಬರುವುದಿಲ್ಲ ಎಂದು ಆಲೋಚಿಸುತ್ತಿದ್ದೀರಾ. ಈಗೆ ಮನೆಯಲ್ಲಿಯೇ ನೀವು ಹೋಟೆಲ್​ನಲ್ಲಿ ಸಿಗುವಂತ ರುಚಿಕರ ಮಸಾಲಾ ವಡೆ ಮನೆಯಲ್ಲೆ ಮಾಡಿ. ಸಂಜೆ ತಿಂಡಿಯಾಗಿ ಮಸಾಲೆಯುಕ್ತ ಏನನ್ನಾದರೂ ಮಾಡಲು ಬಯಸಿದರೆ ನಿಮಗಾಗಿಯೇ ಈ ರೆಸಿಪಿ.(Recipe)

ಮಸಾಲಾ ವಡೆ ಮಾಡಲು ಬೇಕಾಗುವ ಪದಾರ್ಥಗಳು

  • 1 ಕಪ್ ನೆನೆಸಿದ ಕಡಲೆಬೇಳೆ
  • 1/2 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ
  • 2 ಹಸಿ ಮೆಣಸಿನಕಾಯಿ
  • 1/4 ಕಪ್ ಕೊತ್ತಂಬರಿ ಸೊಪ್ಪು 1 ಇಂಚು ತುರಿದ ಶುಂಠಿ
  • 1/2 ಟೀಚಮಚ ಜೀರಿಗೆ
  • 1/2 ಟೀಚಮಚ ಇಂಗು
  • 1/2 ಟೀಚಮಚ ಅರಿಶಿನ ಪುಡಿ
  • 1/2 ಟೀಚಮಚ ಚಿಲ್ಲಿ ಪೌಡರ್​​
  • 1/2 ಧನಿಯಾ ಪುಡಿ
  • 1/4 ಟೀಚಮಚ ಗರಂ ಮಸಾಲ
  • ರುಚಿಗೆ ತಕ್ಕಷ್ಟು ಉಪ್ಪು
  • ಸ್ವಲ್ಪ ತುರಿದ ಕಾಯಿ
  • ಅಡುಗೆ ಎಣ್ಣೆ

ಮಸಾಲಾ ವಡೆ ಮಾಡುವ ವಿಧಾನ

ಮಸಾಲಾ ವಡೆ ಮಾಡಲು ಮೊದಲು ನೆನೆಸಿದ ಬೇಳೆಯನ್ನು ನೆನಸಿರಬೇಕು. ಬಳಿಕ ನೆನಸಿದ ಬೇಳೆ ಮತ್ತು ತೆಂಗಿನತುರಿಯನ್ನು ಹಾಕಿ ಮಿಕ್ಸರ್​ನಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ತುಂಬಾ ನುಣ್ಣಗೆ ಇರಬಾರದು ಎಂಬುದನ್ನು ನೆನಪಿಡಿ. ನಂತರ ನುಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಜೀರಿಗೆ, ಇಂಗು, ಅರಿಶಿನ ಪುಡಿ, ಚಿಲ್ಲಿ ಪೌಡರ್​​​, ಉಪ್ಪು, ಗರಂ ಮಸಾಲ ಮತ್ತು ಧನಿಯಾ ಪುಡಿಯನ್ನು ರುಬ್ಬಿದ ಬೇಳೆ ಪೇಸ್ಟೆಗೆ ಸೇರಿಸಿ ಮಿಶ್ರಣ ಮಾಡಿ

ಈಗ ಒಂದು ಪ್ಯಾನ್​ ನಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ ಚೆನ್ನಾಗಿ ಬಿಸಿಯಾದಾಗ ರೆಡಿಯಾಗಿರುವ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿ ನಿಮಗೆ ಬೇಕಾದ ಆಕಾರಗೊಳಿಸಿ ಎಣ್ಣೆಯಲ್ಲಿ ಹಾಕಿ, ಗೋಲ್ಡನ್​ ಬಣ್ಣಕ್ಕೆ ಬರುವವರೆಗೂ ಚೆನ್ನಾಗಿ ಬೇಯಿಸಿ. ಬಳಿಕ ಅದನ್ನು ಒಂದು ತಟ್ಟೆಯಲ್ಲಿ ತೆಗೆದು ಮೊಸರು ಅಥವಾ ಚಟ್ನಿಯೊಂದಿಗೆ ಸವಿಯಲು ಬಡಿಸಿ.