Calories: ಇಂದಿನ ದಿನಗಳಲ್ಲಿ ಹೊರಗಡೆ ಊಟ ಮಾಡುವುದು ಒಂದು ಆಧುನಿಕ ಜೀವನದ ಅವಿಭಾಜ್ಯ ಅಂಶವಾಗಿದೆ. ಕೆಲಸದ ಸಮಯದಲ್ಲಿ ಅಥವಾ ಸ್ನೇಹಿತರೊಂದಿಗೆ ಸ್ವಲ್ಪ ಹೊರಗೆ ಊಟಕ್ಕೆ ಹೋಗುವುದು, ಭಕ್ಷ್ಯ ಭೋಜನಗಳನ್ನು ಸೇವಿಸುವುದನ್ನು ಮಾಡುತ್ತಾರೆ. ಪ್ರಾಮಾಣಿಕವಾಗಿ ಹೇಳ ಬಯಸುವುದಾದರೆ, ಹೊರಗೆ ಊಟ ಮಾಡುವುದು ಎಂದರೆ ನೀವು ಊಟ ಮಾಡಬೇಕಾದಕ್ಕಿಂತ ಹೆಚ್ಚು ತಿನ್ನುವುದಾಗಿದೆ. ಇದು ಯಾವಾಗಲೂ ಆರೋಗ್ಯಕರ ಆಯ್ಕೆಯಾಗಿರುವುದಿಲ್ಲ.
ಪೌಷ್ಟಿಕ ತಜ್ಞ ರೆಮಿ ಡಿವೈನ್ ತೋರಿಸುವಂತೆ ರೆಸ್ಟೋರೆಂಟ್ಗಳಲ್ಲಿ ಹುರಿದ ತಿಂಡಿಗಳಿಂದ ಪ್ರಾರಂಭಿಸಿ ಸಕ್ಕರೆ ಪಾನೀಯಗಳವರೆಗೆ, ಈ ರೀತಿಯ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯಬಹುದು. ಯಾವುದೇ ತಪ್ಪಿತಸ್ಥ ಭಾವನೆಗಳಿಲ್ಲದೇ ಸೇವಿಸಬಹುದು ಎಂದು ಹೇಳಿದ್ದಾರೆ.
ಹುರಿದ, ಗರಿಗರಿಯಾದ, ಕೆನೆ ಭರಿತ ಭಕ್ಷ್ಯಗಳ ಬದಲಿಗೆ ಗ್ರಿಲ್ ಮಾಡಿದ ಬದಲಿಗೆ ಗ್ರಿಲ್ ಮಾಡಿದ, ಬೇಯಿಸಿದ ಆಹಾರಗಳನ್ನು ತಿನ್ನುವಂತೆ ಇವರು ತಿಳಿಸಿದ್ದಾರೆ. ಈ ಅಡುಗೆ ವಿಧಾನಕ್ಕೆ ಕಡಿಮೆ ಎಣ್ಣೆಯನ್ನು ಬಳಸುತ್ತೇವೆ. ಹಾಗೆಯೇ ಇದರಲ್ಲಿ ಎಲ್ಲಾ ಪೋಷಕಾಂಶಗಳು ಸದೃಢವಾಗಿರುತ್ತದೆ. ಹಾಗಾಗಿ ಈ ಹಗುರವಾದ ಆಹಾರಗಳ ಆಯ್ಕೆಯನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಊಟ ಮಾಡುವಂತಹ ಸಮಯದಲ್ಲಿ ನೀರನ್ನು ಬಿಟ್ಟು ಯಾವುದೇ ಪಾನೀಯಗಳನ್ನು ಸೇವಿಸಬೇಡಿ ಎಂದು ತಜ್ಞರು ತಿಳಿಸಿದ್ದಾರೆ. ಸೋಡಾ, ಕಾಕ್ಟೇಲ್‌ಗಳು ಅಥವಾ ಸಿಹಿಗೊಳಿಸಿದ ಐಸ್ಡ್ ಟೀ ಮುಂತಾದ ಪಾನೀಯಗಳು ಕ್ಯಾಲೊರಿಗಳನ್ನು ಹೆಚ್ಚಿಸಿ ದೇಹದಲ್ಲಿ ಅಧಿಕ ಸಕ್ಕರೆಯನ್ನು ಸೇರಿಸುತ್ತವೆ. ಇದು ದೇಹವನ್ನು ಹೈಡ್ರೀಕರಿಸುವುದಿಲ್ಲ. ಬದಲಿಗೆ ಹೊಟ್ಟೆ ತುಂಬಿದಂತೆ ಅನುಭವ ಉಂಟು ಮಾಡುತ್ತದೆ.
ಊಟ ಮಾಡುವಾಗ ನೆಂಚಿಕೊಳ್ಳಲು ಪ್ರೈ ಮಾಡಿದ ಪದಾರ್ಥಗಳನ್ನು ಬಳಸುವ ಬದಲಿಗೆ ತರಕಾರಿಗಳು, ಸಲಾಡ್ಗಳನ್ನು ಬಳಸುವಂತೆ ಶಿಫಾರಸ್ಸು ಮಾಡಿದ್ದಾರೆ. ಇದು ಕ್ಯಾಲೋರಿಗಳನ್ನು ಕಡಿಮೆ ಮಾಡಿ ದೇಹಕ್ಕೆ ಫೈಬರ್ ಮತ್ತು ವಿಟಮಿನ್ಗಳನ್ನು ನೀಡುತ್ತದೆ.
ಕೋಳಿ, ಮೀನು ಹಾಗೂ ಟರ್ಕಿಯಂತಹ ಪ್ರೊಟೀನ್ ಇರುವಂತಹ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಪೌಷ್ಟಿಕತಜ್ಞರು ಸೂಚಿಸುತ್ತಾರೆ. ಇದು ನೇರವಾಗಿ ಪ್ರೊಟೀನ್ ದೇಹಕ್ಕೆ ಪ್ರೊಟೀನ್ ನೀಡುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿಸುವಂತೆ ಮಾಡುತ್ತದೆ. ಹಾಗೂ ದಿನವಿಡೀ ಶಕ್ತಿಯನ್ನು ಸ್ಥಿರವಾಗಿಸುತ್ತದೆ.
ಗರಿ ಗರಿಯಾದ ಕರಿದಂತಹ ಆಹಾರ ಪದಾರ್ಥಗಳನ್ನು ಸೇವಿಸುವಂತಹ ಸಂದರ್ಭದಲ್ಲಿ ಸಾಸ್ಗಳನ್ನು ಬಳಸುತ್ತೀರಿ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಅವುಗಳ ಮೇಲೆ ನಿಯಂತ್ರಣ ಇಡುವುದು ಒಳ್ಳೆಯದು ಎಂದು ಪೌಷ್ಟಿಕ ತಜ್ಞರು ಸೂಚನೆ ನೀಡುತ್ತಾರೆ.
ಆಹಾರಗಳನ್ನು ಸೇವಿಸುವಾಗ ಕಂದು ಅಕ್ಕಿ, ಕ್ವಿನೋವಾ ಅಥವಾ ಸಿಹಿ ಗೆಣಸಿನಂತಹ ಧಾನ್ಯಗಳನ್ನು ಆರಿಸಿಕೊಳ್ಳಿ. ಇವು ನಿಧಾನವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ಗಳಾಗಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಟ್ಟು, ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ.
ಊಟ ಮಾಡುವಾಗ ಯಾವುದೇ ಒತ್ತಡವಿಲ್ಲದೇ ನಿಧಾನವಾಗಿ ಮಾಡಬೇಕೆಂದು ತಿಳಿಸುತ್ತಾರೆ. ಜಾಗೃತೆಯಿಂದ ತಿನ್ನುವುದರಿಂದ ಕಡಿಮೆ ಊಟ ಮಾಡುತ್ತೀರಿ. ಹಾಗೆಯೆ ಆಹಾರವನ್ನು ಆನಂದಿಸಿ ತಿನ್ನುತ್ತೀರಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.