ಪರಂಗಿ ಹಣ್ಣಿನ ಜೊತೆಗೆ ಅವುಗಳ ಬೀಜಗಳು ಸಹ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ಪರಂಗಿ ಹಣ್ಣು ತುಂಬಾ ಆರೋಗ್ಯಕರ ಹಣ್ಣು. ಇದನ್ನು ಆಗಾಗ ಸೇವಿಸುತ್ತಿರಬೇಕು. ಮಾಮೂಲಿಯಾಗಿ ನಾವು ಸಿಪ್ಪೆಯನ್ನು ತೆಗೆದು, ಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಬೀಜಗಳನ್ನು ತೆಗೆದುಹಾಕಿ, ತುಂಡುಗಳಾಗಿ ಕತ್ತರಿಸಿ ತಿನ್ನುತ್ತೇವೆ. ಆದರೆ, ಪಪ್ಪಾಯಿ ಹಣ್ಣುಗಳಲ್ಲಿ ಮಾತ್ರವಲ್ಲದೆ ಬೀಜಗಳಲ್ಲಿಯೂ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಬೀಜಗಳನ್ನು ತಿನ್ನದೇ ಎಸೆಯಬಾರದು ಎಂದು ಹೇಳಲಾಗುತ್ತದೆ. ನೀವು ಬೀಜಗಳ ಪ್ರಯೋಜನಗಳನ್ನು ತಿಳಿದರೆ ನಿಜವಾಗಿಯೂ ಅದನ್ನು ಎಸೆಯದೇ ತಿನ್ನುತ್ತೀರಿ.
ಬೀಜಗಳಿಂದ ಏನೇನು ಪ್ರಯೋಜನಾ ಇವೆ ಎಂಬುದನ್ನು ನಾವೀಗ ನೋಡೋಣ...
* ಆರೋಗ್ಯಕರ ಕರುಳು: ಪರಂಗಿ ಬೀಜಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಕರುಳಿನಲ್ಲಿ ಸಂಗ್ರಹವಾದ ವಿಷಕಾರಿ ಅಂಶವನ್ನು ಸುಲಭವಾಗಿ ಹೊರಹಾಕಲಾಗುತ್ತದೆ ಮತ್ತು ಸ್ವಚ್ಛಗೊಳಿಸುತ್ತದೆ. ಇದು ಕರುಳಿನಿಂದ ಮಾತ್ರವಲ್ಲದೆ ಇಡೀ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಇದು ತೂಕವನ್ನು ಹೆಚ್ಚಿಸುವುದಿಲ್ಲ. ಕೆಲವು ಪಪ್ಪಾಯಿ ಬೀಜಗಳನ್ನು ಬೆಳಗ್ಗೆ ತಿನ್ನುವುದು ಕರುಳಿನಲ್ಲಿರುವ ಪರಾವಲಂಬಿಗಳನ್ನು ಕೊಲ್ಲುತ್ತದೆ.
ಕ್ಯಾನ್ಸರ್ ತಡೆಯುತ್ತದೆ: ಪರಂಗಿ ಬೀಜಗಳಲ್ಲಿರುವ ಶಕ್ತಿಶಾಲಿ ಪಾಲಿಫಿನಾಲ್‌ಗಳು ನಮ್ಮ ದೇಹದಲ್ಲಿನ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ. ಅವುಗಳಲ್ಲಿರುವ ಐಸೊಥಿಯೋಸೈನೇಟ್ ಕ್ಯಾನ್ಸರ್ ಕೋಶಗಳ ರಚನೆ ಮತ್ತು ಬೆಳವಣಿಗೆಯನ್ನು ತಡೆಯುತ್ತದೆ.
* ರಾಡಿಕಲ್ಗಳನ್ನು ತಪ್ಪಿಸುತ್ತದೆ: ಪಪ್ಪಾಯಿ ಬೀಜಗಳಲ್ಲಿ ಪ್ರೋಟೀನ್ಗಳು, ಕೊಬ್ಬುಗಳು ಮತ್ತು ಫೈಬರ್ ಸಮೃದ್ಧವಾಗಿವೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಇತರ ಖನಿಜಗಳನ್ನು ಹೊಂದಿರುತ್ತದೆ. ಆಲ್ಕಲಾಯ್ಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಅತ್ಯಂತ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು. ಇವು ದೇಹದಲ್ಲಿ ರಾಡಿಕಲ್‌ಗಳ ರಚನೆಯನ್ನು ತಡೆಯುತ್ತದೆ. ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
* ಕೊಲೆಸ್ಟ್ರಾಲ್ ಕಡಿಮೆ: ಈ ಹಣ್ಣಿನ ಬೀಜಗಳಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಅವು ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ. ಇದು ಉತ್ತಮ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. (ಏಜೆನ್ಸೀಸ್)