ಲೈಫ್‌ಸ್ಟೈಲ್

ಐವರಲ್ಲಿ ಒಬ್ಬರಿಗೆ ಕೋವಿಡ್ 19 ರಿಸ್ಕ್​ ಭಾರಿ ಅಪಾಯಕಾರಿ- ಲ್ಯಾನ್ಸೆಟ್ ಗ್ಲೋಬಲ್​ ಹೆಲ್ತ್​ ವರದಿ

ಲಂಡನ್​: ಜಾಗತಿಕವಾಗಿ ಐವರಲ್ಲಿ ಒಬ್ಬರಿಗೆ ಕೋವಿಡ್​ 19 ರಿಸ್ಕ್ ಭಾರಿ ಅಪಾಯಕಾರಿ. ಸದ್ಯದ ವೈದ್ಯಕೀಯ ಸನ್ನಿವೇಶಗಳನ್ನು ಈ ಅಪಾಯವನ್ನು ತಂದೊಡ್ಡಿದೆ ಎಂದು ದ ಲ್ಯಾನ್ಸೆಟ್​ ಗ್ಲೋಬಲ್ ಹೆಲ್ತ್ ಎಂಬ ಜರ್ನಲ್​ನ ಅಧ್ಯಯನ ವರದಿ ತಿಳಿಸಿದೆ.

ಜಗತ್ತಿನಾದ್ಯಂತ 170 ಕೋಟಿ ಜನ ಅಂದರೆ ಒಟ್ಟು ಜನಸಂಖ್ಯೆಯ ಶೇಕಡ 22 ಕೋವಿಡ್ 19 ಸೋಂಕಿನ ಅಪಾಯ ಎದುರಿಸುತ್ತಿದ್ದಾರೆ. ಈ ಪೈಕಿ ಶೇಕಡ 5 ಪಾಲು 20 ವರ್ಷ ವಯಸ್ಸಿನೊಳಗಿನವರು. ಶೇಕಡ 66ಕ್ಕೂ ಹೆಚ್ಚು ಜನ 70 ವರ್ಷ ಮತ್ತು ಮೇಲ್ಪಟ್ಟವರು. ಹೈ ರಿಸ್ಕ್ ಎದುರಿಸುತ್ತಿರುವವರನ್ನು ಗಮನಿಸಿದರೆ ಶೇಕಡ 6 ಪಾಲು ಪುರುಷರು ಹೈ ರಿಸ್ಕ್​ಗೆ ಒಳಗಾದರೆ ಶೇಕಡ 3 ಪಾಲಷ್ಟೇ ಮಹಿಳೆಯರಿಗೆ ಹೈ ರಿಸ್ಕ್​ ಇದೆ. ಇದನ್ನೂ ಓದಿ: ಕೊವಿಡ್​-19ಗೆ ಯಾರೂ ಭಯಪಡಬೇಡಿ…ಭಾರತ ಸಮರ್ಥವಾಗಿ ಹೋರಾಡುತ್ತಿದೆ: ಪ್ರಧಾನಿ ಮೋದಿ

ಸಂಶೋಧಕರ ಪ್ರಕಾರ, ಅತಿ ಹೆಚ್ಚು ವಯೋವೃದ್ಧರು ಇರುವ ದೇಶದಲ್ಲಿ ಕೋವಿಡ್ 19 ಸೋಂಕು ಅಪಾಯ ಹೆಚ್ಚು. ಎಚ್​ಐವಿ/ಏಡ್ಸ್​ ಮುಂತಾದ ರೋಗಗಳಿರುವ ಆಫ್ರಿಕನ್ ರಾಷ್ಟ್ರಗಳಲ್ಲಿ ಮತ್ತು ಮಧುಮೇಹ ಹೆಚ್ಚಾಗಿರುವ ಸಣ್ಣಪುಟ್ಟ ರಾಷ್ಟ್ರಗಳು ಈ ಅಪಾಯಕ್ಕೆ ಬೇಗನೆ ತುತ್ತಾಗಬಹುದು. ಇದುವರೆಗಿನ ಡೇಟಾ ಪ್ರಕಾರ, ತೀವ್ರ ಸ್ವರೂಪದ ಕಿಡ್ನಿ ಸಮಸ್ಯೆ, ಮಧುಮೇಹ, ಕಾರ್ಡಿಯೋ ವಾಸ್ಕುಲರ್​ ಸಮಸ್ಯೆ, ತೀವ್ರ ಉಸಿರಾಟದ ಸಮಸ್ಯೆ ಹೊಂದಿದವರೇ ಕೋವಿಡ್ 19 ಸೋಂಕಿಗೆ ಬಲಿಯಾಗಿರುವಂಥದ್ದು.

‘ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರೋಪಿಕಲ್ ಮೆಡಿಸಿನ್​ ನ ಸಂಶೋಧಕರು ನಡೆಸಿದ ಅಧ್ಯಯನ ಇದಾಗಿದ್ದು, ಜಾಗತಿಕ ಜನಸಂಖ್ಯೆಯ ಶೇಕಡ 4 ಭಾಗ ತೀವ್ರತರದ ಕೋವಿಡ್ 19 ಸಮಸ್ಯೆಗೆ ಒಳಗಾಗಲಿದ್ದಾರೆ. ಅಂದರೆ 34.9 ಕೋಟಿ ಜನರಿಗೆ ತೊಂದರೆ ಆಗಲಿದ್ದು ಸೋಂಕು ತಗುಲಿದರೆ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾದ್ದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ. (ಏಜೆನ್ಸೀಸ್)