ಸಂಬಂಧ ಮುರಿಯುವ ಮುನ್ನವೇ ಮತ್ತೊಬ್ಬರ ಜೊತೆ ನಂಟು ಡೇಟಿಂಗ್ ಲೋಕದ ಹೊಸ ಟ್ರೆಂಡ್ .
ಬ್ರೇಕ್ಅಪ್ಗೂ ಮುನ್ನವೇ ಬ್ಯಾಕ್ ಅಪ್ ಪ್ಲಾನ್ ಇದುವೇ ಡೇಟಿಂಗ್ ಲೋಕದ ಹೊಸ ಟ್ರೆಂಡ್ ಮಂಕಿ ಬ್ರಾಂಚಿಂಗ್'.
ಹೆಚ್ಚು ಮಾತನಾಡದೆ ಇರುವುದು, ಭಾವನಾತ್ಮಕವಾಗಿ ಸ್ಪಂದಿಸದೇ ಇರುವುದು, ಇಗ್ನೋರ್ ಮಾಡುವುದು ಬ್ರೇಕಪ್ನ ಸೂಚನೆ.
Monkey Branching New Dating Trend: ಹೆಚ್ಚಿನ ಸಂಬಳಕ್ಕಾಗಿಯೋ, ಬಾಸ್ನ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲೋ ಒಂದು ಕೆಲಸದಲ್ಲಿರುವಾಗಲೇ ಮತ್ತೊಂದನ್ನು ಹುಡುಕಿಕೊಳ್ಳುವುದು ಸಾಮಾನ್ಯ. ಮಂಗ ಕೊಂಬೆಯಿಂದ ಕೊಂಬೆಗೆ ಜಿಗಿಯುವುದು, ಊಸರವಳ್ಳಿ ಬಣ್ಣ ಬದಲಾಯಿಸುವುದು ತನ್ನ ಉಳಿವಿಗಾಗಿ ಮಾಡುವ ನೈಸರ್ಗಿಕ ಸ್ವಭಾವ. ಆದರೆ ಮನುಷ್ಯ ತನ್ನ ಡೇಟಿಂಗ್ ಸಂಬಂಧದಲ್ಲೂ ಇಂತಹ ಮಾರ್ಗ ಅನುಸರಿಸುತ್ತಿರುವುದು ಅಚ್ಚರಿ. ಜೆನ್-ಜೀ ಪ್ರಕಾರ, ಒಂದು ಗಂಭೀರವಾದ ರಿಲೇಷನ್ಶಿಪ್ನಲ್ಲಿದ್ದಾಗಲೇ..ಮತ್ತೊಬ್ಬ ಹೊಸ ಸಂಗಾತಿ ಹುಡುಕುವ ಈ ವಿಚಿತ್ರ ಡೇಟಿಂಗ್ ಟ್ರೆಂಡ್ಗೆ ‘ಮಂಕಿ ಬ್ರಾಂಚಿಂಗ್’ ಎನ್ನಲಾಗುತ್ತದೆ.
ಸಾಮಾನ್ಯವಾಗಿ ಒಬ್ಬ ಪ್ರೇಮಿ ತಾನು ಪ್ರೀತಿಸುವ ಪ್ರಿಯಕರ\ಪ್ರೇಯಸಿಗೆ ನಾನು ಇನ್ಮುಂದೆ ನಿನ್ನ ಜೊತೆ ಬದುಕಲು ಸಾಧ್ಯವಿಲ್ಲ. ನಿನ್ನ ದಾರಿ ನೀನು ಹುಡುಕಿಕೋ. ನನ್ನ ನಿನ್ನ ಯೋಚನೆಗಳು ಬೇರೆ ಬೇರೆ ಇದೆ. ನಿನ್ನ ಬಳಿ ಹಣವಿಲ್ಲ. ನಿನಗೆ ನನಗಿಂತ ಸೂಕ್ತ, ಅಂದದ ಹುಡುಗ ಅಥವಾ ಹುಡುಗಿ ಸಿಗುತ್ತಾರೆ ಎಂದು ಹೇಳಿ ನೀಟಾಗಿ ಬ್ರೇಕಪ್ ಮಾಡಿಕೊಳ್ಳುವ ಕಾಲ ಇತ್ತು. ಆದರೆ, ಈಗ ಹಾಗಿಲ್ಲ. ಒಂದು ರಿಲೇಷನ್ ಶಿಪ್ ಬೋರೊಡಿಸಿತು ಅಥವಾ ಇರಿಟೇಟ್ ಆಗ್ತಿದೆ ಎಂದರೆ, ಪ್ರೇಮದಲ್ಲಿದ್ದಾಗಲೇ ಅಥವಾ ಕಡೆಗಣಿಸುತ್ತಲ್ಲೇ ಮತ್ತೊಬ್ಬರನ್ನು ಹುಡುಕಿಕೊಳ್ಳುತ್ತಿದ್ದಾರೆ. ಇದು ಡೇಟಿಂಗ್ನಲ್ಲಿ ಮಾತ್ರವಲ್ಲ, ಲವ್ ಸ್ಟೋರಿಗಳಲ್ಲೂ ಈ ವಾಡಿಕೆ ಜಾರಿಯಲ್ಲಿದೆ.
ನಾವು ಒಬ್ಬರ ಜೊತೆ ಗಂಭೀರವಾಗಿ ಪ್ರೀತಿ ಮಾಡುತ್ತಿರುತ್ತೇವೆ. ಅದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಜೊತೆಗೆ ಭಾವನಾತ್ಮಕ ಅಥವಾ ರೋಮ್ಯಾಂಟಿಕ್ ನಂಟು ಬೆಳೆಯುತ್ತದೆ. ಒಂದು ಪ್ರೀತಿ ಮುರಿದುಕೊಳ್ಳುವ ಮುನ್ನ ಮತ್ತೊಂದನ್ನು ಸಿದ್ಧ ಪಡಿಸಿಕೊಳ್ಳುವುದು ‘ಮಂಕಿ ಬ್ರಾಂಚಿಂಗ್’ ಅರ್ಥ ಹೇಳುವುದಾದರೆ, ಇದು ಪ್ರೀತಿಯ ವಿಚಾರದಲ್ಲಿ 'ಬ್ಯಾಕ್ ಅಪ್ ಪ್ಲಾನ್'ಮಾಡಿಕೊಂಡಂತೆ. ಆದರೆ ಇಲ್ಲಿ ನಿಮ್ಮ ಬ್ಯಾಕ್ ಅಪ್ ಆಗಿರುವ ವ್ಯಕ್ತಿಗೆ ಹಾಗೂ ಈಗಾಗಲೇ ಪ್ರೀತಿಯಲ್ಲಿರುವ ವ್ಯಕ್ತಿಗೆ ತಾನು ಆ ಜಾಲದಲ್ಲಿ ಸಿಲುಕಿಕೊಂಡಿದ್ದೇನೆ ಎಂದೆ ಗೊತ್ತಿರೋದಿಲ್ಲ.
ಒಂದನ್ನು ಬಿಟ್ಟು ಮತ್ತೊಂದು ಪ್ರೇಮಕ್ಕೆ ಒಗ್ಗಿಕೊಳ್ಳುತ್ತಿರೋದು ಯಾಕೆ ಎನ್ನುವ ಬಗ್ಗೆ ಮನೋವೈದ್ಯರು ಹುಡುಕಾಡಿದಾಗ ತಿಳಿದಿದ್ದು...ಸಾಮಾನ್ಯವಾಗಿ ಪ್ರೇಮಿಗಳಿಗೆ ಆರಂಭದಲ್ಲಿದ್ದ ಉತ್ಸಾಹ ಮಾಯವಾಗುತ್ತದೆ. ಡೇಟಿಂಗ್ ಬೋರ್ ಎನಿಸುತ್ತದೆ. ಇರಿಟೇಟ್ ಎನಿಸಲು ಶುರುವಾಗುತ್ತಾರೆ. ಇನ್ನೂ ಏನೋ ಬೇಕಿತ್ತು ಎನಿಸುತ್ತದೆ. ಅದೇ ಸಮಯದಲ್ಲಿ ಸಿಗುವ ಮತ್ತೊಂದು ವ್ಯಕ್ತಿ ಜೊತೆ ತಡರಾತ್ರಿ ಚಾಟಿಂಗ್, ಭಾವನಾತ್ಮಕ ಹಂಚಿಕೆ ಮತ್ತು ತುಸು ಮುಕ್ತ ಮಾತುಗಳು ನಡೆಯುತ್ತವೆ. ಇದನ್ನು ಆರಂಭದಲ್ಲಿ ಕೇವಲ 'ಸ್ನೇಹ' ಎಂದು ಲೇಬಲ್ ಮಾಡಿಕೊಳ್ಳಲಾಗುತ್ತದೆ.
ಕಾಲ ಕಳೆದಂತೆ ಹೊಸ ವ್ಯಕ್ತಿ ನಿಮ್ಮ ಭಾವನೆಗೆ ಒಗ್ಗಿಕೊಳ್ಳುವುದು. ಮಾತನಾಡುವುದು. ನಿಮಗೆ ಬೇಕಾದಂತೆ ವರ್ತಿಸೋದು. ನಿಮ್ಮ ಬಗ್ಗೆ ವಹಿಸುವ ಕಾಳಜಿಯು ನಿಮ್ಮನ್ನು ಹಳೆ ರಿಲೇಷನ್ ಶಿಪ್ನಿಂದ ಹೊರ ಬರುವಂತೆ ಮಾಡುತ್ತದೆ. ಮಾನಸಿಕವಾಗಿ ಪ್ರಸ್ತುತ ಸಂಬಂಧದಿಂದ ಅರ್ಧ ಹೊರಬಂದಿರುತ್ತೀರಿ. ಹೊಸ ಸಂಬಂಧವು ಸುರಕ್ಷಿತವಾಗಿದೆ ಎಂಬ ಭದ್ರತೆ ಸಿಕ್ಕಾಗ ಮಾತ್ರ, ಹಳೆಯ ಸಂಬಂಧವನ್ನು ಅಧಿಕೃತವಾಗಿ ಮುರಿಯುತ್ತಾರೆ.
ಕೆಲವರಿಗೆ ಒಂಟಿಯಾಗಿರುವುದು ಅಥವಾ ಏಕಾಂಗಿತನ ಭಯ ಹುಟ್ಟಿಸುತ್ತದೆ. ಸಂಬಂಧದಲ್ಲಿರುವುದಕ್ಕಿಂತ ಯಾರಾದರೂ ಜೊತೆಗಿರಬೇಕು ಎಂಬ ಭಾವನೆ ಇರುತ್ತದೆ. ನೇರವಾಗಿ ಬ್ರೇಕಪ್ ಮಾಡಿಕೊಳ್ಳುವುದು ಭಯ. ಹೀಗಾಗಿ ಮಾತನಾಡೋದನ್ನೇ ಬಿಟ್ಟುಬಿಡುತ್ತಾರೆ.
ನಿಮ್ಮ ಜೊತೆ ನಿಮ್ಮ ಸಂಗಾತಿ ಮಾತನಾಡುತ್ತಿಲ್ಲ. ಬೇಕಾಬಿಟ್ಟಿ ಸಂದೇಶ ಕಳುಹಿಸುತ್ತಿದ್ದಾಳೆ. ಮೊಬೈಲ್ನಲ್ಲಿ ಸಾಕಷ್ಟು ಸೀಕ್ರೆಟ್ ಮೇಂಟೇನ್ ಮಾಡುತ್ತಿದ್ದರೆ. ಆನ್ಲೈನ್ನಲ್ಲಿದ್ದರೂ ಮಾತನಾಡುತ್ತಿಲ್ಲ ಎಂದಾದರೆ ಎಚ್ಚೆತ್ತುಕೊಳ್ಳಿ. ನೀವೆ ಅವರಿಂದ ದೂರವಿರಲು ಪ್ರಯತ್ನಿಸಿ. ಇಲ್ಲವಾದಲಿ ಆಕೆ ಜೊತೆ ನೇರವಾಗಿ ಮಾತನಾಡಿ ತಪ್ಪನ್ನು ಕೇಳಿ, ಆಕೆಯ ಇಷ್ಟಾರ್ಥಗಳನ್ನು ತಿಳಿದುಕೊಳ್ಳಿ.
ಇದು ಮಾನಸಿಕ ರೋಗವಲ್ಲವಾದರೂ, ಇದು ಭಾವನಾತ್ಮಕ ಮೋಸಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬರ ಜೊತೆ ಚೆನ್ನಾಗಿ ಇರುವಾಗಲೇ ಮತ್ತೊಬ್ಬರ ಜೊತೆ ಸಂಬಂಧ ಬೆಳೆಸುವುದು ಅಘಾತಕ್ಕೆ ಕಾರಣವಾಗುತ್ತದೆ. ಇದರಿಂದ ಸಾಕಷ್ಟು ಸಮಸ್ಯೆ, ಅವಘಡ ಹಾಗೂ ಕೊಲೆಯಂತಹ ಪ್ರಕರಣಕ್ಕೂ ಕಾರಣವಾಗಬಹುದು, (ಏಜೆನ್ಸೀಸ್).