Monkey Eating Soap 
ಲೈಫ್‌ಸ್ಟೈಲ್

'ಅಯ್ಯೋ ಮಂಗ ಅದು ಸೋಪು ತಿನ್ಬೇಡ' ಎಂದು ಕೋತಿಗೆ ಗದರಿ ಆಲೂಗಡ್ಡೆ ಕೊಟ್ಟ ಮಹಿಳೆ; ವಿಡಿಯೋ ವೈರಲ್..Monkey Eating Soap

ಪ್ರಮುಖ ಮುಖ್ಯಾಂಶಗಳು

  • ಸೋಪನ್ನು ಆಹಾರವೆಂದು ಭಾವಿಸಿ ತಿನ್ನಲು ಮುಂದಾದ ಕೋತಿ
  • ಸೋಪು ಬಿಸಾಡು ಎಂದು ಆಲೂಗಡ್ಡೆ ಕೊಟ್ಟು ಮಾನವೀಯತೆ ಮೆರೆದ ಮಹಿಳೆ
  • ತಾಯಿಯ ಗುಣದ ಬಗ್ಗೆ ಗುಣಗಾನ ಮಾಡಿದ ನೆಟ್ಟಿಗರು
Monkey Eating Soap: ಸೋಶಿಯಲ್​ ಮೀಡಿಯಾದಲ್ಲಿ ನಿತ್ಯವು ರಾಶಿ ರಾಶಿ ವಿಡಿಯೋಗಳು ವೈರಲ್​ ಆಗ್ತಾನೆ ಇರುತ್ವೆ. ಕೆಲವೊಂದು ಮಾತ್ರ ಮನಸ್ಸಿಗೆ ಹತ್ರ ಆಗುತ್ತದೆ. ಅದರಲ್ಲಿ ಒಂದು ಎಂದರೆ, ಮಹಿಳೆಯೊಬ್ಬರು ತನ್ನ ಮನೆ ಬಳಿ ಮಂಗನೊಂದು ತಿನ್ನುತ್ತಿದ್ದ ಸೋಪ್​ ಬಿಸಾಡುವಂತೆ ಮಾಡಿ, ಆಲೂಗಡ್ಡೆ ಕೊಟ್ಟಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. 
ತಾಯಿ ಪ್ರೀತಿ ಹಾಗೇನೆ ಮಕ್ಕಳನ್ನು ತಪ್ಪು ಮಾಡೋಕೆ ಬಿಡೋದಿಲ್ಲ. ಸಾಧ್ಯವಾದಷ್ಟು ಒಳಿತನ್ನು ಬಯಸುತ್ತದೆ. ಮಕ್ಕಳ ಆರೋಗ್ಯ, ಆಹಾರಕ್ಕಾಗಿ ದಿನಪೂರ್ತಿ ದುಡಿಯುತ್ತಾರೆ. ಇದು ಮನುಷ್ಯರ ಮೇಲೆ ಮಾತ್ರ ಅಲ್ಲ. ಪ್ರಾಣಿಗಳ ಮೇಲೆಯೂ ಹೌದು, ಅವು ಗೊತ್ತಿಲ್ಲದೆ ಏನನ್ನೋ ಸೇವಿಸಿದರೆ, ಅವಕ್ಕೆ ಗದರೋದು ಅಷ್ಟೆ ಗೊತ್ತು ಎಂದು  ಅಲ್ಟಿಮೇಟ್​ ಬಾಸ್​ ಪ್ರೀತಮ್​ ಎಂಬುವವರ ಇನ್​ಸ್ಟಾಗ್ರಾಂ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿದೆ.

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಮಂಗನೊಂದು ಸೋಪನ್ನು ತಿನ್ನುವ ಆಹಾರ ಎಂದು ಎರಡು ಕೈಗಳಿಂದ ಅದನ್ನು ತಿನ್ನಲು ಯತ್ನಿಸುತ್ತದೆ. ಅಲ್ಲಿಗೆ ಬಂದ ಮಹಿಳೆಯು ಅದನ್ನು ಗಮನಿಸಿ, ಅಯ್ಯೋ ಅದನ್ನು ತಿನ್ನಬೇಡ ಅದು ಸೋಪು ಎಂದು ಪ್ರೀತಿಯಿಂದ ಗದರಿಸಿ, ಬೈದಿದ್ದಾರೆ. ಅದನ್ನು ಬಿಸಾಡು ಇದು ತೆಗೆದಕೋ ಎಂದು ಆಲೂಗಡ್ಡೆ ಕೊಟ್ಟಿದ್ದಾರೆ. ಮೊದಲಿಗೆ ಏನೂ ಅರ್ಥ ಮಾಡಿಕೊಳ್ಳದ ಮಂಗ ಮಿಕ ಮಿಕ ಕಣ್ಬಿಟ್ಟಿದೆ. ನಂತರ ಅದು ಅವರು ಮಾಡುವ ಸನ್ನೆ ಗಮನಿಸಿ, ಸೋಪನ್ನು ಬಿಸಾಕಿ ಆಲೂಗಡ್ಡೆ ಕಚ್ಚಿಕೊಂಡು ಹೋಗುತ್ತದೆ. ಮಹಿಳೆಯು ಮುಗ್ಧತೆಯಿಂದ ಕೋತಿಗೆ ಬಾಯ್​ ಮಾಡುವುದು ವಿಡಿಯೋದಲ್ಲಿದೆ. 

ನೆಟ್ಟಿಗರು  ಹೇಳಿದ್ದೇನು?

ಅಲ್ಟಿಮೇಟ್​ ಬಾಸ್​ ಪ್ರೀತಮ್​  ಅಮ್ಮ ಅಂದ್ರೆ ಅಮ್ಮಾನೇ ಎಂದು ಹಂಚಿಕೊಂಡ ವಿಡಿಯೋಗೆ ಸಾಕಷ್ಟು ವ್ಯೂವ್ಸ್​ ಸಿಕ್ಕಿದೆ. ನೆಟ್ಟಿಗರು ವಿಡಿಯೋ ಕಂಡು ಭಾವುಕರಾಗಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದ್ದು, ಅಮ್ಮನಿಗೆ ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಿ ಅಭ್ಯಾಸವಿದೆ, ಈ ಕೋತಿಗಳನ್ನು ನಿಭಾಯಿಸೋದು ದೊಡ್ಡ ವಿಚಾರವೇನಲ್ಲ ಎಂದಿದ್ದಾರೆ. ಮತ್ತೊಬ್ಬರು ತಾಯಿ ಪ್ರೀತಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸೀಮಿತ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).