ಲೈಫ್‌ಸ್ಟೈಲ್

ಮಜ್ಜಿಗೆಯಲ್ಲಿ ಇದನ್ನು ಮಿಕ್ಸ್​ ಮಾಡಿ ಕುಡಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಸೊಂಟದ ಸುತ್ತಲೂ ಇರುವ ಕೊಬ್ಬು! Buttermilk

Buttermilk : ನೀವು ಈ ಒಂದು ಪದಾರ್ಥವನ್ನು ಮಜ್ಜಿಗೆಯೊಂದಿಗೆ ಬೆರೆಸಿ ಪ್ರತಿದಿನ ನಿಯಮಿತವಾಗಿ ಕುಡಿದರೆ, ನಿಮ್ಮ ಸೊಂಟದ ಸುತ್ತಲಿನ ಕೊಬ್ಬು ಬೆಣ್ಣೆಯಂತೆ ಬೇಗನೆ ಕರಗುತ್ತದೆ. ಅಷ್ಟಕ್ಕೂ ಯಾವುದು ಆ ಪದಾರ್ಥ? ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದೆ. ಈಗಾಗಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ದಿನಗಳ ಕಳೆಯುತ್ತಿದ್ದಂತೆ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಸೂರ್ಯನ ಹೊಡೆತದಿಂದ ತಪ್ಪಿಸಿಕೊಳ್ಳಲು ಅನೇಕರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಕೃತಕ ಪಾನೀಯಗಳಿಗಿಂತ ನೈಸರ್ಗಿಕ ಪಾನೀಯಗಳು ಸೂರ್ಯ ಶಾಖದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರಿಗೆ ಸಹಾಯ ಮಾಡುತ್ತವೆ.

ಜನರು ಹೆಚ್ಚಾಗಿ ಕೃತಕ ಪಾನೀಯಗಳ ಮೊರೆ ಹೋಗುತ್ತಾರೆ. ಇವು ದೇಹಕ್ಕೆ ತಾತ್ಕಾಲಿಕ ತಂಪನ್ನು ನೀಡಿದರೂ ಸಹ ಆರೋಗ್ಯಕ್ಕೆ ತುಂಬಾನೇ ಹಾನಿಕಾರಕ ಎಂಬುದನ್ನು ಮರೆಯಬಾರದು. ಹೀಗಾಗಿ ಕೃತಕ ಪಾನೀಯಗಳ ಬದಲಿಗೆ, ನೀವು ಮಜ್ಜಿಗೆ ಮತ್ತು ಎಳನೀರು ಸೇರಿದಂತೆ ಮುಂತಾದ ನೈಸರ್ಗಿಕ ಪಾನೀಯಗಳನ್ನು ಸೇವಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿಯನ್ನು ಬೆರೆಸಿ ಸೇವಿಸಿದರೆ, ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೌದು, ಮಜ್ಜಿಗೆ ಮತ್ತು ಶುಂಠಿಯ ಪ್ರಯೋಜನಕಾರಿ ಗುಣಗಳ ಸಂಯೋಜನೆಯು ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಶುಂಠಿ ಬೆರೆಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಮತ್ತು ನಿಮ್ಮ ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೋಷಕಾಂಶಗಳು

ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ 100 ಮಿ.ಲಿ ಮಜ್ಜಿಗೆಯಲ್ಲಿ ಶೇ. 40 ರಷ್ಟು ಮಾತ್ರ ಕ್ಯಾಲೊರಿಗಳಿವೆ. ಮಜ್ಜಿಗೆ ಹಾಲಿಗಿಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇನ್ನು ಮಜ್ಜಿಗೆಯನ್ನು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಮಜ್ಜಿಗೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸೋಡಿಯಂ, ಪೊಟ್ಯಾಸಿಯಂ, ರಂಜಕ, ಜೀವಸತ್ವಗಳು ಮತ್ತು ಉತ್ತಮ ಬ್ಯಾಕ್ಟೀರಿಯಾಗಳನ್ನು ಸಹ ಹೊಂದಿರುತ್ತದೆ. ಹೀಗಾಗಿ ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ.

ಮಜ್ಜಿಗೆಯ ಪ್ರಯೋಜನಗಳು

ಮಜ್ಜಿಗೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರಲ್ಲಿರುವ ಪ್ರೋಬಯಾಟಿಕ್‌ಗಳು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಆರೋಗ್ಯವಾಗಿಡಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಇದರಲ್ಲಿರುವ ಆಮ್ಲವು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ.

ಪಾನೀಯ ಮಾಡುವುದು ಹೇಗೆ?

ಒಂದು ಮಿಕ್ಸರ್ ಜಾರ್‌ನಲ್ಲಿ ಸ್ವಲ್ಪ ಮೊಸರು ಹಾಗೂ ಒಂದು ಸಣ್ಣ ತುಂಡು ಶುಂಠಿಯನ್ನು ಸೇರಿಸಿ, ಅಗತ್ಯವಿರುವಷ್ಟು ಉಪ್ಪನ್ನು ಹಾಕಿಕ್ಕೊಳ್ಳಿ. ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ರುಬ್ಬಿದ ಬಳಿಕ ಸೋಸದೆ ಒಂದು ಲೋಟಕ್ಕೆ ಸುರಿಯಿರಿ. ಇದಾದ ಬಳಿಕ ತಕ್ಷಣ ಕುಡಿಯಿರಿ. ಬೇಕಾದರೆ, ನೀವು ಸ್ವಲ್ಪ ಜೀರಿಗೆ ಪುಡಿಯನ್ನು ಸಹ ಸೇರಿಸಬಹುದು. ನೀವು ಈ ಪಾನೀಯವನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ, ಶೀಘ್ರದಲ್ಲೇ ನೀವು ಉತ್ತಮ ಬದಲಾವಣೆಯನ್ನು ನೋಡುತ್ತೀರಿ.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಇದೆ. ಅದೇನೆಂದರೆ, ತೂಕ ಇಳಿಸಿಕೊಳ್ಳಲು ದೈನಂದಿನ ನಡಿಗೆ ಅಥವಾ ವ್ಯಾಯಾಮ ಅತ್ಯಗತ್ಯ ಎಂಬುದನ್ನು ಮರೆಯಬೇಡಿ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.