Matka vs Refrigerator Water
- ಬೇಸಿಗೆಯಲ್ಲಿ ತಂಪು ನೀರು ಬೇಕೆಂದು ರೆಫ್ರಿಜರೇಟರ್ನಲ್ಲಿಟ್ಟ ನೀರು ಕುಡಿಯುತ್ತಿದ್ದೀರಾ?.
- ಮಡಕೆಯಲ್ಲಿಟ್ಟ ನೀರು ನೈಸರ್ಗಿಕವಾಗಿ ತಂಪಾಗುವ ಕಾರಣ ಇದು ದೇಹಕ್ಕೆ ಆರೋಗ್ಯಕರ.
- ರೆಫ್ರಿಜರೇಟರ್ನ ನೀರು ಜೀರ್ಣಕ್ರಿಯೆ, ರಕ್ತನಾಳಕ್ಕೆ ಸಮಸ್ಯೆ ಮಾಡುತ್ತದೆ ಎಂದ ತಜ್ಞರು.
Matka vs Refrigerator Water: ಬೇಸಿಗೆ ಬರುತ್ತಲೇ ಈ ಹಿಂದೆ ಮೂಲೆಯಲ್ಲಿದ್ದ ಮಡಿಕೆಗಳನ್ನು ತೊಳೆದು ಸಾಮಾನ್ಯವಾಗಿ ನೀರು ತುಂಬಿಸಿ ಕುಡಿಯಲು ಇಡಲಾಗುತ್ತಿತ್ತು. ಇತ್ತೀಚೆಗೆ ಬಂದ ರೆಫ್ರಿಜರೇಟರ್ಗಳಿಂದಾಗಿ ಮಡಕೆ ಬಳಕೆ ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಆರೋಗ್ಯಕ್ಕೆ ಮಡಕೆ ನೀರೇ ಬೆಸ್ಟ್ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು.
ಈ ಬೇಸಿಗೆಯಲ್ಲಿ ಅನಿವಾರ್ಯವಾಗಿ ಬೇಕೆನಿಸುವ ತಣ್ಣೀರು ದೇಹಕ್ಕೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ತಂಡಿ ನೀರಿಗಾಗಿ ಈಗ ರೆಫ್ರಿಜರೇಟರ್ ನೀರನ್ನು ಬಳಕೆ ಮಾಡಲಾಗುತ್ತದೆ. ಇದು ದೇಹದ ಜೀರ್ಣಕ್ರಿಯೆ, ರಕ್ತ ಸಂಚಲನಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಮಣ್ಣಿನ ಮಡಕೆಯ ನೀರಿನಿಂದಾಗುವ ಪ್ರಯೋಜನವೇನು?
ಮಡಿಕೆಯಲ್ಲಿಟ್ಟ ನೀರು ನೈಸರ್ಗಿಕವಾಗಿ ಮಾರ್ಪಾಡಾಗಿರುವ ತಂಪು. ಮಡಕೆಯ ಮಣ್ಣಿನಲ್ಲಿರುವ ಸಣ್ಣ ರಂಧ್ರಗಳ ಮೂಲಕ ನೀರು ಆವಿಯಾಗುವಾಗ ನೈಸರ್ಗಿಕವಾಗಿ ತಂಪಾಗಿರಿಸುವ ಕೆಲಸವನ್ನು ಮಾಡುತ್ತದೆ. ಫ್ರಿಡ್ಜ್ನಲ್ಲಿರುವ ನೀರಿನಷ್ಟು ತಂಪು ಮಾಡದಎ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ತಂಪಾಗಿರಿಸುವಂತೆ ಮಾಡುತ್ತದೆ.
ಫ್ರಿಡ್ಜ್ನ ನೀರು ಕುಡಿದರೆ ಕೆಲವು ವಾರಕ್ಕೆ ಕಿಚ್ ಕಿಚ್ನಂತಾಗಿ ಗಂಟಲಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇಲ್ಲದಿದ್ದರೆ ಕೆಮ್ಮಾಗುವಂತೆ ಮಾಡುತ್ತದೆ. ಆದರೆ ಮಡಕೆ ನೀರು ಸಾಧಾರಣ ವಾತಾವರಣದಲ್ಲಿ ನೀರನ್ನು ತಂಪು ಮಾಡಿ ಗಂಟಲನ್ನು ಸುರಕ್ಷಿತವಾಗಿರಿಸುತ್ತದೆ.
ಮಡಕೆ ನೀರು ಯಾಕೆ ಬೆಸ್ಟ್?
ಮಡಕೆ ತಯಾರಿಸಿದ ಮಣ್ಣಲ್ಲಿ ಕ್ಷಾರಿಯಾ ಎನ್ನುವ ಗುಣ ಇರುವ ಕಾರಣ ಇದು ನೀರಿನಲ್ಲಿ ಆಮ್ಲೀಯತೆಯನ್ನು ಸಮತೋಲನಗೊಳಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಮಡಕೆ ನೀರು ಸೇವನೆ ಮಾಡುವುದರಿಂದ ಮೆಟಬಾಲಿಸಂ ಹೆಚ್ಚಾಗುವಂತೆ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿರಿಸಲು ಸಹಾಯ ಮಾಡುತ್ತದೆ.
ಮಡಕೆಯ ಪಾತ್ರೆಯು ಸಾಧಾರಣ ನೀರಿಗೆ ಕ್ಯಾಲ್ಶಿಯಂ, ಮೆಗ್ನೀಶಿಯಂ, ರಂಜಕದಂತಹ ನೈಸರ್ಗಿಕ ಖನಿಜವಬನ್ನು ಸೇರಿಸುತ್ತದೆ. ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ತುಂಬಿಸಿ ಫ್ರಿಡ್ಜ್ನಲ್ಲಿ ಇಡುವುದರಕ್ಕಿಂತ ಖನಿಜಾಂಶವುಳ್ಳ ಮಡಿಕೆ ನೀರು ಆರೋಗ್ಯಕ್ಕೆ ಬೆಸ್ಟ್ ಆಯ್ಕೆ ಎನ್ನುತ್ತಾರೆ ತಜ್ಞರು.
ಫ್ರಿಡ್ಜ್ ನೀರಿನಿಂದಾಗುವ ಅನಾನುಕೂಲಗಳೇನು?
ಫ್ರಿಡ್ಜ್ನಲ್ಲಿಟ್ಟ ಬಾಟಲ್ ಅತಿಯಾಗಿ ತಂಡಿಯಾಗುತ್ತದೆ. ಇದನ್ನು ಕುಡಿಯುವುದರಿಂದ ತಿಂದ ಅನ್ನ ಅರಗಿಸಿಕೊಳ್ಳಲು ಸಮಯ ಹಿಡಿಯುತ್ತದೆ, ಅತಿಯಾದ ತಣ್ಣೀರು ಸಂಕುಚಿತಗೊಂಡು ಆಹಾರದಲ್ಲಿನ ಕೊಬ್ಬನ್ನು ಗಟ್ಟಿಯನ್ನಾಗಿ ಮಾಡಿ,ಜೀರ್ಣಕ್ರಿಯೆಗೆ ಸಮಸ್ಯೆಯನ್ನುಂಟು ಮಾಡುತ್ತದೆ.
ಬಿಸಿಲಿನಿಂದ ಮನೆಗೆ ಮರಳಿದ ತಕ್ಷಣ ಫ್ರಿಡ್ಜ್ನಲ್ಲಿರುವ ನೀರನ್ನು ಕುಡಿಯುವುದರಿಂದ ಇದು ದೇಹಕ್ಕೆ ಒಮ್ಮೆಲೆ ಆಘಾತವನ್ನು ಕೊಟ್ಟಂತಾಗುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವಂತೆ ಮಾಡಿ ಶೀತವಾಗುವಂತೆ ಮಾಡುತ್ತದೆ. ಕಡಿಮೆ ತಾಪಮಾನದ ನೀರು ಗಂಟಲಿನ ಪದರಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ.
ಮಡಕೆ ಬಳಸುವ ವಿಧಾನ
ನೀವು ಬಳಕೆ ಮಾಡುವ ಮಡಕೆಯನ್ನು ವಾರಕ್ಕೊಮ್ಮೆಯಾದರು ಮೃದುವಾದ ಬ್ರಷ್ನಿಂದ ಉಜ್ಜಿ ತೊಳೆಯಬೇಕು. ತೊಳೆದ ನಂತರ ಅದನ್ನು ಬಿಸಿಲಿನಲ್ಲಿ ಇಡಿ, ಇದು ಅದರಲ್ಲಿರುವ ಬ್ಯಾಕ್ಟೀರಿಯಾ ಕೊಲ್ಲಲ್ಲು ಸಹಾಯ ಮಾಡುತ್ತದೆ.
ಫ್ರಿಡ್ಜ್ ನೀರು ತಕ್ಷಣವೇ ದೇಹದ ಉಷ್ಣತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಆರೋಗ್ಯ ಮತ್ತು ದೇಹದ ಸುರಕ್ಷತೆ ಆಧಾರದ ಮೇಲೆ ಮಣ್ಣಿನ ಮಡಕೆಯ ನೀರು ಅತ್ಯುತ್ತಮ ಆಯ್ಕೆ, (ಏಜೆನ್ಸೀಸ್).