ಮಾತಂಗಿ ಎಂಬ ಪದವು ಹಿಂದೂ ದೇವತೆಯನ್ನು ಸೂಚಿಸುತ್ತದೆ. ಹತ್ತು ತಾಂತ್ರಿಕ ದೇವತೆಗಳಲ್ಲಿ ಒಬ್ಬಳಾದ ಅವಳು ದೇವಿ ಸರಸ್ವತಿಯ ತಾಂತ್ರಿಕ ರೂಪವೆಂದು ನಂಬಲಾಗಿದೆ. ಈ ಮುದ್ರೆಯು ಹಿಂದೂ ಸಂಸ್ಕೃ ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ರೂಡಿಯಲ್ಲಿ ಬಂದಿದೆ. ಮಾತಂಗಿ ಮುದ್ರೆಯ
ವಿದ್ಯಾರ್ಥಿಗಳಿಗೆ ಸಹಾಯಕ
ಮಧ್ಯಂತರ ಯೋಗದ ಹಸ್ತ ಭಂಗಿಯಿಂದ ಮಾತಂಗಿ ದೇವಿಯ ಅದ್ಭುತ ಶಕ್ತಿಯನ್ನು ಕರೆಯುವಂತೆ ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಮೇಲಕ್ಕೆತ್ತಿ ಮಾತಂಗಿ ಮುದ್ರೆಯನ್ನು ಅಭ್ಯಾಸ ಮಾಡಲಾಗುತ್ತದೆ. ಮಾತಂಗಿ ಮುದ್ರೆಯು ನಿಮ್ಮ ಸೌರ ಪ್ಲೆಕ್ಸಸ್ನ ಚಕ್ರಕ್ಕೆ ಮಣಿಪುರ ಚಕ್ರ ಶಕ್ತಿಯನ್ನು ಕೇಂದ್ರೀಕರಿಸುವ ಮೂಲಕ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳು ಸುಖಾಸನ ಅಥವಾ ಪದ್ಮಾಸನ (ಕಮಲ ಭಂಗಿ) ದಂತಹ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳುವ ಮೂಲಕ ಮುದ್ರೆಯನ್ನು ಪ್ರಾರಂಭಿಸಬಹುದು. ಮುದ್ರಾ ಅಭ್ಯಾಸ ಮಾಡುವಾಗ ನಿಮ್ಮ ಹೃದಯದ ಮೇಲೆ ಕೇಂದ್ರೀಕರಿಸಿ. ಅಂತಹ ಮುದ್ರಾ ಭಂಗಿಗಳು ನಿಮ್ಮ ದೇಹ ಮತ್ತು ಮನಸ್ಸನ್ನು ಅತ್ಯುತ್ತಮವಾಗಿ ರೂಪಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಉತ್ತಮ ಏಕಾಗ್ರತೆಗಾಗಿ ವಿದ್ಯಾರ್ಥಿಗಳು ಈ ಮುದ್ರೆಯನ್ನು ಅಭ್ಯಾಸ ಮಾಡಿ.
ಮುದ್ರೆ ಮಾಡುವ ವಿಧಾನ
ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಮೇಲಕ್ಕೆತ್ತಿ ಬೆರಳುಗಳನ್ನು ರ್ಸ³ಸುವುದು. ಉಳಿದ ಬೆರಳುಗಳನ್ನು ಪರಸ್ಪರ ಒಂದೊಂದು ಹೆಣೆಯಿರಿ. (ಚಿತ್ರದಲ್ಲಿರುವಂತೆ) ಇದು ಮಾತಂಗಿ ಮುದ್ರೆಯಾಗಿದೆ. ಈ ಸ್ಥಿತಿಯಲ್ಲಿ ಸುಮಾರು 4 ನಿಮಿಷಗಳ ಕಾಲ ಮೂರು ಬಾರಿ ಅಭ್ಯಾಸಮಾಡಿ. ನಿಮ್ಮ ಹೊಟ್ಟೆಯ ಮೇಲೆ ಯಾವುದೇ ಒತ್ತಡವನ್ನು ನೀವು ಹಾಕುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಪೂರ್ಣ ಶಕ್ತಿಯನ್ನು ಸೌರಪ್ಲೆಕ್ಸಸ್ವುಣಿಪುರ ಚಕ್ರ (ನಾಭಿ) ಕಡೆಗೆ ಮರುನಿರ್ದೇಶಿಸಲು ಪ್ರಯತ್ನಿಸಿ. ನಿಮ್ಮ ದೇಹ ಮತ್ತು ಮನಸ್ಸಿನ ಸ್ಥಿತಿಯನ್ನು ಗಮನಿಸಿ. ನೀವು ಅದಕ್ಕೆ ‘ಓಂ ಮಾತಂಗಾಯೈ ನಮಃ’ ಎಂಬ ಮಂತ್ರವನ್ನು ಪ್ರತಿದಿನ 108 ಬಾರಿ 48 ದಿನಗಳ ಕಾಲ ಪಠಿಸಿ.
ಪ್ರಯೋಜನವೇನು?
ಹೈಪೋಥಾಲಮಸ್ನ ಪ್ರಚೋದನೆಗೆ ಕಾರಣವಾಗುತ್ತದೆ. ಹೃದಯ, ಹೊಟ್ಟೆ, ಯಕೃತ್ತು, ಡ್ಯುವೋಡೆನಮ್ ಪಿತ್ತಕೋಶ, ಗುಲ್ಮ, ಮೇದೋಜ್ಜೀರಕ ಗ್ರಂಥಿ ಮತ್ತು ಮೂತ್ರಪಿಂಡಗಳು ಈ ಮುದ್ರೆಯಿಂದ ಸಕಾರಾತ್ಮಕ ಪ್ರಯೋಜನ ಪಡೆಯುತ್ತವೆ. ಇದು ವಿಶೇಷವಾಗಿ ಹೊಟ್ಟೆಯಲ್ಲಿನ ಸೆಳೆತ ಅಥವಾ ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಾತಂಗಿ ಮುದ್ರೆಯ ನಿಯಮಿತ ಅಭ್ಯಾಸವು ನಾಭಿಯಲ್ಲಿ ಕಂಡು ಬರುವ ಶಕ್ತಿ ಕೇಂದ್ರವಾದ ಮಣಿಪುರ ಚಕ್ರವನ್ನು ತೆರೆಯಲು ಮತ್ತು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಜೀವನದ ಅನುಭವಗಳನ್ನು, ಜೀರ್ಣಕ್ರಿಯೆಯನ್ನು ಮತ್ತು ಅವುಗಳ ಸಮೀಕರಣವನ್ನು ಉತ್ತೇಜಿಸುತ್ತದೆ. ಯಾರಾದರೂ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಹೊಂದಿದ್ದರೆ ಈ ಮುದ್ರೆಯ ಮೂಲಕ ನಿಯಂತ್ರಣವನ್ನು ಪಡೆಯಬಹುದು. ಮಾತಂಗಿ ಮುದ್ರೆಯು ನಮ್ಮ ನರಮಂಡಲದ ಪ್ರತಿಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೈಪೋಥಾಲಮಸ್ ಹಾಗೂ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದು ದೇಹದಿಂದ ಮನಸ್ಸಿನ ಸಂಪರ್ಕವನ್ನು ಸುಧಾರಿಸುತ್ತದೆ. ಪರಿಣಾಮವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಥಿರತೆಯನ್ನು ನೀಡುತ್ತದೆ. ಇದು ಪಿತ್ತಕೋಶದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದವಡೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ಆಂತರಿಕ ಸಾಮರಸ್ಯವನ್ನು ಸಾಧಿಸಲು ಕೂಡ ಸಹಾಯ ಮಾಡುತ್ತದೆ.
(ಪ್ರತಿಕ್ರಿಯಿಸಿ: vvsudina@gmail.com)