Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು ಶೋಧಿಸುವುದು, ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವುದು, ತ್ಯಾಜ್ಯವನ್ನು ತೆಗೆದುಹಾಕುವುದು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಹಲವು ಪ್ರಮುಖ ಕಾರ್ಯಗಳನ್ನು ನಮ್ಮ ದೇಹದಲ್ಲಿ ನಿರ್ವಹಿಸುತ್ತವೆ.
ಮೂತ್ರಪಿಂಡಗಳು ದೇಹವನ್ನು ಶುದ್ಧೀಕರಿಸುವ ಪ್ರಮುಖ ಕೆಲಸವನ್ನು ಮಾಡುವುದರಿಂದ ಅವುಗಳಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗಿ ಸಂಗ್ರಹವಾಗುವ ಸಾಧ್ಯತೆಯಿದೆ. ವಿಷಕಾರಿ ವಸ್ತುಗಳು ಸಂಗ್ರಹವಾದಾಗ, ಅವುಗಳನ್ನು ಆಗಾಗ ಸಂಪೂರ್ಣವಾಗಿ ಹೊರಹಾಕಬೇಕು. ಇಲ್ಲದಿದ್ದರೆ, ಆ ವಿಷಕಾರಿ ವಸ್ತುಗಳು ಸಂಗ್ರಹದಿಂದ ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತವೆ.
ಸಮಪರ್ಕವಾಗಿ ನೀರು ಕುಡಿಯುವುದರಿಂದ ಮೂತ್ರಪಿಂಡಗಳಿಂದ ವಿಷವನ್ನು ಹೊರಹಾಕಬಹುದಾದರೂ, ಕೆಲವು ಪಾನೀಯಗಳು ಹೆಚ್ಚು ಪರಿಣಾಮಕಾರಿಯಾಗಿ ವಿಷವನ್ನು ಕಿಡ್ನಿಗಳಿಂದ ಹೊರಹಾಕುತ್ತವೆ. ಅಂತಹ ಪಾನೀಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಇತರೆ ತರಕಾರಿಗಳಿಗಿಂತ ಭಿನ್ನವಾಗಿ ಬೀಟ್‌ರೂಟ್ ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೀಟ್‌ರೂಟ್‌ನಲ್ಲಿರುವ ಫೈಬರ್ ರಕ್ತವನ್ನು ಶುದ್ಧೀಕರಿಸುತ್ತದೆ. ಇದು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೀಟ್‌ರೂಟ್, ಕ್ಯಾರೆಟ್ ಮತ್ತು ಸ್ವಲ್ಪ ಶುಂಠಿಯನ್ನು ಒಟ್ಟಿಗೆ ಜಜ್ಜಿ, ರಸವನ್ನು ಹೊರತೆಗೆದು, ಅದಕ್ಕೆ ನಿಂಬೆ ರಸವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂತ್ರಪಿಂಡಗಳು ಶುದ್ಧವಾಗುತ್ತದೆ.
ಯಕೃತ್ತು ಶುದ್ಧೀಕರಿಸುವ ಪಾನೀಯಗಳಲ್ಲಿ ಆ್ಯಪಲ್ ಸೈಡರ್ ವಿನೆಗರ್ ಮೊದಲ ಸ್ಥಾನದಲ್ಲಿದೆ ಮತ್ತು ದೇಹದಲ್ಲಿ ಪಿಎಚ್ ಸಮತೋಲನವನ್ನು ಕಾಯ್ದುಕೊಳ್ಳಲು ಸಹ ಇದು ಕೆಲಸ ಮಾಡುತ್ತದೆ. ಆ್ಯಪಲ್ ಸೈಡರ್ ವಿನೆಗರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತೇಜಿಸುತ್ತದೆ. ಈ ಆ್ಯಪಲ್ ಸೈಡರ್ ವಿನೆಗರ್ ಅನ್ನು ಒಂದು ಟೀ ಚಮಚ ತೆಗೆದುಕೊಂಡು, ಅದನ್ನು 1 ಗ್ಲಾಸ್ ನೀರಿನಲ್ಲಿ ಬೆರೆಸಿ, 1 ಚಿಟಿಕೆ ಮೆಣಸಿನ ಪುಡಿಯನ್ನು ಸೇರಿಸಿ ಬೆಳಿಗ್ಗೆ ಕುಡಿಯಿರಿ. ಇದು ಮೂತ್ರಪಿಂಡಗಳಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಅವುಗಳ ಆರೋಗ್ಯವನ್ನು ಸ್ಥಿರಗೊಳಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.