ಲೈಫ್‌ಸ್ಟೈಲ್

ಬಾತ್ರೂಮ್​ನಲ್ಲಿ ಟೂತ್​ ಬ್ರಷ್​ ಇಡುವುದು ಅಪಾಯಕಾರಿಯಂತೆ!; ವೈಜ್ಞಾನಿಕ ಕಾರಣ ಇಲ್ಲಿದೆ.. | Toothbrush

Toothbrush : ಸಾಮಾನ್ಯವಾಗಿ ಬೆಳಗ್ಗೆ ಎದ್ದ ಕೂಡಲೇ ಬಾತ್ರೂಮ್​ಗೆ ತೆರಳಿ ಬ್ರಷ್​ನಿಂದ ಹಲ್ಲುಜ್ಜುತ್ತೇವೆ. ಅಲ್ಲದೆ, ಬ್ರಷ್​ ಬಳಿಕ ಅಲ್ಲಿಯೇ ಗೋಡೆಗೆ ಅಥವಾ ಸಣ್ಣ ಬುಟ್ಟಿಗೆ ನೇತಾಕುತ್ತೇವೆ. ಆದರೆ, ಶೌಚಲಯದಲ್ಲಿಯೇ ಬ್ರಷ್​ ಬಿಡುವುದು ಅಪಾಯಕಾರಿಯಂತೆ!

ಹೌದು, ಇದಕ್ಕೆ ವೈಜ್ನಾನಿಕ ಕಾರಣವೂ ಇದೆಯಂತೆ, ಅದೇನು ಎಂದರೆ ಟಾಯ್ಲೆಟ್ ಫ್ಲಶ್‌ನಿಂದ ಹೊರಬರುವ ಬ್ಯಾಕ್ಟೀರಿಯಾಗಳು ಸೇರಿದಂತೆ ಬಾತ್ರೂಮ್​ನಲ್ಲಿನ ಸೂಕ್ಷ್ಮಜೀವಿಗಳು ಸಹ ಹಲ್ಲುಜ್ಜಿದ ಬ್ರಷ್​ ಮೇಲೆ ಕೂತಿರುತ್ತದೆ. ಇದರಿಂದ ಹಲ್ಲುಜ್ಜಿದರೆ ಸಾಮಾನ್ಯವಾಗಿ ಮನುಷ್ಯ ಅನಾರೋಗ್ಯಕ್ಕಿಡಾಗುತ್ತಾನೆ.

ಸಂಶೋಧನೆ ಹೇಳೊದೇನು..?

ನೀವು ಪ್ರತಿ ಬಾರಿ ಫ್ಲಶ್ ಮಾಡಿದಾಗ, ಶೌಚಾಲಯದ ಬಟ್ಟಲಿನಿಂದ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ. ಅದು ನಿಮ್ಮ ಹಲ್ಲುಜ್ಜುವ ಬ್ರಷ್‌ನಂತಹ ಹತ್ತಿರದ ಮೇಲ್ಮೈಗಳ ಮೇಲೆ ಬೀಳುತ್ತದೆ. ಟೂತ್ ಬ್ರಷ್‌ಗಳು. ಕೋಲಿ, ಸ್ಟ್ರೆಪ್ಟೋಕೊಕಸ್ ಮತ್ತು ಅಚ್ಚು ಸೇರಿದಂತೆ ಲಕ್ಷಾಂತರ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು ಎಂದು ಸಂಶೋಧನೆ ತೋರಿಸುತ್ತದೆ.

ಇದನ್ನು ತಡೆಯಲು ಏನು ಮಾಡಬೇಕು..?

1.ವಾರಕ್ಕೊಮ್ಮೆ ಟೂತ್​ ಬ್ರಷ್​ ಅನ್ನು ಸ್ವಚ್ಛಗೊಳಿಸಲು ಮರೆಯಬೇಡಿ.

2.ಬಿರುಗೂದಲುಗಳನ್ನು ಆಂಟಿಬ್ಯಾಕ್ಟೀರಿಯಲ್ ಮೌತ್‌ವಾಶ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್‌ನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಮತ್ತು ಸಂಗ್ರಹವಾಗುವುದನ್ನು ತಡೆಯುತ್ತದೆ.

3.ಪ್ರತಿ 3 ತಿಂಗಳಿಗೊಮ್ಮೆ ಟೂತ್​​ ಬ್ರಷ್​ ಬದಲಾಯಿಸಿ.

4. ಶೌಚಾಲಯದಿಂದ ಬ್ರಷ್​ ಅನ್ನು 6 ಅಡಿ ದೂರ ಇಡಿ.

5. ಗಾಳಿಯಾಡದ ಕವರ್​ ಅನ್ನು ತಪ್ಪಿಸಿ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.