ಲೈಫ್‌ಸ್ಟೈಲ್

'ಹೃದಯ' ದುರ್ಬಲವಾಗುತ್ತಿದ್ದರೆ ನಿಮ್ಮ ದೇಹದಲ್ಲಿ ಈ 5 ಸಂಕೇತಗಳು ಕಾಣಿಸಿಕೊಳ್ಳಲಿವೆಯಂತೆ| Heart

Health tips; ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಹೃದಯದ ಸಮಸ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ನಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ. ಹೃದಯದ ಕಾಯಿಲೆ ಕೇವಲ ವಯಸ್ಸಾದವರ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ ಯುವಜನರು ಸಹ ವೇಗವಾಗಿ ಈ ಸಮಸ್ಯೆ ಎದುರಿಸುವಂತಾಗಿದೆ. ಕೆಟ್ಟ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ದೈಹಿಕ ಚಟುವಟಿಕೆ ಮತ್ತು ಅನಿಯಮಿತ ದಿನಚರಿಯಿಂದಾಗಿ, ಚಿಕ್ಕ ವಯಸ್ಸಿನಲ್ಲಿಯೇ ಹೃದಯವು ದುರ್ಬಲಗೊಳ್ಳುತ್ತಿದೆ. ಹೃದಯ ಆರೋಗ್ಯದಿಂದಿರಬೇಕಾದರೆ ನಮ್ಮ ಹೃದಯ ದುರ್ಬಲವಾಗುತ್ತಿದೆ ಎಂಬುವುದನ್ನು ತಿಳಿಯುವುದು ಬಹಳ ಮುಖ್ಯ.

ಹೃದಯವು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ನಿರಂತರವಾಗಿ ದೇಹದ ಜೀವಕೋಶಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯವು ದುರ್ಬಲಗೊಳ್ಳಲು ಪ್ರಾರಂಭಿಸಿದಾಗ, ದೇಹವು ಅನೇಕ ರೀತಿಯ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಅವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಹೃದಯ ದುರ್ಬಲಗೊಂಡಾಗ ದೇಹವು ನೀಡಲು ಪ್ರಾರಂಭಿಸುವ ಆ 5 ಪ್ರಮುಖ ಲಕ್ಷಣಗಳನ್ನು ತಿಳಿಯೋಣ.

ಹೃದಯ ಸಮಸ್ಯೆಯ ಲಕ್ಷಣಗಳು:

ಹೆಚ್ಚಿದ ಆಯಾಸ

ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ, ಹೆಚ್ಚು ಕೆಲಸ ಮಾಡದಿದ್ದರೂ ಸಹ ಆಯಾಸದ ಅನುಭವವಾಗುತ್ತದೆ. ಕೆಲವೊಮ್ಮೆ ಸಾಕಷ್ಟು ನಿದ್ರೆ, ವಿಶ್ರಾಂತಿ ಪಡೆದ ಬಳಿಕವೂ ಈ ಆಯಾಸ ಕಂಡುಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ವೇಗದ ಹೃದಯ ಬಡಿತ

ಇಂತಹ ಸಮಸ್ಯೆಯ ಸಂದರ್ಭದಲ್ಲಿ, ಹೃದಯದ ಬಡಿತವು ವೇಗವಾಗಿರುತ್ತದೆ ಇದು ಹೃದಯ ಸಮಸ್ಯೆಯ ಆರಂಭಿಕ ಮತ್ತು ಪ್ರಮುಖ ಸಂಕೇತವಾಗಿರಬಹುದು.

ಉಸಿರಾಟದ ಸಮಸ್ಯೆ

ಉಸಿರಾಟದ ತೊಂದರೆ ಹೃದಯ ಸಮಸ್ಯೆಗಳ ಆರಂಭಿಕ ಲಕ್ಷಣವಾಗಿದೆ. ಮೆಟ್ಟಿಲುಗಳನ್ನು ಹತ್ತುವಾಗ, ಹಗುರವಾದ ಕೆಲಸ ಮಾಡುವಾಗ ಅಥವಾ ಕೆಲವೊಮ್ಮೆ ವಿಶ್ರಾಂತಿ ಪಡೆಯುವಾಗಲೂ ಸಂಭವಿಸಬಹುದು.

ದೇಹದಲ್ಲಿ ಊತ

ಹೃದಯ ದುರ್ಬಲವಾದಾಗ ದೇಹದ ಕೆಲವು ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುವುದಿಲ್ಲ. ಇದು ದೇಹದಲ್ಲಿ ದ್ರವ ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಪಾದಗಳು, ಕಣಕಾಲುಗಳು, ಕಾಲ್ಬೆರಳುಗಳು ಅಥವಾ ಹೊಟ್ಟೆಯ ಸುತ್ತಲೂ ಸಂಭವಿಸುತ್ತದೆ.

ಮೂರ್ಛೆ ತಪ್ಪುವುದು

ಹೃದಯ ಸಮಸ್ಯೆ ಉಂಟಾದಾಗ, ಮೆದುಳಿಗೆ ಮತ್ತು ದೇಹದ ಇತರ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ. ಹಾಗಾಗಿ ರೋಗಿಯು ಆಗಾಗ್ಗೆ ತಲೆತಿರುಗುವಿಕೆ ಅಥವಾ ಹಠಾತ್ ಮೂರ್ಛೆ ಹೋಗುವಂತಹ ಸಮಸ್ಯೆಗಳಿಗೆ ಒಳಗಾಗುತ್ತಾನೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಲ್ಲಿ, ಎದೆ ನೋವು, ಒತ್ತಡ, ಹಸಿವಿನ ಕೊರತೆ, ತೂಕ ಇಳಿಕೆ ಅಥವಾ ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಸಂಭವಿಸುತ್ತವೆ. ಇಂತಹ ಲಕ್ಷಣಗಳು ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆಯುವುದರಿಂದ ಹೃದಯ ಸಮಸ್ಯೆಯನ್ನು ತಡೆಗಟ್ಟಬಹುದು.