ಲೈಫ್‌ಸ್ಟೈಲ್

ನಿಮ್ಮ ಮೂತ್ರದಲ್ಲಿ ಈ 5 ಲಕ್ಷಣಗಳನ್ನು ಕಂಡುಬಂದ್ರೆ ನಿಮ್ಮ ಲಿವರ್​​ ಡ್ಯಾಮೇಜ್​ ಆಗುತ್ತಿದೆ ಎಂದರ್ಥ! | Liver

Liver : ನಮ್ಮ ಲಿವರ್​(ಯಕೃತ್ತು) ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ರಕ್ತ ಶುದ್ದಿಗೊಳಿಸಲು, ವಿಷವನ್ನು ತಗೆದುಹಾಕಲು, ಜೀರ್ಣಕ್ರಿಯೇ ಸಹಾಯ ಮಾಡಲು ಮತ್ತು ಅಗತ್ಯವಾದ ಪ್ರೋಟಿನ್​​ ಉತ್ಪಾದಿಸುವ ಕೆಲಸ ಮಾಡುತ್ತದೆ. ಅದು ಸರಿಯಾದ ಕಾರ್ಯ ನಿರ್ವಹಿಸುವುದು ನಿಲ್ಲಿಸಿದಾಗ ದೇಹದಲ್ಲಿ ಅನೇಕ ಲಕ್ಷಣಗಳು ಗೋಚರಿಸುತ್ತದೆ. ಅಲ್ಲದೆ, ಇದು ಮೊದಲು ಮೂತ್ರದಲ್ಲಿ ಕಂಡು ಬರುತ್ತದೆ. ಈ ಲಕ್ಷಣಗಳು ಏನು ಎಂಬುದು ನೋಡೋಣ..

ಮೂತ್ರ ಹಳದಿ ಬಣ್ಣ ತಿರುಗುವುದು

ನಿಮ್ಮ ಮೂತ್ರವು ಸಾಮಾನ್ಯಕ್ಕಿಂತ ಗಾಢ ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿದ್ದರೆ, ಅದು ಯಕೃತ್ತಿನ ಸಮಸ್ಯೆಯ ಮೊದಲ ಚಿಹ್ನೆಯಾಗಿರಬಹುದು. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಈ ರೀತಿಯ ಮೂತ್ರ ಉಂಟಾಗುತ್ತದೆ. ಇದು ನಿಮಗೆ ಆಗುತ್ತಿದ್ದರೆ ತಕ್ಷಣ ಜಾಗರೂಕರಾಗಿರಿ.

ದುರ್ವಾಸೆನೆ ಮೂತ್ರ

ಅಸಹಜವಾಗಿ ಹಾಗೂ ಬಲವಾದ ದುರ್ವಾಸನೆಯುಳ್ಳ ಮೂತ್ರ ಯಕೃತ್ತಿಯ ಹಾನಿಯಾಗುವ ಮತ್ತೊಂದು ಲಕ್ಷಣವಾಗಿದೆ. ಯಕೃತ್ತು ವಿಷವನ್ನು ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗದಿದ್ದಾಗ, ಅವು ಮೂತ್ರಪಿಂಡಗಳು ಮತ್ತು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ, ಇದು ಮೂತ್ರದಲ್ಲಿ ದುರ್ವಾಸನೆಯನ್ನು ಉಂಟುಮಾಡಬಹುದು.

ನೊರೆ ಮೂತ್ರ

ಮೂತ್ರವು ನೊರೆಯಂತೆ ಕಾಣಿಸಿಕೊಂಡರೆ ಮತ್ತು ಇದು ಮುಂದುವರಿದರೆ, ಅದು ಪ್ರೋಟೀನ್ ಸೋರಿಕೆಯ ಸಂಕೇತವಾಗಿರಬಹುದು, ಇದು ಯಕೃತ್ತಿನ ಹಾನಿ ಅಥವಾ ಯಕೃತ್ತಿನ ಸಿರೋಸಿಸ್‌ಗೆ ಸಂಬಂಧಿಸಿದೆ.

ಸುಡವ ಸಂವೇದನೆ

ಯಕೃತ್ತಿನ ಕಾಯಿಲೆಯು ದೇಹದಲ್ಲಿ ಅಮೋನಿಯಾ ಮಟ್ಟವನ್ನು ಹೆಚ್ಚಿಸಬಹುದು, ಇದು ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆಯನ್ನು ಉಂಟುಮಾಡಬಹುದು. ಪದೇ ಪದೇ ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ ಕಂಡುಬಂದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ.

ಆಗಾಗ್ಗೆ ಮೂತ್ರ ವಿಸರ್ಜನೆ

ಯಕೃತ್ತಿನ ಹಾನಿಯು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು, ಆದರೆ ಇದು ಸಣ್ಣ ಪ್ರಮಾಣದಲ್ಲಿ ಸಂಭವಿಸಿದರೆ ಈ ಚಿಹ್ನೆಯು ಯಕೃತ್ತಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ಸೂಚಿಸುತ್ತದೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.