ಲೈಫ್‌ಸ್ಟೈಲ್

ಅಲರ್ಜಿಗೆಲ್ಲಾ ಯಾಕ್ರೀ ಆಸ್ಪತ್ರೆಗೆ ಹೋಗ್ತಿರಾ ಸುಲಭವಾಗಿ ಮನೆಯಲ್ಲೇ ಮಾಡಿ ಈ ಮನೆಮದ್ದು| Home remidies

Home remidies: ಇಂದಿನ ದಿನಗಳಲ್ಲಿ ಅಲರ್ಜಿ ಲಕ್ಷಣಗಳು ಎಲ್ಲರಿಗೂ ಬರುವಂತಹ ಸಾಮಾನ್ಯ ಚರ್ಮದ ಕಾಯಿಲೆಯಾಗಿದೆ. ಇದು ತೀವ್ರವಾಗಿಯೂ ಕಾಣಿಸಿಕೊಳ್ಳಬಹುದು. ಅಥವಾ ಚಿಕ್ಕದಾಗಿಯೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನಾವು ಆಹಾರವನ್ನು ಸೇವಿಸಿದ ನಂತರ ತೀವ್ರವಾಗಿ ಅಲರ್ಜಿ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೀತಿಯ ಸಮಸ್ಯೆಗಳಿಗೆ ತಕ್ಷಣವೇ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಈ ರೀತಿಯ ಮನೆಮದ್ದು ಮಾಡಿ ಸೇವಿಸಿ ಇದರಿಂದ ತ್ವರಿತ ಆರಾಮದಾಯಕ ಆರೋಗ್ಯವನ್ನು ನೀವು ಪಡೆಯುತ್ತೀರಿ...

* ಅರ್ಧ ನಿಂಬೆ

ಒಂದು ಗ್ಲಾಸ್​ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ ಅದಕ್ಕೆ ಅರ್ಧ ನಿಂಬೆ ಹಣ್ಣು ಹಿಂಡಿ ಚಿಟಿಕೆ ಉಪ್ಪು ಹಾಗೂ ಚಿಟಿಕೆ ಸಕ್ಕರೆ ಹಾಕಿ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಮೈಯಲ್ಲಿರುವ ಬ್ಯಾಕ್ಟೀರಿಯಾಗಳು ಕೊಲ್ಲುವುದರಿಂದ ಅಲರ್ಜಿ, ಮೈ ತುರಿಕೆ ಕಡಿಮೆ ಮಾಡುತ್ತದೆ.

* ಜೇನುತುಪ್ಪ

ಒಂದು ಚಮಚ ಜೇನುತುಪ್ಪವನ್ನು ದಿನವಿಡೀ ಸೇವಿಸುವುದರಿಂದ ಇದು ಅಲರ್ಜಿಯನ್ನು ಕಡಿಮೆ ಮಾಡಬಹುದು. ಹಾಗೆಯೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಅರಿಶಿನ

ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ಅರಿಶಿನವನ್ನು ಬೆರೆಸಿ ಎರಡು ದಿನಕೊಮ್ಮೆ ಕುಡಿಯುವುದರಿಂದ ಅಲರ್ಜಿ ಲಕ್ಷಣಗಳು ಕಡಿಮೆಯಾಗುತ್ತವೆ. ಹಾಗೇ ಇದರ ಉರಿಯೂತ ನಿವಾರಕ ಗುಣಗಳು ಅಲರ್ಜಿಯ ಲಕ್ಷಣಗಳನ್ನು ಶಮನಗೊಳಿಸುತ್ತವೆ.

* ತುಳಸಿ ಚಹಾ

6-7 ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಪ್ರತಿದಿನ ಕುಡಿಯಿರಿ ಇದರಿಂದ ಇದು ಶ್ವಾಸಕೋಶದ ಅಲರ್ಜಿಗಳಾದ ಕೆಮ್ಮು ಮತ್ತು ಸೀನುವಿಕೆಗೆ ಪರಿಹಾರ ನೀಡುತ್ತದೆ.

* ಶುಂಠಿ

ಪ್ರತಿದಿನ ಶುಂಠಿಯ ತುಂಡುಗಳನ್ನು ಜಗಿಯುವುದು ಅಥವಾ ಬಚ್ಚಗಿನ ನೀರಿಗೆ ಶುಂಠಿ ಹಾಕಿ ಕುದಿಸಿ ಕುಡಿಯಿರಿ. ಇಲ್ಲವೇ ಶುಂಠಿ ಚಹಾ ಮಾಡಿಕೊಂಡು ಪ್ರತಿನಿತ್ಯ ಸೇವಿಸುವುದರಿಂದ ಇದು ಗಂಟಲು ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹಾಗೂ ಇದು ಕಿರಿಕಿರಿಯನ್ನು ಶಾಂತಗೊಳಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ.

* ಆವಿಯ ಉಸಿರಾಟ

ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿನೀರು ಹಾಕಿ ಅದಕ್ಕೆ ವಿಕ್ಸ್​ ರೀತಿಯ ಔಷಧವನ್ನು ಆ ನೀರಿಗೆ ಹಾಕಿ ತಲೆಯ ಮೇಲೆ ಬೆಡ್​ ಶೀಟ್​ ಮುಚ್ಚಿಕೊಂಡು ಕೆಲವು ಸಮಯ ಆವಿಯ ಉಸಿರಾಟವನ್ನು ತೆಗೆದುಕೊಳ್ಳಿ. ಇದು ಗಂಟಲಿನ ಒಳಗಿನ ಲೋಳೆಯನ್ನು ತೇವಗೊಳಿಸುತ್ತದೆ ಮತ್ತು ಉಗಿಯಿಂದ ಹಾಗೂ ಇದು ಅಲರ್ಜಿಯಂತಹ ಸೋಂಕನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ