ಲೈಫ್‌ಸ್ಟೈಲ್

ಪ್ರತಿದಿನ ಮಲಗುವ ಮುನ್ನ ಬಿಸಿ ನೀರು ಕುಡಿದರೆ ಈ ಎಲ್ಲ ಸಮಸ್ಯೆಗಳು ಮಾಯವಾಗುತ್ತೆ... Hot Water

ರಮೇಶ್​ ಕುಮಾರ್​​ ಬಿ ಎಡಮೋಳೆ

Hot Water : ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಆದರೆ, ಆರೋಗ್ಯ ಬೇರೆಲ್ಲೂ ಇಲ್ಲ ಅದು ನಮ್ಮ ಕೈಯಲ್ಲಿಯೇ ಇದೆ. ಅದಕ್ಕಾಗಿ ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯವಾಗಿರಲು ಪೌಷ್ಟಿಕಾಂಶ ಸೇವನೆ, ಸರಿಯಾದ ಸಮಯಕ್ಕೆ ಮಲಗುವುದು, ಸಾಕಷ್ಟು ನೀರು ಕುಡಿಯುವುದು, ಒತ್ತಡ ನಿವಾರಣೆ ಹಾಗೂ ವ್ಯಾಯಾಮ ಸೇರಿದಂತೆ ಎಲ್ಲವೂ ಮುಖ್ಯ. ಅದೇ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ಏನಾಗಿಬಿಡುತ್ತದೆ ಎಂದು ನೀವು ಆಶ್ಚರ್ಯಪಡಬಹುದು? ಅದಕ್ಕೆ ಉತ್ತರ ಇಲ್ಲಿದೆ. ಬಿಸಿ ನೀರು ಕುಡಿಯುವುದರಿಂದಿ ಈ ಎಲ್ಲ ಪ್ರಯೋಜನಗಳನ್ನು ನೀವು ಪಡೆಯಬಹುದು.

ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಬೆಳಿಗ್ಗೆ ಎದ್ದಾಗ ಯಾವುದೇ ಅಡೆತಡೆಯಿಲ್ಲದ ಮಲ ವಿಸರ್ಜನೆಗೆ ಸಹಕಾರಿಯಾಗಿದೆ. ನಿಮಗೆ ಮಲಬದ್ಧತೆಯಂತಹ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಇದರಿಂದ ಹೊಟ್ಟೆ ಉಬ್ಬರ, ಹೊಟ್ಟೆನೋವಿನಂತಹ ಸಮಸ್ಯೆಗಳೂ ದೂರವಾಗುತ್ತವೆ.

ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನರಮಂಡಲವು ವಿಶ್ರಾಂತಿ ಪಡೆಯುತ್ತದೆ. ಇದಲ್ಲದೆ, ಇದು ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಶಾಂತವಾಗಿ ಮತ್ತು ಆರಾಮವಾಗಿ ಮಲಗಬಹುದು. ಬಿಸಿನೀರು ಕುಡಿಯುವುದರಿಂದ ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕುತ್ತದೆ.

ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಅಲ್ಲದೆ, ಬಿಸಿ ನೀರು ಬೆವರುವಿಕೆಗೆ ಕಾರಣವಾಗಿ, ದೇಹದಲ್ಲಿರುವ ಕಲ್ಮಶಗಳನ್ನು ಸುಲಭವಾಗಿ ಹೊರಹಾಕುತ್ತದೆ. ಇದಿಷ್ಟೇ ಅಲ್ಲದೆ, ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ತೂಕ ಇಳಿಸಬಹುದು. ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಹಲವಾರು ಪ್ರಯೋಜನಗಳಿವೆ.

ತಣ್ಣೀರು ಮತ್ತು ಬಿಸಿನೀರು ಮಿಶ್ರಣ ಮಾಡಬೇಡಿ

ಆಯುರ್ವೇದ ಪ್ರಕಾರ ಬಿಸಿ ನೀರು ಹಾಗೂ ತಣ್ಣೀರನ್ನು ಒಟ್ಟಿಗೆ ಕುಡಿಯಬಾರದು. ತಣ್ಣೀರು ಭಾರವಾಗಿರುತ್ತದೆ ಮತ್ತು ಬಿಸಿನೀರು ಹಗುರವಾಗಿರುತ್ತದೆ. ಇವೆರಡನ್ನು ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಕುದಿಯುವ ನೀರು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದರೆ, ಫ್ರಿಡ್ಜ್‌ನಲ್ಲಿ ಕುದಿಸದೆ ಇಟ್ಟಿರುವ ನೀರು ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಆದ್ದರಿಂದ ಇವೆರಡನ್ನು ಬೆರೆಸುವುದು ಆರೋಗ್ಯಕ್ಕೆ ಹಾನಿಕರ. ಬಿಸಿನೀರು ಗ್ಯಾಸ್​ ಮತ್ತು ಕಫವನ್ನು ಶಮನಗೊಳಿಸುತ್ತದೆ. ಆದರೆ, ತಣ್ಣೀರು ಎರಡನ್ನೂ ಕೆರಳಿಸುತ್ತದೆ ಮತ್ತು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ಬಿಸಿ ನೀರು ಮತ್ತು ತಣ್ಣೀರಿನ ಮಿಶ್ರಣವು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಮತ್ತು ವಾಯು ದೋಷಕ್ಕೆ ಕಾರಣವಾಗುತ್ತದೆ. ಇದಿಷ್ಟೇ ಅಲ್ಲದೆ, ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಬಿಸಿನೀರು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ಶುದ್ಧಗೊಳಿಸುತ್ತದೆ. ಆದರೆ, ತಣ್ಣೀರು ಅವುಗಳನ್ನು ಸಂಕುಚಿತಗೊಳಿಸುತ್ತದೆ.

ಹಾಗಾದ್ರೆ ನೀರನ್ನು ಹೇಗೆ ಕುಡಿಯಬೇಕು?

ಮಣ್ಣಿನ ಪಾತ್ರೆಯಲ್ಲಿನ ನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ನೈಸರ್ಗಿಕವಾಗಿ ತಣ್ಣಗಾಗುತ್ತದೆ ಮತ್ತು ನೀರನ್ನು ಶುದ್ಧವಾಗಿಡುತ್ತದೆ. ಇದು ನೀರಿನಲ್ಲಿರುವ ಖನಿಜಗಳನ್ನು ಸಹ ರಕ್ಷಿಸುತ್ತದೆ. ಮಣ್ಣಿನ ಮಡಕೆಗಳು ಸ್ಥಿರ ಮತ್ತು ಮಧ್ಯಮ ತಾಪಮಾನವನ್ನು ನಿರ್ವಹಿಸುತ್ತವೆ. ಹಾಗಾಗಿ ಮಣ್ಣಿನ ಪಾತ್ರೆಯಲ್ಲಿರುವ ನೀರು ದೇಹಕ್ಕೆ ಒಳ್ಳೆಯದು ಎಂದು ಆಯುರ್ವೇದ ತಿಳಿಸುತ್ತದೆ. ಮಣ್ಣಿನ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರು ಹೆಚ್ಚು ಆಮ್ಲಜನಕಯುಕ್ತವಾಗಿರುತ್ತದೆ. ಅದಕ್ಕಾಗಿಯೇ ಇದು ಬಿಸಿ ವಾತಾವರಣದಲ್ಲಿಯೂ ತಂಪಾಗಿರುತ್ತದೆ. ಈ ನೀರು ನಿಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಮತ್ತು ಕಫ ದೋಷವನ್ನು ಹೆಚ್ಚಿಸದೆ ನಿಮ್ಮ ದೇಹವನ್ನು ತಂಪಾಗಿಸುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)