ಬೆಂಗಳೂರು: ನಿಮ್ಮ ವಾಹನದ ಟೈರ್‌ಗಳು ಸವೆದಾಗ ಅವಘಡ ಸಂಭವಿಸದಂತೆ ಅವುಗಳನ್ನು ಮೊದಲೇ ಬದಲಿಸುವುದರ ಬಗ್ಗೆ ತಿಳಿದಿರಬೇಕು. ಅನೇಕ ಬಾರಿ ಟೈರ್‌ಗಳ ಬದಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಬಿರುಕುಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಕೆಲವರು ಒಂದು ಸಣ್ಣ ರೇಖೆ ಕಂಡ ತಕ್ಷಣ ಟೈರ್ ಬದಲಿಸುತ್ತಾರೆ. ಅದರೆ ಅಂತಹ ಟೈರ್‌ಗಳು ಓಡಿಸಲು ಯೋಗ್ಯವಾಗಿರುತ್ತದೆ.
ಬಿರುಕು ಯಾವ ಪ್ರಮಾಣದಲ್ಲಿ ಇದ್ದಾಗ ಟೈರ್ ಬದಲಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಟೈರ್‌ನ ಬದಿಯಲ್ಲಿ ಕಾಣುವ ಬಿರುಕನ್ನು ತಕ್ಷಣದಲ್ಲಿ ಸರಿಪಡಿಸಬಹುದು. ಚಿಕ್ಕ ಅಥವಾ ಆಳವಿಲ್ಲದ ಬಿರುಕಿನಿಂದ ಯಾವುದೇ ಅಪಾಯವಿಲ್ಲ. ಟೈರ್ನಲ್ಲಿ ಬಿರುಕು, ಕಡಿತ ಅಥವಾ ಉಬ್ಬುಗಳಾಗಲು ಹಲವಾರು ಕಾರಣಗಳಿವೆ. ಟೈರ್‌ನ ಗುಣಮಟ್ಟ, ಹವಾಮಾನ, ಪಂಚರ್ಗಳು ಟೈರ್‌ನ ಜೀವಿತಾವಧಿಯನ್ನು ನಿರ್ಧರಿಸುತ್ತವೆ. ಬಿರುಕು ಬಹಳ ಆಳವಾಗಿದ್ದರೆ ಟೈರ್ ಬದಲಾಯಿಸದೆ ಬೇರೆ ಆಯ್ಕೆ ಇಲ್ಲ.
ಬಿರುಕಿನ ಆಳವನ್ನು ಒಂದು ಸುಲಭ ಪರೀಕ್ಷೆಯ ಮೂಲಕ ಕಂಡುಹಿಡಿಯಬಹುದು. ಟಾರ್ಚ್ ಲೈಟ್ನ ಸಹಾಯದಿಂದ ಟೈರ್‌ನ ಬದಿಯಲ್ಲಿರುವ ಬಿರುಕನ್ನು ನೋಡಬೇಕು. ಕೇವಲ ರಬ್ಬರ್ ಗೋಚರಿಸಿದರೆ ಅಂತಹ ಟೈರ್ಗಳನ್ನು ಇನ್ನೂ ಕೆಲವು ದಿನಗಳವರೆಗೆ ಓಡಿಸಬಹುದು. ಆದರೆ ಲೋಹದ ತಂತಿಯ ಹಾಗೆ ಇದ್ದರೆ ಅದನ್ನು ಆದಷ್ಟು ಬೇಗ ಬದಲಿಸಬೇಕು.
ಟೈರ್‌ನ ಬದಿಯಲ್ಲಾಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಟೈರ್‌ನ ಸೈಡ್‌ವಾಲ್‌ಗಳಿಂದ ಉಂಟಾಗುವ ಒತ್ತಡ ಹೆಚ್ಚು. ಅದನ್ನು ಸರಿಪಡಿಸಲು ಕೆಲವು ರೀತಿಯ ಲೋಷನ್ ಅಥವಾ ರಬ್ಬರ್ ಪೀಸ್ ಬಳಸಿದರೂ ಕಾರಿನ ತೂಕ, ಡ್ರೈವಿಂಗ್ ಶೇರ್ ಫೋರ್ಸ್, ಟಾರ್ಕ್ ವ್ಯತ್ಯಾಸವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಸೈಡ್ ವಾಲ್ ಗೆ ಟೈರ್ ಅನ್ನು ಸುರಕ್ಷಿತವಾಗಿ ಸರಿಪಡಿಸಲು ಯಾವುದೇ ಮಾರ್ಗವಿಲ್ಲ. ಆದರೆ ಟೈರ್ಗಳಲ್ಲಿ ಬಿರುಕುಗಳು ಕಾಣಿಸದಂತೆ ನೋಡಿಕೊಳ್ಳಲು ಕೆಲವು ಕ್ರಮಗಳಿವೆ:
1. ಸರಿಯಾದ ಟೈರ್ ಒತ್ತಡವನ್ನು ಕಾಪಾಡಿಕೊಳ್ಳಬೇಕು
2. ವಾಹನ ಓವರ್-ಲೋಡ್ ಆಗಬಾರದು
3. ವಾಹನವನ್ನು ನೆರಳಿನಲ್ಲಿ ನಿಲ್ಲಿಸಬೇಕು
4. ಟೈರ್ ಕ್ಲೀನರ್ ಅನ್ನು ಹೆಚ್ಚಾಗಿ ಬಳಸಬಾರದು
5. ಬ್ರೇಕ್ ಡಸ್ಟ್ ನಂತಹ ಮಾಲಿನ್ಯಕಾರಕಗಳನ್ನು ತೆಗೆಯಲು ಟೈರ್ ಅನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು
6. ವಾಹನವನ್ನು ಸುಮ್ಮನೆ ನಿಲ್ಲಿಸಬಾರದು, ಆಗಾಗ್ಗೆ ಓಡಿಸಬೇಕು (ಏಜೆನ್ಸೀಸ್)