ಲೈಫ್‌ಸ್ಟೈಲ್

ಇಡ್ಲಿ ವೆರೈಟಿ: ಸಬ್ಬಕ್ಕಿ ಇಡ್ಲಿ, ಸ್ಟಫ್ಡ್ ಇಡ್ಲಿ ಮತ್ತು ಮಲ್ಲಿಗೆ ಇಡ್ಲಿ ಮನೆಯಲ್ಲಿ ಮಾಡಿ ಸವಿಯಿರಿ

kumarvrl

ಸಬ್ಬಕ್ಕಿ ಇಡ್ಲಿ

ಬೇಕಾಗುವ ಸಾಮಗ್ರಿಗಳು: ಅರ್ಧ ಕಪ್ ಸಾಬಕ್ಕಿ ಒಂದು ಕಪ್ ಇಡ್ಲಿ ರವೆ ಎರಡು ಕಪ್ ಮೊಸರು ಒಂದು ಕಪ್ ನೀರು ಕಾಲು ಚಮಚ ಬೇಕಿಂಗ್ ಸೋಡಾ ಉಪ್ಪು. ಒಗ್ಗರಣೆಗೆ ಎಣ್ಣೆ ಸಾಸಿವೆ ಗೋಡಂಬಿ ಕರಿವಿನ ಸೊಪ್ಪು .

ಮಾಡುವ ವಿಧಾನ: ಮಿಕ್ಸಿಂಗ್ ಬೌಲ್​ನಲ್ಲಿ ಸಬ್ಬಕ್ಕಿ, ಇಡ್ಲಿ ರವೆ, ಮೊಸರು, ನೀರು ಹಾಕಿ ಎಂಟು ಗಂಟೆ ನೆನೆಸಿಡಿ. ನಂತರ ಹಿಟ್ಟನ್ನು ಚೆನ್ನಾಗಿ ಕೆಡಿಸಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿರಿ. ಸಾಸಿವೆ, ಗೋಡಂಬಿ ಹಾಗೂ ಕರಿಬೇವಿನ ಒಗ್ಗರಣೆ ಹಾಕಿ ಹಿಟ್ಟಿಗೆ ಬೆರೆಸಿ. ಅದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿ ಕೂಡಲೇ 7 ರಿಂದ 10 ನಿಮಿಷ ಬೇಯಿಸಿರಿ. ಇದನ್ನು ಚಟ್ನಿ ಜತೆ ಸವಿಯಲು ನೀಡಿ .

ಸ್ಟಫ್ಡ್ ಇಡ್ಲಿ

ಬೇಕಾಗುವ ಸಾಮಾಗ್ರಿಗಳು: ಒಂದು ಕಪ್ ಹುರಿದ ಸಣ್ಣ ರವೆ ಒಂದು ಕಪ್ ಮೊಸರು ಅರ್ಧ ಚಮಚ ಬೇಕಿಂಗ್ ಸೋಡಾ ಉಪ್ಪು.

ಸ್ಟಂಪಿಂಗ್ ಮಾಡಲು ಬೇಕಾಗುವ ಸಾಮಗ್ರಿಗಳು: ಮೂರು ಬೇಯಿಸಿದ ಬಟಾಟೆ ಒಂದು ಹೆಚ್ಚಿದ ನೀರುಳ್ಳಿ ಎರಡು ಹಸಿಮೆಣಸಿನಕಾಯಿ ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ ಹಳದಿಪುಡಿ ಸ್ವಲ್ಪ ಕರಿಬೇವಿನ ಎಲೆಗಳು ಜೀರಿಗೆ ಒಂದು ಚಮಚ ಇಂಗು ಉಪ್ಪು .

ಮಾಡುವ ವಿಧಾನ: ಹುರಿದ ರವೆ, ಮೊಸರು, ನೀರು ಹಾಕಿ ಸರಿಯಾಗಿ ಬೆರೆಸಿ ಅರ್ಧ ಗಂಟೆ ಇಡಿ. ಬೇಯಿಸುವ ಮೊದಲು ಉಪ್ಪು ಹಾಗೂ ಅರ್ಧ ಚಮಚ ಬೇಕಿಂಗ್ ಸೋಡವನ್ನು ಹಾಕಿ ಕಲಿಸಿರಿ.

ಸ್ಟಫಿಂಗ್ ಮಾಡುವ ವಿಧಾನ: ಒಗ್ಗರಣೆಗೆ ಸಾಸಿವೆ, ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಹಳದಿ, ಕರಿಬೇವು ಎಲೆಗಳು, ಇಂಗು, ಇಉಪ್ಪು,ಈರುಳ್ಳಿ ಹಾಕಿ ಸರಿಯಾಗಿ ಹುರಿಯಿರಿ. ನಂತರ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಬೆರೆಸಿರಿ ಸ್ಟಫಿಂಗ್ ರೆಡಿ .

ಬೇಯಿಸುವಾಗ ಇಡ್ಲಿ ಸ್ಟಾಂಡ್​ಗೆ ಸ್ವಲ್ಪ ಇಡ್ಲಿ ಹಿಟ್ಟನ್ನು ಹಾಕಿ ಅದರ ಮೇಲೆ ಒಂದು ಚಮಚ ಸ್ಟಫಿಂಗ್ ಹರಡಿಸಿರಿ. ಸ್ಟಫಿಂಗ್ ಹಾಕಿದ ಮೇಲೆ ಪುನಃ ಇಡ್ಲಿ ಹಿಟ್ಟನ್ನು ಅದರ ಮೇಲೆ ಹಾಕಿರಿ. ಹೀಗೆ ಎಲ್ಲ ಇಡ್ಲಿಗಳನ್ನು ತಯಾರಿಸಿ. ಇದನ್ನು ಹತ್ತು ನಿಮಿಷ ಬೇಯಿಸಿರಿ. ಚಟ್ನಿಯ ಜತೆ ಸವಿಯಲು ನೀಡಿ .

ಮಲ್ಲಿಗೆ ಇಡ್ಲಿ

ಬೇಕಾಗುವ ಸಾಮಾಗ್ರಿಗಳು: ಒಂದು ಕಪ್ ಉದ್ದಿನ ಬೇಳೆ ಒಂದು ಕಪ್ ಅವಲಕ್ಕಿ ಎರಡು ಕಪ್ ಇಡ್ಲಿ ರವೆ

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಹಾಗೂ ಅವಲಕ್ಕಿಯನ್ನು ನಾಲ್ಕು ಗಂಟೆ ನೆನೆಸಿಡಿರಿ. ಇನ್ನೊಂದು ಪಾತ್ರೆಯಲ್ಲಿ ಇಡ್ಲಿ ರವೆಯನ್ನು ನಾಲ್ಕು ಗಂಟೆ ನೆನೆಸಿಡಿರಿ. ಉದ್ದಿನ ಬೇಳೆ ಹಾಗೂ ಅವಲಕ್ಕಿಯನ್ನು ಒಟ್ಟಿಗೆ ರುಬ್ಬಿ ಇಡ್ಲಿ ಹಿಟ್ಟನ್ನು ಮಾಡಿ. ಈ ಹಿಟ್ಟಿಗೆ ನೆನೆಸಿದ ಇಡ್ಲಿ ರವೆಯನ್ನು ಬೆರೆಸಿ, ಉಪ್ಪನ್ನು ಬೆರೆಸಿ ಹಿಟ್ಟನ್ನು ಇಡ್ಲಿ ಸ್ಟಾ್ಯಂಡ್​ನಲ್ಲಿ ಹಾಕಿ ಏಳು ನಿಮಿಷ ಬೇಯಿಸಿರಿ.