Pothos  
ಲೈಫ್‌ಸ್ಟೈಲ್

ಬಾಟಲ್​ನಲ್ಲಾದ್ರೂ ಹಾಕಿ​, ಪಾಟ್​ನಲ್ಲಾದ್ರೂ​ ಹಾಕಿ ಮನಿ ಪ್ಲಾಂಟ್ ಆರೈಕೆ ಮರೆಯಬೇಡಿ; ಇಲ್ಲಿವೆ ಸರಳ ಟಿಪ್ಸ್..PothosCare

How To Care Money Plants: ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಮನಿ ಪ್ಲಾಂಟ್​ ಕಂಡರೆ, ಹೆಚ್ಚು ಹಣ ಸಿಗುತ್ತಂತೆ ಎಂದು ಕಿತ್ತು ತಂದು ಮನೆಯ ಅಂಗಳದಲ್ಲಿ ನೆಡುವುದು ನಂಬಿಕೆಯಾಗಿತ್ತು. ಇತ್ತೀಚಿನ ದಿನಗಳಲ್ಲೂ ಜ್ಯೋತಿಷ್ಯ ಶಾಸ್ತ್ರ ಕೇಳಿ ಪಾಲನೆ ಮಾಡುವುದು ವಾಡಿಕೆ.ಮನಿ ಪ್ಲಾಂಟ್​ ಅಥವಾ ಪೋಥೋಸ್​ ಮನೆಯ ಒಳಗಾಂಣದ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮನಿ ಪ್ಲಾಂಟ್​ (PothosCare)ಬೆಳೆಯೋದು ಸುಲಭವಾದರೂ ಸಹ ಇವುಗಳ ಆರೈಕೆಯ ಬಗ್ಗೆ ಹೆಚ್ಚಾಗಿ ಗಮನಕೊಡಬೇಕಾಗುತ್ತದೆ. ಹಾಗಾದ್ರೆ ಇವುಗಳನ್ನು ಬೆಳೆಯುವ ವಿಧಾನ ಹೇಗೆ, ಎಷ್ಟು ಪೋಷಣೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮನಿಪ್ಲಾಂಟ್​ನಲ್ಲಿ ಮೂರು ಪ್ರಬೇಧವಿದೆ?

ಮನೆಯ ಅಂಗಳ ಹಸಿರಿನಿಂದ ಕೂಡಿರಬೇಕು ಎಂದು ತೋಟಗಾರಿಕೆ ಮಾಡಲು ಬಯಸುವ ಹೊಸಬರು, ಮನಿಪ್ಲಾಂಟ್​ ಬೆಳೆಯುವುದು ಸೂಕ್ತ. ಇವುಗಳಲ್ಲಿ ಒಟ್ಟು ಮೂರು ಪ್ರಬೇದಗಳಿವೆ. ಒಂದು ಗೋಲ್ಡನ್​, ಮಂಜುಳ ಮತ್ತು ಜೇಡ್​ ಮನಿಪ್ಲಾಂಟ್​. ಮನೆಗಳಲ್ಲಿ, ಗ್ರಂಥಾಲಯ ಹಾಗೂ ರೆಸ್ಟೋರೆಂಟ್, ಬಾರ್​ಗಳಲ್ಲಿ ಹೃದಯಾಕರಾದಲ್ಲಿರುವ ಗೋಲ್ಡನ್​ ಮನಿಪ್ಲಾಂಟ್​ ಬೆಳೆಯಲಾಗುತ್ತದೆ.

ಅತಿಯಾದ ನೀರು ಹಾಕುವುದೇ ಸಸಿ ಬೆಳವಣಿಗೆಗೆ ಮಾರಕ

ಯಾವುದೇ ಸಸಿಗೆ ನೀರಿನ ಅಗತ್ಯವಿರುತ್ತದೆ. ಹಾಗಂತ ಮಾರುಗಟ್ಟಲೇ ನೀರು ಹಾಕಿದರೆ ಅವು ಸತ್ತೇ ಹೋಗುತ್ತದೆ. ಇದಕ್ಕೆ ಉದಾಹರಣೆಯೇ ಅತೀವೃಷ್ಟಿ. ಸುಲಭವಾಗಿ ಬೆಳೆಸಲು ಮನಿಪ್ಲಾಂಟ್ ಉತ್ತಮ ಆಯ್ಕೆ. ಆದರೆ, ಇದಕ್ಕೆ ಯಥೇಚ್ಚವಾಗಿ ನೀರು ಸುರಿಯಬಾರದು. ನಿಮ್ಮ ಬೆರಳನ್ನು ಒಂದು ಇಂಚಷ್ಟು ಪಾಟ್​ನೊಳಗೆ ಇಡಿ. ಅದು ತೇವವಾಗಿ ಇರವುದು ಕಾಣದಿದ್ದರೆ, ನೀರು ಹಾಕಿ ಎಂದು ನರ್ಸರಿ ತಜ್ಞರು ಹೇಳುತ್ತಾರೆ.

ಸೂರ್ಯನ ಗಾಢ ಬೆಳಕು ಬೇಡ

ಭೂಮಿ ಮೇಲಿರುವ ಕೆಲವು ಗಿಡಗಳಿಗೆ ಸೂರ್ಯನ ಬೆಳಕು ಅತಿಯಾಗಿ ಅಗತ್ಯವಿರೋದಿಲ್ಲ. ಅದರ ಲಿಸ್ಟಿನಲ್ಲಿ ಮನಿಪ್ಲಾಂಟ್​ ಇದೆ. ಕಡಿಮೆ ಬೆಳಕಿನಲ್ಲಿ ಉತ್ತಮವಾಗಿ ಬೆಳೆಯುವ ತಾಕತ್ತು ಇದಕ್ಕಿದೆ. 18°C ನಿಂದ 27°C ತಾಪಮಾನವು ಈ ಸಸ್ಯಗಳಿಗೆ ಪೂರಕ. ಅತಿಯಾದ ಚಳಿ ಅಥವಾ ಹೀಟಿಂಗ್ ವೆಂಟ್‌ಗಳ ಬಳಿ ಇಡುವುದನ್ನು ತಪ್ಪಿಸಿ.
ಸಾವಯವ ಗೊಬ್ಬರಕ್ಕಿರಲಿ ಪ್ರಾಮುಖ್ಯತೆ
ಮನಿಪ್ಲಾಂಟ್​ ಬೆಳೆಯಲು ಇದೇ ಮಣ್ಣು ಬೇಕು ಅಂತೇನಿಲ್ಲ. ಆದರೆ, ನೀರು ನಿಲ್ಲದಂತೆ ನೋಡಿಕೊಳ್ಳುವ ಮಣ್ಣಿನ ಮಿಶ್ರಣವಿರುವುದನ್ನೇ ಮನಿ ಪ್ಲಾಂಟ್​ ಬೆಳೆಸಲು ಆಯ್ಕೆ ಮಾಡಿಕೊಳ್ಳಿ. ಮಾರ್ಚ್​ನಿಂದ ಅಕ್ಟೋಬರ್​ವರೆಗೂ ಮಣ್ಣು ಬದಲಾಯಿಸಲು ಸೂಕ್ತ ಸಮಯ. ಎರೆಹುಳು, ತೆಂಗಿನ ಎಳೆ, ಪಾಚಿಯುಳ್ಳ ಗೊಬ್ಬರ ಹಾಕಿ ಪೋಷಿಸಿ.

ಟ್ರಿಮ್ ಮಾಡಿ

ಮನಿ ಪ್ಲಾಂಟ್​ ಹೊಸದಾಗಿ ಬೆಳೆಯಲು ಆಗಾಗ್ಗೆ ಅದರ ಕೊಂಬೆಗಳನ್ನು ಕತ್ತರಿಸಬೇಕು. ಎಲೆಗಳು ಪೂರ್ತಿಯಾಗಿ ಬಿದ್ದಾಗ ಬೋಡಾಗಿ ಕಾಣುವ ಕಾಂಡಕ್ಕಿಂತ ಹೆಚ್ಚು ಬೆಳವಣಿಗೆ ಕಂಡಾಗ 3ರಿಂದ 6 ಇಂಚಿನಷ್ಟು ಕೊಂಬೆ ಟ್ರಿಮ್​ ಮಾಡಬೇಕಾಗುತ್ತದೆ.ಮನಿಪ್ಲಾಂಟ್​ಗಳಲ್ಲಿ ಕೀಟಗಳು ಹೊಕ್ಕಿಕೊಂಡಾಗ ಅದಕ್ಕೆ ಕೀಟ ನಾಶಕಗಳು ಬಳಸಬೇಕು, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.