Coffee face pack for glowing skin 
ಲೈಫ್‌ಸ್ಟೈಲ್

ಮುಖದ ಮೇಲಿನ ಟ್ಯಾನ್​​, ಬ್ಲಾಕ್​ ಹೆಡ್ಸ್​​ ತೆಗೆಯಲು ಪಾರ್ಲರ್​ಗೆ ಹೋಗಬೇಕೆಂದಿಲ್ಲ; ಕಾಫಿ ಪೌಡರ್​ ಅನ್ನು ಹೀಗೆ ಬಳಕೆ ಮಾಡಿ ಸಾಕು..Coffee face pack

ಪ್ರಮುಖ ಮುಖ್ಯಾಂಶಗಳು

  • ಹೊಳೆಯುವ ಚರ್ಮಕ್ಕಾಗಿ ಕಾಫಿ ಫೇಸ್ ಪ್ಯಾಕ್ ಬಳಕೆ ಮಾಡೋದು ಹೇಗೆ?
  • ಮುಖದ ಮೇಲಿನ ಟ್ಯಾನ್​, ಬ್ಲಾಕ್​ ಹೆಡ್​ ತೆಗೆಯೋದು ಹೇಗೆ?
  • ಕಪ್ಪು ಕಲೆಗಳ ನಿವಾರಣೆಗೆ ಮನೆಮದ್ದು ಕಾಫಿ ಪುಡಿ
Coffee face pack for glowing skin: ಮೆಟ್ರೋ ನಗರದಲ್ಲಿ ಸಾಮಾನ್ಯವಾಗಿ ಕಾಡುವ ಧೂಳು, ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು, ಸೂರ್ಯನ ಪ್ರಖರ ಶಾಖ ಮುಖದ ಮೇಲೆ ಬಿದ್ದು ಕಪ್ಪು ಕಲೆಗಳು ಮೂಡುತ್ತದೆ. ಅಲ್ಲದೆ, ಬ್ಲಾಕ್​ ಹೆಡ್ಸ್​ ಕಾಣಿಸಿಕೊಳ್ಳುತ್ತದೆ. ಮುಖ ಟ್ಯಾನ್​ ಆಗುತ್ತದೆ. ಇಂತಹ ಸಮಯದಲ್ಲಿ ಹಲವರು ಬ್ಯೂಟಿಪಾರ್ಲರ್​​ಗೆ ತೆರಳಿ ಸಾಕಷ್ಟು ಹಣ ಖರ್ಚು ಮಾಡಿ ಫೇಷಿಯಲ್​ ಮಾಡಿಸಿಕೊಳ್ಳುತ್ತಾರೆ. ಆದರೆ, ಎರಡು ರೂಪಾಯಿ ಇನ್​​ಸ್ಟ್ಯಾಂಟ್​ ಕಾಫಿ ಪೌಡರ್​ನಲ್ಲಿ ನೀವು ನಿಮ್ಮ ಮುಖ ಗ್ಲೋ ಆಗುವಂತೆ ನೋಡಿಕೊಳ್ಳಬಹುದು.
ಅಡುಗೆಮನೆಯಲ್ಲಿ  ಇರುವ ಕಾಫಿ ಪೌಡರ್​ ಅನ್ನೇ ಬಳಕೆ ಮಾಡಿಕೊಂಡು, ಹತ್ತು ನಿಮಿಷದಲ್ಲಿ ನಿಮ್ಮ ಮುಖದಲ್ಲಿ ಕಾಣಿಸುವ ಕಲೆಯನ್ನು ತೆಗೆದು ಗ್ಲೋ ಕಾಣಬಹುದಾಗಿದೆ. ಕಾಫಿಯಲ್ಲಿರುವ ಕೆಫೇನ್​ ಅಂಶವು ರಕ್ತ ಪರಿಚಲನೆಗೊಳ್ಳುವಂತೆ ಮಾಡಿ ಚರ್ಮದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ.  ಹಾಗಾದ್ರೆ ಈ ಕಾಫಿ ಪೌಡರ್ ಬಳಕೆ ಮಾಡೋದು ಹೇಗೆ ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ

ಫೇಸ್​ಪ್ಯಾಕ್​ಗೆ ಬೇಕಾಗುವ ಸಾಮಗ್ರಿ

  • ಇನ್​ಸ್ಟ್ಯಾಂಟ್​ ಕಾಫಿ ಪುಡಿ 1 ಚಮಚ 
  • ಮೊಸರು ಅಥವಾ ಹಾಲು 1 ಚಮಚ 
  • ಜೇನುತುಪ್ಪ 1 ಚಮಚ

ಬಳಕೆ ಮಾಡೋದು ಹೇಗೆ?

ಮೊದಲಿಗೆ ಒಂದು ಬಟ್ಟಲಿನಲ್ಲಿ ಯಾವುದೇ ಗಂಟು ಇರದಂತೆ ಕಾಫಿ ಪೌಡರ್​​​, ಜೇನುತುಪ್ಪ ಹಾಲು ಅಥವಾ ಮೊಸರನ್ನು ಕಲಿಸಿಕೊಳ್ಳಿ.  ನೆನಪಿಡಿ ನೀವು ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮುನ್ನ ನಿಮ್ಮ ಮುಖವನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಮುಖದ ಮೇಲೆ ಕೂರುವ ಧೂಳು, ಫೇಸ್​​ ಪ್ಯಾಕ್​​ ರಿಯಾಕ್ಟ್​ ಮಾಡಲು ತಡೆಯೊಡ್ಡುತ್ತದೆ ಹೀಗಾಗಿ.
ಇದಾದ ನಂತರ ನಿಮ್ಮ ಮುಖಕ್ಕೆ ಕಲಿಸಿಟ್ಟ  ಕಾಫಿ ಪುಡಿಯನ್ನು ಹಚ್ಚಿ ಸಣ್ಣದಾಗಿ ರಬ್​ ಮಾಡಿ, ನಿಮ್ಮ ಬೆರಳುಗನ್ನು ಕತ್ತು ಹಾಗೂ ಮುಖದ ಮೇಲೆ ಇಟ್ಟು ವೃತ್ತಾಕಾರವಾಗಿ ರಬ್​ ಮಾಡಿ ಒಣಗಲು ಬಿಡಿ ಒಂದು ಹದಿನೈದು ನಿಮಿಷದ ನಂತರ ಮುಖವನ್ನು ಬೆಚ್ಚಗಿನ ಬಿಸಿ ನೀರಿನಲ್ಲಿ ತೊಳೆಯಿರಿ.

ಕಾಫಿ ಫೇಸ್ ಪ್ಯಾಕ್​​​ ಬಳಸುವ ಮತ್ತೊಂದು ವಿಧಾನ

ಕಾಫಿ ಪುಡಿ ಹಾಗೂ ಸಕ್ಕರೆ ರೋಸ್​ವಾಟರ್​​ ಅಥವಾ ನೀರು ಹಾಕಿ ಕಲಿಸಿಕೊಳ್ಳಿ. ಆನಂತರ ಮುಖಕ್ಕೆ ಹಚ್ಚಿ. ನಿಮ್ಮ ಬಳಿ ಇರುವ ಟಿಶ್ಯೂವನ್ನು ಮುಖಕ್ಕೆ ಅಂಟಿಸಿಕೊಳ್ಳಿ. ಎಲ್ಲೆಲ್ಲಿ ನೀವು ಕಾಫಿ ಪೌಡರ್​​ ಮಿಶ್ರಣ ಹಚ್ಚಿದ್ದೀರೋ ಆ ಭಾಗದಲ್ಲಿ ಟಿಶ್ಯೂ ಬಳಕೆ ಮಾಡಿ. ಅದು ಸಂಪೂರ್ಣ ಒಳಗಿದ ನಂತರ ಮೆಲ್ಲನೆ ಬಿಡಿಸಿ. ಈ ನಿಮ್ಮ ಮುಖದ ಮೇಲೆ ಕಾಡುವ ಕೂದಲು ತುಟಿ ಮೇಲ್ಭಾಗ ಕಾಣಿಸುವ ಕೂದಲು ಮಾಯವಾಗಿರುತ್ತದೆ.

ಕಾಫಿ ಫೇಸ್​ ಪ್ಯಾಕ್​ನ ಅದ್ಭುತ ಪ್ರಯೋಜನ ಇದು

ಸೂರ್ಯನ ಶಾಖಕ್ಕೆ ನೇರವಾಗಿ ಚರ್ಮ ಒಡ್ಡಿಕೊಳ್ಳುವ ಕಾರಣ, ಕಾಫಿಯಲ್ಲಿರುವ ಉತ್ಕರ್ಷಣಾ ನಿರೋಧಕಗಳು, ಕೆಫೆನ್​ ಅಂಶವು ಟ್ಯಾನ್​ ಆದ ಚರ್ಮಕ್ಕೆ ಮುಕ್ತಿ ಕೊಟ್ಟು,  ಕಾಂತಿಯುತವಾಗಿ ಹೊಳೆಯಲು ಸಹಾಯ ಮಾಡುತ್ತದೆ. ಮುಖದ ಮೇಲೆ ಮೂಡುವ ಕಂದು ಬಣ್ಣವನ್ನು ನೈಸರ್ಗಿಕವಾಗಿ ತೆಗೆದು ಹಾಕಲು ಸಹಾಯ ಮಾಡುತ್ತದೆ.
ಚರ್ಮದ ರಂಧ್ರಗಳಲ್ಲಿ ಎಣ್ಣೆ ಮತ್ತು ಸತ್ತ ಜೀವಕೋಶ ತುಂಬಿ ಮೂಗಿನ ಮೇಲೆ ಬ್ಲಾಕ್​ ಹೆಡ್ಸ್​ ಕಾಣಿಸಿಕೊಳ್ಳುತ್ತದೆ. ಇದನ್ನು ಕಪ್ಪು ಚುಕ್ಕೆ ಎಂತಲೂ ಕರೆಯಲಾಗಿತ್ತದೆ. ಇದು ಹೆಚ್ಚಾಗಿ ಮೂಗಿನ ಮೇಲೆ ಮತ್ತು ಗಲ್ಲದ ಮೇಲೆ ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಕಾಫಿ ಪುಡಿ ಸ್ಕ್ರಬರ್​​ನಂತೆ ಕೆಲಸ ಮಾಡುತ್ತದೆ. ದುಬಾರಿ  ಫೇಸ್​ ವಾಶ್​ ಖರೀದಿ ಮಾಡುವ ಬದಲಾಗಿ, ಕಾಫಿ ಪೌಡರ್​ ಬಳಕೆ ಮಾಡಬಹುದಾಗಿದೆ. 

ವಾರಕ್ಕೆ ಎರಡು ಬಾರಿ ಬಳಸಿ

ವಾರಕ್ಕೆ ಎರಡು ಬಾರಿ ಈ ಫೇಸ್​ ಪ್ಯಾಕ್​ ಬಳಕೆ ಮಾಡೋದ್ರಿಂದಾಗಿ  ನಿಮ್ಮ ಚರ್ಮದ ವಯಸ್ಸಾಗುವಿಕೆಯನ್ನು ಇದು ತಡೆಯುತ್ತದೆ. ವಯಸ್ಸಾದಂತೆ ಕಾಡುವ ಮುಖದ ಮೇಲಿನ ಸುಕ್ಕನ್ನು ಹೋಗಲಾಡಿಸಲು ಈ ಪ್ಯಾಕ್​ ಸಹಾಯ ಮಾಡುತ್ತದೆ, (ಏಜೆನ್ಸೀಸ್).
 ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.