ಲೈಫ್‌ಸ್ಟೈಲ್

ವಾಷಿಂಗ್ ಮೆಷಿನ್‌ನಲ್ಲಿ ಶೂ ತೊಳೆಯುತ್ತಿದ್ದೀರಾ?; ಹಾಗಾದ್ರೆ ನಿಮಗಾಗಿಯೇ ಈ ಟಿಪ್ಸ್​​​

ಪ್ರಸ್ತುತ ಜೀವನಶೈಲಿಯಲ್ಲಿ ಆಹಾರಪದ್ಧತಿ ಬದಲಾದಂತೆ ನಾವು ಮಾಡುವ ಕೆಲಸಗಳಲ್ಲೂ ಅನೇಕ ಬದಲಾವಣೆಯಾಗಿರುವುದು ನಿಮಗೆ ತಿಳಿದಿದೆ. ಮನೆಯನ್ನು ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಕ್ಲೀನರ್, ಬಟ್ಟೆ ಹೊಗೆಯಲು ವಾಷಿಂಗ್​ಮೆಷಿನ್​ ಎಲ್ಲರ ಮನೆಯಲ್ಲೂ ಇರುತ್ತದೆ. ಕೈಯಿಂದ ತೊಳೆಯಲು ಕಷ್ಟವಾಗುವಂತ ಭಾರವಾದ ಮತ್ತು ಕೊಳೆಯ ಬಟ್ಟೆಗಳನ್ನು ವಾಷಿಂಗ್​ಮೆಷಿನ್​ಗೆ ಹಾಕಲು ಜನರು ಇಷ್ಟಪಡುತ್ತಾರೆ. ಈಗ ಬಟ್ಟೆಗಳ ಜತೆಗೆ ಕೆಲವರು ಶೂಮತ್ತುಸಾಕ್ಸ್​​ಗಳನ್ನು ವಾಷಿಂಗ್​ಮೆಷಿನಲ್ಲಿ ತೊಳೆಯುತ್ತಾರೆ.

ಆದರೆ ಅನೇಕ ಬಾರಿ ವಾಷಿಂಗ್ ಮೆಷಿನ್‌ನಲ್ಲಿ ಶೂಗಳನ್ನು ತೊಳೆದ ನಂತರ ಬೇಗನೆ ಹರಿಯುತ್ತವೆ. ಇನ್ನು ಹಲವು ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಏನು ಮಾಡುವುದು ಎಂದು ಆಲೋಚಿಸುತ್ತಿದ್ದೀರಾ. ನಿಮಗಾಗಿಯೇ ಯಾವುದೆ ತೊಂದರೆ ಇಲ್ಲದೆ ಶೂಗಳನ್ನು ತೊಳೆಯುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.

ವಾಷಿಂಗ್​ಮೆಷಿನ್​ಗೆ ಶೂ ಹಾಕುವ ಮೊದಲು ನಿಮ್ಮ ಶೂನಲ್ಲಿರುವ ಲೇಸ್​ಗಳನ್ನು ತೆಗೆದುಹಾಕಬೇಕು. ಇದಲ್ಲದೆ ಶೂಗಳ ಇನ್ಸೊಲ್​ಗಳನ್ನು ತೆಗೆದುಹಾಕಿ ಅವುಗಳನ್ನು ಪ್ರತ್ಯೇಕಿಸಬೇಕು. ಇದೆರಡನ್ನು ತೆಗೆದ ನಂತರ ಶೂಗಳ ಅಡಿಭಾಗದಲ್ಲಿರುವ ಮಣ್ಣು, ಧೂಳು ಹೀಗೆ ಏನೆ ಇದ್ದರೂ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು.

ಶೂಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಮತ್ತು ಕಲೆಗಳನ್ನು ತ್ವರಿತವಾಗಿ ತೆಗೆದುಹಾಕಲು, ಮೊದಲು ಶೂಗಳನ್ನು ನೀರಿನಲ್ಲಿ ನೆನೆಸಿ. ನಂತರ ಬ್ರಷ್ ಮತ್ತು ಡಿಟರ್ಜೆಂಟ್ ಸಹಾಯದಿಂದ ಕಲೆಯಾಗಿರುವ ಜಾಗವನ್ನು ಸ್ವಚ್ಛಗೊಳಿಸಿ ಬ್ರಷ್‌ನ ಸಹಾಯದಿಂದ ಶೂಗಳ ಮಧ್ಯಭಾಗ ಮತ್ತು ಮೇಲಿನ ಭಾಗದಲ್ಲಿ ಕಲೆಗಳನ್ನು ಸ್ಕ್ರಬ್ ಮಾಡಬೇಕಾಗುತ್ತದೆ.

ಶೂಗಳನ್ನು ವಾಷಿಂಗ್​ಮೆಷಿನ್​ಗೆ ಹಾಕುವ ಮುನ್ನ ಮೆಶ್ ಲಾಂಡ್ರಿ ಬ್ಯಾಗ್​​ ಬಳಸಿ. ಅದರಲ್ಲಿ ಶೂಗಳು, ಲೇಸ್​​ಗಳು, ಇನ್ಸೊಲ್​ಗಳನ್ನು ಹಾಕಿ ಜಿಪ್​ನಿಂದ ಲಾಕ್​ ಮಾಡಿ. ಈಗ ಲಾಂಡ್ರಿ ಬ್ಯಾಗ್ ಅನ್ನು ಮೆಷಿನ್​ಗೆ ಹಾಕಿ. ನಂತರ ಡಿಟರ್ಜೆಂಟ್ ಸೇರಿಸಿ ವಾಷಿಂಗ್​ಮೆಷಿನ್​ ಅನ್ನು ಆನ್​ ಮಾಡಿ. ಇದರಿಂದ ಶೂಗಳು ಹರಿದು ಹೋಗುತ್ತದೆ ಎಂಬ ಚಿಂತೆ ಇರುವುದಿಲ್ಲ.