ಲೈಫ್‌ಸ್ಟೈಲ್

ಹೀಗೆ ಮಾಡಿದ್ರೆ ಕರೊನಾ ಹರಡೋದು ಗ್ಯಾರೆಂಟಿ!

ಕರೊನಾ ವೈರಸ್​ ಕೋವಿಡ್ 19 ಸೋಂಕು ಹರಡಲು ಆರಂಭವಾಗಿ ಆರು ತಿಂಗಳು ಕಳೆದರೂ, ಈಗಲೂ ಎಲ್ಲರೂ ಕೇಳುವ ಒಂದೇ ಒಂದು ಪ್ರಶ್ನೆ ಕರೊನಾ ಸೋಂಕು ಹರಡುವುದು ಹೇಗೆ? ಕಲುಷಿತ ಮೇಲ್ಮೈ ಮೂಲಕ ಕೋವಿಡ್-19 ಹರಡುತ್ತದೆ. ಅಲ್ಲದೆ, ಜನರು ಹೊರಗೆ ಸಂಚರಿಸುತ್ತಿದ್ದರೆ ಆಗಲೂ ಸೋಂಕಿತರ ಮೂಲಕ ಇದು ಹರಡುವುದೆಂದು ಸೈಂಟಿಸ್ಟ್​ಗಳು ಹೇಳ್ತಾರೆ. ಇಷ್ಟಾಗ್ಯೂ, ನಿಖರವಾಗಿ ಹೀಗೇ ಹರಡುತ್ತದೆ ಎಂಬುದು ಗೊತ್ತಾಗದ ಕಾರಣ ಕರೊನಾ ಸೋಂಕು ಹರಡುವುದು ಹೇಗೆ ಎಂಬ ಪ್ರಶ್ನೆಯನ್ನು ಜನ ಮತ್ತೆ ಮತ್ತೆ ಕೇಳುತ್ತಿದ್ದಾರೆ.

ಸೋಂಕು ಹರಡುವ 3 ಹಂತ 1. ಹತ್ತಿರ ಹತ್ತಿರ ಇದ್ದಾಗ ಕೆಮ್ಮುವುದು, ಮುಖಕ್ಕೆ ಮುಖ ಕೊಟ್ಟು ಮಾಸ್ಕ್ ಧರಿಸದೇ ಮಾತನಾಡುವುದರಿಂದ ವೈರಸ್​ ಇರುವ ವಿವಿಧ ಗಾತ್ರದ ಡ್ರಾಪ್​ಲೈಟ್​ಗಳು ಸೋಂಕು ಹರಡಬಹುದು. ಈ ಬಗ್ಗೆ ಜಾಗರೂಕರಾಗಿರಬೇಕು. 2. ಇಂತಹ ವೈರಸ್​ ಡ್ರಾಪ್​ಲೆಟ್​ಗಳು ಎದುರು ಇದ್ದವರ ಮೇಲೆ ಅಥವಾ ನಿಮ್ಮ ಸುತ್ತಲೂ ಸೋಂಕು ಹರಡುವುದಕ್ಕೆ ಮುಂದಾಗುತ್ತವೆ. 3. ಮೂಗು, ಬಾಯಿಯ ಮೂಲಕ ಅವುಗಳು ನೇರವಾಗಿ ನಿಮ್ಮ ಶ್ವಾಸನಾಳಗಳ ಮೂಲಕ ಸಾಗುತ್ತವೆ. ಎಸಿಇ-2 ರೆಸೆಪ್ಟರ್ಸ್​ ಮೂಲಕ ಈ ವೈರಾಣುಗಳು ಜೀವಕೋಶಗಳಿಗೆ ಪ್ರವೇಶಿಸಿ ಅಲ್ಲಿ ವೃದ್ಧಿ ಕಾಣುತ್ತವೆ.

ಸೈಂಟಿಸ್ಟ್​ಗಳು ಹೇಳಿದ ಮಾದರಿಯಲ್ಲಿ ಅಲ್ಲದೆ, ವ್ಯಕ್ತಿಗಳು ಅಂತರ ಕಾಯ್ದುಕೊಳ್ಳದೆ ದೀರ್ಘ ಅವಧಿಗೆ ಮಾತನಾಡುತ್ತಿದ್ದರೆ, ಒಂದೆಡೆ ಗುಂಪು ಕೂಡಿದ್ದರೆ, ಸಾಮೂಹಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು, ಗಾಳಿ ಬೆಳಕು ಸರಿಯಾಗಿ ಇಲ್ಲದ ಪ್ರದೇಶಗಳು ಮತ್ತು ಗಟ್ಟಿ ಧ್ವನಿಯಲ್ಲಿ ಮಾತನಾಡುವ ಜನರ ಮೂಲಕ ಅಥವಾ ಹಾಡುವ ವೇಳೆಯೂ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ನಡೆದ ಎರಡು ಅಧ್ಯಯನ ವರದಿಗಳಲ್ಲೂ ಈ ವಿಚಾರಗಳು ಪ್ರಸ್ತಾಪವಾಗಿವೆ. ಭಾರಿ ಪ್ರಮಾಣದ ಲಾಕ್​ಡೌನ್​, ಮನೆಯಲ್ಲೇ ಇರಿ ಎಂಬ ಆದೇಶ, ನಿಷೇಧ, ನಿರ್ಬಂಧಗಳ ಮೂಲಕ ಸೋಂಕು ತಡೆಯುವ ಪ್ರಯತ್ನದ ವೇಳೆ ಲಕ್ಷಾಂತರ ಜನರಿಗೆ ಸೋಂಕು ಹರಡುವುದು ತಡೆಯಲ್ಪಟ್ಟಿದೆ. ಮರಣ ಪ್ರಮಾಣವೂ ಕಡಿಮೆ ಇತ್ತು. ಈಗ, ಹೆಚ್ಚಿನ ತಿಳಿವಳಿಕೆಯೊಂದಿಗೆ ನ್ಯೂ ನಾರ್ಮಲ್ ಎಂಬ ಜಗತ್ತಿನೊಂದಿಗೆ ಜನ ವ್ಯವಹರಿಸಲು ಮುಂದಾಗಿದ್ದಾರೆ. ಎಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆಯೋ ಅದನ್ನೇ ಗುರಿಯಾಗಿಸಿ ಕ್ರಮ ತೆಗೆದುಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ.

ನರ್ಸಿಂಗ್ ಹೋಮ್​ ನಿವಾಸಿಗಳು, ಕೂಡು ಕುಟುಂಬದಲ್ಲಿರುವವರು ಹೆಚ್ಚಿನ ಆಸ್ಥೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂದರೆ, ದೈಹಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್​ ಧರಿಸಿರಬೇಕು. ಅದೇ ರೀತಿ ಮುಚ್ಚಿದ ಕೋಣೆಗಳಲ್ಲಿ ಒಟ್ಟು ಸೇರುವುದನ್ನು ಕಡಿಮೆ ಮಾಡಬೇಕು. ಇನ್ನೂ ಲಾಕ್​ಡೌನ್ ಬಗ್ಗೆ ಚಿಂತನೆ ಮಾಡಬಾರದು. ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಮುಂಜಾಗ್ರತೆಗಳನ್ನು ನಾವೇ ತೆಗೆದುಕೊಳ್ಳಬೇಕು ಎಂದು ಪರಿಣತರು ಪ್ರತಿಪಾದಿಸತೊಡಗಿದ್ದಾರೆ. (ಏಜೆನ್ಸೀಸ್)