More

    VIDEO: ಮಿಸ್ಟರ್ ಬೀನ್ ನೆರವು ಕೋರಿತು ಡಬ್ಲ್ಯುಎಚ್​ಒ

    ಜಿನೇವಾ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೋವಿಡ್​ 19 ಕರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಇದೀಗ ಕಾರ್ಟೂನ್ ಸ್ಟಾರ್​ ಮಿಸ್ಟರ್ ಬೀನ್​ ನೆರವನ್ನೂ ಯಾಚಿಸಿದೆ. ಮಿಸ್ಟರ್ ಬೀನ್ ಜಾಗತಿಕ ಮಟ್ಟದಲ್ಲಿ ಪ್ರಭಾವಿಯಾಗಿರುವುದೇ ಇದಕ್ಕೆ ಕಾರಣ.

    ಡಬ್ಲ್ಯುಎಚ್​ಒ ಇತ್ತೀಚೆಗೆ “ಮಿಸ್ಟರ್ ಬೀನ್​’ಸ್​ ಎಸೆನ್ಶಿಯಲ್​ ಕೋವಿಡ್​ -19 ಚೆಕ್​ಲಿಸ್ಟ್​” ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದೆ. ಪ್ರಾಜೆಕ್ಟ್​​ ಎವರಿಒನ್ ಆ್ಯಂಡ್ ಟೈಗರ್ ಆಸ್ಪೆಕ್ಟ್​ ಪ್ರೊಡಕ್ಷನ್ಸ್ ಈ ವಿಚಾರದಲ್ಲಿ ಪಬ್ಲಿಕ್ ಸರ್ವೀಸ್ ಅನೌನ್ಸ್​ಮೆಂಟ್​ಗೆ ಡಬ್ಲ್ಯುಎಚ್​ಒಗೆ ಸಾಥ್ ನೀಡಿದೆ. ಮೂವತ್ತು ಸೆಕೆಂಡ್​ನ ಈ ವಿಡಿಯೋದಲ್ಲಿ ಕೈತೊಳೆಯುವುದು, ದೈಹಿಕ ಅಂತರ, ನೆರೆಯವರೊಂದಿಗೆ ಕರುಣೆ, ಸಹಾನುಭೂತಿಯಿಂದ ನಡೆದುಕೊಳ್ಳುವುದು ಸೇರಿದಂತೆ ಮಾಡಬೇಕಾದ ಅಂಶಗಳ ಚೆಕ್​ಲಿಸ್ಟ್​ ಪ್ರದರ್ಶಿಸಲಾಗಿದೆ.

    ಇದನ್ನೂ ಓದಿ: ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಎಷ್ಟು ರೂಪಾಯಿ ಕೊಡಬೇಕು ಗೊತ್ತಾ?

    ಮನುಷ್ಯ ಬದುಕಿನ ಪ್ರತಿ ಹೆಜ್ಜೆಯ ಮೇಲೂ ಕೋವಿಡ್ 19 ಪರಿಣಾಮ ಆಗುತ್ತಿದ್ದು, ಜಗತ್ತಿನಾದ್ಯಂತ ನಾವು ಎಲ್ಲರೂ ಬಹಳ ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು. ಬದುಕಿನ ಶೈಲಿಯನ್ನು ಬದಲಿಸಿಕೊಳ್ಳಬೇಕು. ಜಾಗೃತಿ ಮೂಡಿಸುವಲ್ಲಿ ನಮಗೆ ಮಿಸ್ಟರ್ ಬೀನ್​ ಕೈಜೋಡಿಸಿದ್ದಾರೆ ಎಂದು ಡಬ್ಲ್ಯುಎಚ್​ಒ ಡೈರೆಕ್ಟರ್​ ಜನರಲ್​ ಡಾ.ಟೆಡ್ರೋಸ್​ ಅಧನೋಮ್​ ಘೆಬ್ರೆಯೆಸೆಸ್​ ಹೇಳಿದ್ದಾರೆ.

    ಮಿಸ್ಟರ್ ಬೀನ್​ ಪಾತ್ರ 1990ರ ದಶಕದಲ್ಲಿ ಪರಿಚಯಿಸಲ್ಪಟ್ಟಿದ್ದು, ಅದಕ್ಕೂ ಈಗ 30ನೇ ವರ್ಷ. ಮಿಸ್ಟರ್ ಬೀನ್ ಎಂಬುದು ವಯಸ್ಕರ ಶರೀರದೊಳಗಿನ ಮಗುವಿನ ಪಾತ್ರವಾಗಿದ್ದು ಫೇಸ್​ಬುಕ್​ ಪುಟದಲ್ಲಿ ಭಾರತ, ಬ್ರೆಜಿಲ್​, ಇಂಡೋನೇಷ್ಯಾ ಸೇರಿ ಜಗತ್ತಿನಾದ್ಯಂತ ಹತ್ತು ಕೋಟಿಯಷ್ಟು ಫಾಲೋಯರ್ಸ್ ಇದ್ದಾರೆ. (ಏಜೆನ್ಸೀಸ್)

    ಆಗಸದಲ್ಲಿ ‘ಅಣುಬಾಂಬ್‌’: ಅಣ್ವಸ್ತ್ರ ಪರೀಕ್ಷೆಯೆ? ಬೆಚ್ಚಿಬಿದ್ದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts