More

    ಆಗಸದಲ್ಲಿ ‘ಅಣುಬಾಂಬ್‌’: ಅಣ್ವಸ್ತ್ರ ಪರೀಕ್ಷೆಯೆ? ಬೆಚ್ಚಿಬಿದ್ದ ಜನತೆ

    ಉಕ್ರೇನ್‌: ಅದು 1968. ಉಕ್ರೇನ್‌ನ ಚರ್ನೋಬಿಲ್‌ನಲ್ಲಿ ಭಾರಿ ಅಣುದುರಂತ ನಡೆದು, ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಜಾಗದ ಕೇವಲ 60 ಮೈಲಿ ದೂರದಲ್ಲಿ ಇಂದು ಬೆಳಗ್ಗೆ ಆಗಸದಲ್ಲಿ ಅಣುಬಾಂಬ್‌ ಆಕೃತಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಜನ ಬೆಚ್ಚಿಬಿದ್ದ ಘಟನೆ ನಡೆದಿದೆ.

    ಅಣಬೆಯಾಕಾರದ ರೀತಿಯಲ್ಲಿ ಒಮ್ಮೆ, ಅಣುಬಾಂಬ್‌ ಆಕಾರದಲ್ಲಿ ಒಮ್ಮೆ ಆಗಸದಲ್ಲಿ ಗೋಚರಿಸಿದ್ದನ್ನು ಕಂಡ ಜನ ಅದು ಏನೆಂದು ಅರಿಯದೇ ಕಂಗಾಲಾಗಿ ಹೋಗಿದ್ದಾರೆ.
    ಇದು ನಡೆದದ್ದು ಯುಕ್ರೇನ್ ರಾಜಧಾನಿ ನಗರ ಕೀವ್‌ನಲ್ಲಿ. ಇದನ್ನು ನೋಡುತ್ತಿದ್ದಂತೆಯೇ ಜನರು 1968ರ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

    ಹಲವರು ಇದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡುತ್ತಿದ್ದಂತಿದೆ ಎಂದು ಸುದ್ದಿ ಹರಡಿಸಿದ್ದರಿಂದ ಜನರು ಇನ್ನೂ ಹೆದರಿಬಿಟ್ಟಿದ್ದರು. ಈ ವಿಷಯ ಬಾಯಿಯಿಂದ ಬಾಯಿಗೆ ಹರಡುತ್ತಲೇ ಇಡೀ ನಗರದ ಜನತೆ ತಲ್ಲಣಗೊಂಡುಬಿಟ್ಟಿದೆ.

    ಇದನ್ನೂ ಓದಿ: ಚಾರಣದಲ್ಲಿ ಕಾಣೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್‌ ಉಗ್ರ!

    ನಂತರ ಅದು ಚದುರುತ್ತಿದ್ದಂತೆಯೇ ಮೋಡವೇ ಈ ಆಕಾರ ತಾಳಿದೆ ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಹಲವರಿಗೆ ಇನ್ನೂ ಸಂಶಯವೇ ಉಳಿದಿತ್ತು.

    ‘ಇದೊಂದು ಸಾಮಾನ್ಯ ಅನ್ವಿಲ್ ಮೋಡವಾಗಿದೆ. ಈ ಮೊದಲು ಓಬ್ಲಾಸ್ಟ್, ಟೆರ್ನೊಪಿಲ್ ಒಬ್ಲಾಸ್ಟ್ ಮತ್ತು ವಿನಿಟ್ಸಾ ಮುಂತಾದೆಡೆ ಕಾಣಿಸಿತ್ತು’ ಎಂದು ಸ್ಪಷ್ಟನೆ ನೀಡಿದರು. ಜತೆಗೆ, ಅನ್ವಿಲ್‌ ಮೋಡ ಹಾಗೂ ಕ್ಯುಮುಲೋನಿಂಬಸ್ ಇನ್‌ಕಸ್ ಎಂಬ ಹೆಸರಿನ ಮೋಡಗಳು ಇದೇ ರೀತಿ ಗೋಚರಿಸುತ್ತವೆ. ಭಾರಿ ಗಾಳಿಯ ಪ್ರಭಾವದಿಂದ ನೀರಿನ ಆವಿ ಭೂಮಿಯಿಂದ ಎತ್ತರಕ್ಕೆ ಹೋದಾಗ ಈ ರೀತಿ ಮೋಡಗಳು ಸೃಷ್ಟಿಯಾಗುತ್ತವೆ. ಅಪರೂಪಕ್ಕೊಮ್ಮೆ ಸೃಷ್ಟಿಯಾಗುವ ಇವು ಗುಡುಗು, ಮಿಂಚು, ಆಲಿಕಲ್ಲು ಮಳೆಯನ್ನು ಸೃಷ್ಟಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
    ಈ ಸ್ಪಷ್ಟನೆ ಬಂದದ್ದು ನಂತರ. ಆದರೆ ಅಲ್ಲಿಯವರೆಗೂ ಜನರು ಭಯಭೀತರಾದದ್ದಂತೂ ಸುಳ್ಳಲ್ಲ. ಈ ಚಿತ್ರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಷ್ಯಾ ಅಧ್ಯಕ್ಷ ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡುತ್ತಿರುವ ಬಗ್ಗೆ ಸುದ್ದಿಯಾದದ್ದನ್ನು ಕೇಳಿ ಅನೇಕ ಕಮೆಂಟಿಗರು ನಂತರ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. (ಏಜೆನ್ಸೀಸ್‌)

    ಸಹಕಾರಿ ಬ್ಯಾಂಕ್‌ಗಳಿಗೆ ಇನ್ನು ಆರ್‌ಬಿಐ ಬಾಸ್- ಸಚಿವಸಂಪುಟ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts