Diabetes: ಇತ್ತೀಚಿನ ದಿನಗಳಲ್ಲಿ, ಸಕ್ಕರೆ ಕಾಯಿಲೆ ತೀರ ಸಾಮಾನ್ಯವಾಗಿಬಿಟ್ಟಿದೆ. ಬಹುತೇಕರಲ್ಲಿ ಟೈಪ್-2 ಮಧುಮೇಹ ಸಮಸ್ಯೆ ಕಾಡುತ್ತಿದೆ. ಕೆಲವರು ಇದಕ್ಕೆ ಒಗ್ಗಿಕೊಂಡು ಜೀವನಶೈಲಿಯನ್ನು ಸರಿದೂಗಿಸಿಕೊಂಡು ಹೋಗುವತ್ತ ಚಿತ್ತ ಹರಿಸುತ್ತಾರೆ. ಆದರೆ, ಹಲವರು ಮಾತ್ರ ಇದರ ಬಗ್ಗೆ ಚಿಂತಿಸುತ್ತ, ಆ ಕಾಯಿಲೆಯನ್ನು ಇನ್ನಷ್ಟು ದೊಡ್ಡದು ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಕುಡಿತದ ಚಟಕ್ಕೆ ಶಾಶ್ವತವಾಗಿ ಗುಡ್ಬೈ ಹೇಳ್ಬೇಕಾ? ಹಾಗಿದ್ರೆ, ಈ ಸಲಹೆ ಪಾಲಿಸಿ, ಮತ್ತೆ ಅತ್ತ ಸುಳಿಯಲ್ಲ! | Alcohol Addiction
ದೇಹದಲ್ಲಿ ಇನ್ಸುಲಿನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುವುದರಿಂದ, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಹೆಚ್ಚಾಗುತ್ತವೆ. ಆದಾಗ್ಯೂ, ಸಕ್ಕರೆ ಅಂಶವನ್ನು ಕಂಟ್ರೋಲ್ಗೆ ತರಲು ದಿನನಿತ್ಯ ಕೆಲವು ಗಂಟೆಗಳ ಕಾಲ ವಾಕಿಂಗ್ ಮಾಡುವುದು ಅತ್ಯಗತ್ಯ. ಇದೊಂದು ರೀತಿ ಖರ್ಚಿಲ್ಲದ, ಸರಳ ಹಾಗೂ ಸುಲಭ ಮದ್ದು ಎಂದೇ ಹೇಳಬಹುದು. ನಡೆಯುವುದರಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ. ವೈದ್ಯರು ಸಹ ಇದನ್ನೇ ಶಿಫಾರಸು ಮಾಡುತ್ತಾರೆ. ಅಷ್ಟಕ್ಕೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ವಾಕಿಂಗ್ ಹೇಗೆ ಸಹಾಯ ಮಾಡುತ್ತದೆ? ಎಂಬುದನ್ನು ಈ ಸುದ್ದಿಯಲ್ಲಿ ವಿವರವಾಗಿ ತಿಳಿಯೋಣ.
ವಾಕಿಂಗ್ ಮಾಡುವಾಗ, ದೇಹದ ಆಮ್ಲಜನಕದ ಅಗತ್ಯವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ದೇಹದಲ್ಲಿನ ಸ್ನಾಯುಗಳು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಹೀಗಾಗಿ, ಸ್ನಾಯುಗಳು ಗ್ಲೂಕೋಸ್ ಅನ್ನು ಶಕ್ತಿಯಾಗಿ ಬಳಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕಡಿಮೆಯಾಗಿ, ಇನ್ಸುಲಿನ್ ಸೂಕ್ಷ್ಮತೆಯು ಸುಧಾರಣೆಗೆ ಬರುತ್ತದೆ.
ಇದನ್ನೂ ಓದಿ: ಪತಿಯನ್ನು ಉಳಿಸಿಕೊಳ್ಳಲು ಲಿವರ್ ಭಾಗ ದಾನ ಮಾಡಿದ ಪತ್ನಿ ಸಾವು, ಗಂಡನೂ ದುರ್ಮರಣ! Transplant Surgery
ಹಲವಾರು ಅಧ್ಯಯನಗಳ ಪ್ರಕಾರ, ಊಟದ ನಂತರ ಚುಟುಕು ನಡಿಗೆ ಮಾಡುವುದು ಅಂದರೆ 10ರಿಂದ 15 ನಿಮಿಷಗಳ ಕಾಲ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಗಮನಾರ್ಹವಾಗಿ ಕಡಿಮೆಯಾಗಬಹುದು. ವಿಶೇಷವಾಗಿ ತಿಂಡಿ ನಂತರ 15 ನಿಮಿಷ, ಮಧ್ಯಾಹ್ನದ ಊಟದ ನಂತರ 15ರಿಂದ 20 ನಿಮಿಷ ಮತ್ತು ರಾತ್ರಿಯ ಊಟದ ಬಳಿಕ 20 ನಿಮಿಷಗಳ ಕಾಲ ನಡೆಯಬೇಕು. ದಿನಕ್ಕೆ ಒಟ್ಟು 45ರಿಂದ 60 ನಿಮಿಷಗಳ ನಡಿಗೆಯು ಸಕ್ಕರೆ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿಡುತ್ತದೆ.
ನಡೆಯುವ ಮೊದಲು ಮತ್ತು ನಂತರ ನೀವು ನಿಮ್ಮ ಸಕ್ಕರೆ ಮಟ್ಟವನ್ನು ಪರಿಶೀಲಿಸಿಕೊಳ್ಳಿ.
ಕಡಿಮೆ ಸಕ್ಕರೆ ಅಂಶವಿರುವವರು ಪೌಷ್ಟಿಕ ಆಹಾರ ಸೇವಿಸಿದ ನಂತರ ನಡೆಯುವುದು ಉತ್ತಮ
ನಿಮ್ಮ ಪಾದಗಳನ್ನು ಸುರಕ್ಷಿತವಾಗಿರಿಸಲು ಶೂಗಳನ್ನು ಧರಿಸಿ.
ಹೃದಯ ಸಮಸ್ಯೆ ಇರುವವರು ವೈದ್ಯರ ಸೂಚನೆ ಮೇರೆಗೆ ನಡೆಯುವುದು ಸೂಕ್ತ ಮತ್ತು ಅವರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.