ಇತಿಹಾಸದಲ್ಲಿನ ನಾಗರಿಕತೆಗಳು ಅಣಬೆಗಳನ್ನು ಶಕ್ತಿ ಮತ್ತು ಗುಣಪಡಿಸುವ ಮೂಲವಾಗಿ ಪರಿಗಣಿಸಿವೆ. ಗ್ರೀಕರು ಅಣಬೆಗಳು ತಿನ್ನುವುದು ಯೋಧರನ್ನು ಬಲಶಾಲಿ ಮಾಡುತ್ತದೆ ಎಂದು ನಂಬಿದ್ದರೆ, ಚೀನೀ ಸಂಸ್ಕೃತಿಯು ಆರೋಗ್ಯಕರ ಜೀವನಕ್ಕಾಗಿ ಅವುಗಳನ್ನು ಔಷಧೀಯ ಆಹಾರವೆಂದು ಪರಿಗಣಿಸಿದೆ. ಪ್ರಸ್ತುತ ಜಪಾನ್ ಕ್ಯಾನ್ಸರ್ ಚಿಕಿತ್ಸೆಗಾಗಿ ಅನುಮೋದಿತ ಅಣಬೆ ಆಧಾರಿತ ಔಷಧವನ್ನು ಹೊಂದಿದೆ. ಅಣಬೆಗಳಲ್ಲಿ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳಿಂದಾಗಿ ಉತ್ತಮ ಆರೋಗ್ಯಕ್ಕೆ ಅನುಕೂಲವೆ ಹೆಚ್ಚು. ಒಂದು ಕಪ್ ಅಣಬೆಗಳಲ್ಲಿ 15 ಕ್ಯಾಲೋರಿ 2 ಗ್ರಾಂ ಪ್ರೋಟೀನ್ ಮತ್ತು ಸುಮಾರು 1 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾದರೆ ಅಣೆಬೆ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
- ಅಣಬೆಯಲ್ಲಿನ ಸೆಲೆನಿಯಮ್ ಜೀವಕೋಶದ ಹಾನಿಯನ್ನು ತಡೆದು ದೇಹವು ಉತ್ಕರ್ಷಣ ನಿರೋಧಕಗಳನ್ನು ಮಾಡಲು ಸಹಾಯ ಮಾಡುತ್ತದೆ.
- ಅಣಬೆಯಲ್ಲಿನ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿನ ದ್ರವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರಗಳು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ
- ಬೀಟಾ ಗ್ಲುಕನ್ ಸೇರಿದಂತೆ ಅಣಬೆಗಳಲ್ಲಿನ ಸಂಯುಕ್ತಗಳು ಪ್ರಿಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಕರುಳು ನಮ್ಮ ರೋಗನಿರೋಧಕ ರಕ್ಷಣೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಮಶ್ರೂಮ್ ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
- ಮಶ್ರೂಮ್ನಲ್ಲಿನ ವಿಟಮಿನ್ ಬಿ6 ನರಮಂಡಲವನ್ನು ಬೆಂಬಲಿಸುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
- ಅಣಬೆಯಲ್ಲಿನ ಸತು ಅಂಶವು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಶಿಶುಗಳು ಮತ್ತು ಮಕ್ಕಳಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
- ಅಣಬೆ ಸೇವಿಸುವುದರಿಂದ ವಿಟಮಿನ್ ಡಿ2, ಒಂದು ರೀತಿಯ ವಿಟಮಿನ್ ಡಿ ದೊರೆತು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.