ಲೈಫ್‌ಸ್ಟೈಲ್

3 ವಸ್ತುಗಳಿಂದ ಕಾಲು ನೋವು ನಿವಾರಣೆಗೆ ಮನೆಮದ್ದು ರೆಡಿ; ತಯಾರಿಸುವ ವಿಧಾನವು ಸಿಂಪಲ್​​

ಇತ್ತೀಚೆಗೆ ಪೇನ್​​ ಕಿಲ್ಲರ್​​ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅಡಿಕ್ಷನ್​ ಆಗುವಷ್ಟರ ಮಟ್ಟಿಗೆ ನೋವು ನಿವಾರಕಗಳನ್ನು ಬಳಸುತ್ತಿದ್ದೇವೆ. ಪದೇಪದೆ ಬಳಸುತ್ತಿದ್ದಂತೆ ಡೋಸ್​​​ ಅನ್ನು ಹೆಚ್ಚಿಸಬೇಕಾಗುತ್ತದೆ. ಇದು ದೇಹದಲ್ಲಿನ ಅಂಗಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೋವನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಉತ್ತಮವಾಗಿದೆ.

ಮನೆಮದ್ದಿನಿಂದ ಯಾವುದ ಸೈಡ್ ಎಫೆಕ್ಟ್​ ಆಗುವುದಿಲ್ಲ. ಆದರೆ ಮನೆಮದ್ದು ಸಮಸ್ಯೆಯ ಮೂಲದಲ್ಲಿ ಕೆಲಸ ಮಾಡುತ್ತವೆ. ಕಾಲಿನಲ್ಲಿ ಹಿಮ್ಮಡಿ ಮೇಲಿನಿಂದ ಉಂಟಾಗುವ ನೋವಿಗೆ ಹಲವರಿಗೆ ದಿನನಿತ್ಯ ನರಕ ದರ್ಶನವಾದಂತೆ ಅನುಭವವಾಗುತ್ತದೆ. ಇದಕ್ಕೆ ಹಲವು ಪರಿಹಾರದ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಅವರಿಗಾಗಿಯೇ ಈ ಸಿಂಪಲ್​ ಟಿಪ್ಸ್​​. ಮಾಡುವ ವಿಧಾನವೂ ಸುಲಭ, ಹಾಗೂ ಉಪಯೋಗಿಸಿದ ಬಳಿಕ ಫಲಿತಾಂಶವನ್ನು ಬಹುಬೇಗನೆ  ನೀವೆ ತಿಳಿದುಕೊಳ್ಳುತ್ತೀರಿ. ಮನೆಯಲ್ಲೇ ತಯಾರಿಸಬಹುದಾದ ಮದ್ದಿನ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅಡುಗೆಮನೆಯಲ್ಲೇ ಸಿಗುವ ಮೂರು ವಸ್ತುಗಳಿಂದ ಮನೆಮದ್ದು ತಯಾರಿಸಬಹುದು. ಅಜ್ವಾನ್​, ಜೀರಿಗೆ, ಸೋಂಪನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಫ್ರೈ ಮಾಡಬೇಕು. ಮತ್ತು ಅದಕ್ಕೆ ಸ್ವಲ್ಪ ಹಸಿರು ಏಲಕ್ಕಿ ಸೇರಿಸಿಬೇಕು. ಬಳಿಕ ಎಲ್ಲಾ ಪದಾರ್ಥಗಳನ್ನು ಪುಡಿ ಮಾಡಬೇಕು. ರಾತ್ರಿ ಮಲಗುವ ಮುನ್ನ ಒಂದು ಚಮಚ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು.

ಇದರಿಂದ ಯಾವುದೇ ಸೈಡ್ ಎಫೆಕ್ಟ್​ ಆಗುವುದಿಲ್ಲ. ದೇಹದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಿಕೊಳ್ಳಲು ಮಾಡಬಹುದಾದ ಮತ್ತುಷ್ಟು ಮನೆಮದು ಈ ರೀತಿ ಇದೆ. ಶುಂಠಿ ಮತ್ತು ಅರಿಶಿನದಂತಹ ಉರಿಯೂತ ನಿವಾರಕವನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿ. ಸ್ನಾಯು ಎಳೆತ ಉಂಟಾದರೆ ಆ ಜಾಗಕ್ಕೆ ಉಪ್ಪು ನೀರಿನಿಂದ ತೊಳೆಯಿರಿ. ನೋವಿನಿಂದ ಕ್ರಮೇಣ ರಿಲೀಫ್​ ಸಿಗುತ್ತದೆ.