ಲೈಫ್‌ಸ್ಟೈಲ್

ಹಾಗಲಕಾಯಿ ಕಹಿಯಿಂದಾಗಿ ಇಷ್ಟಪಡದವರೆ ಹೆಚ್ಚು; ಇದು ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ..

ಹಾಗಲಕಾಯಿ ಆರೋಗ್ಯಕರ ಮಾತ್ರವಲ್ಲ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ತಜ್ಞರು ಹಾಗಲಕಾಯಿಯನ್ನು ನಿಮ್ಮ ಸಮತೋಲಿತ ಆಹಾರದ ಭಾಗವಾಗಿರಲಿ ಎಂದು ಶಿಫಾರಸು ಮಾಡುತ್ತಾರೆ. ಹಾಗಲಕಾಯಿ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ವರದಾನವಾಗಿದೆ. ಹಾಗಲಕಾಯಿ ಹೇಗೆ ತ್ವಚೆಗೆ ಪ್ರಯೋಜನಕಾರಿ ಎಂಬುದು ತಿಳಿದ್ರೆ ಮಿಸ್​ ಮಾಡದೆ ನಿಮ್ಮ ಆಹಾರದಲ್ಲಿ ಬಳಸುತ್ತೀರಿ.

  • ಹಾಗಲಕಾಯಿಯು ರಕ್ತವನ್ನು ಶುದ್ಧೀಕರಿಸುವ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಆಕ್ಸಿಡೆಂಟ್​​ಗಳಂತಹ ಅಂಶಗಳು ಕಂಡುಬರುವುದರಿಂದ ಇದು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿ ಸೋಂಕಿನ ಅಪಾಯ ಕಡಿಮೆ ಮಾಡಿ ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  • ಹಾಗಲಕಾಯಿಯಲ್ಲಿ ವಿಟಮಿನ್-ಎ, ವಿಟಮಿನ್-ಸಿ, ಜಿಂಕ್ ಮತ್ತು ಬಯೋಟಿನ್ ಅಂಶಗಳಿವೆ. ಇದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ. ಅಲ್ಲದೆ ಮುಖದ ಮೇಲಿನ ಸುಕ್ಕು ಹಾಗೂ ನಸುಕಂದು ಮಚ್ಚೆಗಳು ಕಡಿಮೆ ಆಗುತ್ತದೆ.
  • ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಅನೇಕ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಚರ್ಮದ ದದ್ದುಗಳು, ಚರ್ಮದ ಮಂದತೆಯಂತಹ ಸಮಸ್ಯೆಗಳಿಗೆ ಹಾಗಲಕಾಯಿ ಜ್ಯೂಸ್​ರಾಮಬಾಣವಾಗಿದೆ.
  • ಹಾಗಲಕಾಯಿಯನ್ನು ಸೇವಿಸುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ. ನೈಸರ್ಗಿಕ ಹೊಳಪನ್ನು ಹೆಚ್ಚಿಸುವುದರ ಜತೆಗೆ ಯುವಿ ಕಿರಣಗಳಿಂದ ರಕ್ಷಣೆ ನೀಡುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.
  • ತ್ವಚೆ ಕಾಂತಿ ಹೆಚ್ಚಿಸಲು ಹಾಗಲಾಕಾಯಿ ಫೇಸ್​ಪ್ಯಾಕ್​​​​​ ಅನ್ನು ಬಳಸಬಹುದು. ಹಾಗಲಕಾಯಿ ಫೇಸ್​ಪ್ಯಾಕ್​ ಮಾಡುವುದು ಬಹಳ ಸುಲುಭ. ಹಾಗಲಕಾಯಿ ರಸದಲ್ಲಿ ಮೊಸರು ಮತ್ತು ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಅನ್ವಯಿಸಿ, ನಂತರ ಮುಖವನ್ನು ತೊಳೆಯಿರಿ. ನಿಮ್ಮ ಚರ್ಮ ಸೂಕ್ಷ್ಮತೆ ಇರುವವರು ವೈದ್ಯರನ್ನು ಸಂಪರ್ಕಿಸಿ ಬಳಿಕ ಬಳಸಿ.