ಲೈಫ್‌ಸ್ಟೈಲ್

ಮೊಡವೆ, ಕಲೆಗಳಿಗೆ ರಾಮಬಾಣ; ತ್ವಚೆಯ ಸೌಂದರ್ಯ ಹೆಚ್ಚಿಸಲು ನೀವು ಇದನೊಮ್ಮೆ ಬಳಸಿ

ಇಂದಿನ ಜೀವನಶೈಲಿಯಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಧೂಳು, ಒತ್ತಡ, ಸೌಂದರ್ಯವರ್ಧಕಗಳ ಅಡ್ಡಪರಿಣಾಮ ಹೀಗೆ ಹಲವು ಕಾರಣಗಳಿವೆ. ವಿಶೇಷವಾಗಿ ಮುಖದಲ್ಲಿನ ಮೊಡವೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಇಂತಹ ಸಮಸ್ಯೆಗಳಿಂದ ನಮ್ಮನ್ನು ಹೊರತರಲೆಂದೆ ಆಯುರ್ವೇದ ಚಿಕಿತ್ಸೆಗಳು ನಮಗೆ ವರದಾನವಾಗಿದೆ. ಆಯುರ್ವೇದದಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ ನಮ್ಮ ತ್ವಚೆಯಿಂದ ಮೊಡವೆಗಳು, ಅದರ ಕಲೆಗಳನ್ನು ತೆಗೆದುಹಾಕಿ ಸೌಂದರ್ಯವನ್ನು ಹೆಚ್ಚಿಸುತ್ತದೆ ತ್ರಿಫಲದ ಪುಡಿ ಒಂದಾಗಿದೆ. ಇದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಔಷಧ ಆಗಿದೆ.

ತ್ರಿಫಲ ಪುಡಿ: ತ್ರಿಫಲ ಪುಡಿ ಎಂದರೆ ಮೂರು ಹಣ್ಣುಗಳಿಂದ ಮಾಡಲ್ಪಟ್ಟಿರುವುದು. ಆಮ್ಲಾ, ವಿಭಿತಕಿ ಮತ್ತು ಹರಿತಕಿ ಈ ಮೂರರಿಂದ ಮಾಡಲಾಗಿದೆ. ಈ ಮೂರು ಹಣ್ಣುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.

ತ್ರಿಫಲಾ ಪುಡಿಯಿಂದ ಆಗುವ ಪ್ರಯೋಜನಗಳು:

  • ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಮೂಲಕ ಚರ್ಮವನ್ನು ಪುನರ್ಯೌವನಗೊಳಿಸುತ್ತದೆ.
  • ಈ ಪೌಡರ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.
  • ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್​​ ಸಿ ಸಮೃದ್ಧವಾಗಿದ್ದು, ಇದು ಚರ್ಮವನ್ನು ಮೃದುವಾಗಿಸಿ, ಹೈಡ್ರೀಕರಿಸುತ್ತದೆ.
  • ಪಿಗ್ಮೆಂಟೇಶನ್​​​ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ
  • ಇದು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತ್ರಿಫಲ ಪುಡಿಯನ್ನು ಬಳಸುವುದು ಹೇಗೆ?: ತ್ರಿಫಲ ಪುಡಿಯನ್ನು ಫೇಸ್ ಪ್ಯಾಕ್‌ನಂತೆ ಅಥವಾ ಫೇಸ್ ಮಾಸ್ಕ್‌ನಂತೆ ಬಳಸಬಹುದು. 2 ಚಮಚ ತ್ರಿಫಲ ಪುಡಿ, 2 ಟೀಸ್ಪೂನ್​​ ರೋಸ್​​ ವಾಟರ್​ ಎರಡನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಚರ್ಮದ ಅಲರ್ಜಿ ಇರುವವರು ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.