ಲೈಫ್‌ಸ್ಟೈಲ್

ಹಣ್ಣಿನ ರಾಜ ಮಾವು ಎಲ್ಲರಿಗೂ ಫೇವರಿಟ್​; ಸಿಹಿ ಜತೆಗೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿ ವರ್ಷ ಜುಲೈ 22ರಂದು ರಾಷ್ಟ್ರಿಯ ಮಾವು ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಮಾವಿಗೆ ಮೀಸಲಿಟ್ಟಿರುವುದಾಗಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು 1987ರಲ್ಲಿ ಘೋಷಿಸಿತು. ಮಾವು ತನ್ನ ಹಲವು ಪ್ರಭೇದಗಳಿಗೆ ಹೆಸರುವಾಸಿಯಾಗಿದೆ. ರುಚಿಯಲ್ಲಿ ಸಮೃದ್ಧವಾಗಿರುವುದರ ಜತೆಗೆ ಅನೇಕ ಪೋಷಕಾಂಶಗಳಿಂದ ಕೂಡಿದೆ. ಈ ಕಾರಣದಿಂದ ಜನರು ಇದನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಮಾವಿನಹಣ್ಣು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಕಬ್ಬಿಣಾಂಶ ಹೇರಳವಾಗಿರುವ ಆಹಾರ ಇದೇ ನೋಡಿ; ರಕ್ತಹೀನತೆ ನಿವಾರಿಸಲು ಇರುವ ಸಿಂಪಲ್​​​​ವೇ ಮಾವಿನಹಣ್ಣು ತಿನ್ನುವುದರಿಂದ ಇರುವ ಪ್ರಯೋಜನಗಳು:

  • ಮಲಬದ್ಧತೆ ನಿವಾರಣೆ: ಮಾವಿನಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಮಲಬದ್ಧತೆ ಮತ್ತು ಉಬ್ಬುವಿಕೆಯಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
  • ತೂಕ ಇಳಿಕೆಗೆ ಸಹಕಾರಿ: ಮಾವಿನ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದೆ. ಇದು ಆರೋಗ್ಯಕರ ಕಾರ್ಬೋಹೈಡ್ರೇಟ್​​ಗಳು ಮತ್ತು ಕರಗುವ ಫೈಬರ್ ಅನ್ನು ಹೊಂದಿದೆ. ಇದು ಹೊಟ್ಟೆಯನ್ನು ತುಂಬಿರುವಂತೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತದೆ.
  • ಚರ್ಮ ಮತ್ತು ಕೂದಲಿಗೂ ಉಪಯೋಗ: ಮಾವು ವಿಟಮಿನ್‌ಗಳ ಜತೆಗೆ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಕಣ್ಣಿನ ಆರೋಗ್ಯ ಸುಧಾರಣೆ: ಮಾವು ಬೀಟಾ-ಕ್ಯಾರೋಟಿನ್​​ನ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಉತ್ತಮ ದೃಷ್ಟಿಗೆ ವಿಟಮಿನ್ ಎ ಅತ್ಯಗತ್ಯ.
  • ರೋಗನಿರೋಧಕ ಶಕ್ತಿ ವೃದ್ಧಿ: ಮಾವಿನ ಹಣ್ಣು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದ್ದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ದೇಹವನ್ನು ಸೋಂಕು ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
  • ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಮಾವಿನಹಣ್ಣು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಮುಖ್ಯವಾದ ಖನಿಜವಾಗಿದೆ. ಪೊಟ್ಯಾಸಿಯಮ್ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.