ಲೈಫ್‌ಸ್ಟೈಲ್

Health Tips | ಈ ವ್ಯಕ್ತಿಗಳು ಜೀರಿಗೆ ಬಳಸುವುದನ್ನು ತಪ್ಪಿಸಿ; ಇಲ್ಲದಿದ್ರೆ ಅಪಾಯ ಆಗೋದು ಗ್ಯಾರಂಟಿ

ಮನೆಯಲ್ಲಿ ಮಾಡುವ ಯಾವುದೇ ರುಚಿಕರ ಅಡುಗೆಯು ಜೀರಿಗೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಜೀರಿಗೆಯನ್ನು ಸೇರಿಸುವುದರಿಂದ ಆಹಾರದ ರುಚಿ ಬದಲಾಗುತ್ತದೆ. ಆಯುರ್ವೇದದಲ್ಲಿ ಜೀರಿಗೆಯನ್ನು ಪ್ರಮುಖ ಔಷಧವೆಂದು ಪರಿಗಣಿಸಲಾಗುತ್ತದೆ. ಜೀರಿಗೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇದೆ. ಅಲ್ಲದೆ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು ಮತ್ತು ಫೈಬರ್‌ಗಳು ಸಮೃದ್ಧವಾಗಿವೆ.(Health Tips)

ಈ ಮೇಲೆ ತಿಳಿಸಿದ್ದೆಲ್ಲವೂ ಸತ್ಯ, ಆದರೆ ಎಲ್ಲ ಪದಾರ್ಥಗಳು ಎಲ್ಲರಿಗೂ ರುಚಿಕರ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಪದಾರ್ಥಗಳು ಕೆಲವರಿಗೆ ಸರಿಹೊಂದುವುದಿಲ್ಲ. ಅಂತಹ ಪದಾರ್ಥಗಳನ್ನು ಸೇವಿಸಿದಾಗ ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜೀರಿಗೆ ಬಳಸುವುದನ್ನು ಕೆಲವು ಆರೋಗ್ಯ ಸಮಸ್ಯೆ ಇರುವವರು ತಪ್ಪಿಸಬೇಕು. ಯಾವ ವ್ಯಕ್ತಿಗಳು ಜೀರಿಗೆಯಿಂದ ದೂರ ಉಳಿಯಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಈ ತೊಂದರೆ ಇರುವವರು ಜೀರಿಗೆಯಿಂದ ಅಂತರ ಕಾಪಾಡಿ:

  • ಅಲರ್ಜಿ: ಜೀರಿಗೆಯನ್ನು ಸೇವಿಸುವುದರಿಂದ ಅನೇಕ ಜನರಿಗೆ ತುರಿಕೆ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ ಉಂಟಾಗುತ್ತದೆ. ಅಂತಹವರು ಜೀರಿಗೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಅವರು ಜೀರಿಗೆಗೆ ಅಲರ್ಜಿಯನ್ನು ಹೊಂದಿರಬಹುದು.
  • ರಕ್ತದಲ್ಲಿನ ಸಕ್ಕರೆಯಲ್ಲಿ ಅತಿಯಾದ ಇಳಿಕೆ: ಜೀರಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೈಪೊಗ್ಲಿಸಿಮಿಯಾ ಸಮಸ್ಯೆ ಇರುವವರು ಅಂದರೆ ಸಕ್ಕರೆಯ ಕೊರತೆ. ಅವರು ಜೀರಿಗೆಯನ್ನು ಸೇವಿಸುವುದನ್ನು ತಪ್ಪಿಸಬೇಕು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಅತಿಯಾಗಿ ಕಡಿಮೆ ಮಾಡಬಹುದು.
  • ಗರ್ಭಪಾತದ ಅಪಾಯ: ಗರ್ಭಿಣಿಯರು ಜೀರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಇದು ಅವರಿಗೆ ಅಸುರಕ್ಷಿತವಾಗಿರಬಹುದು. ಜೀರಿಗೆಯ ಅತಿಯಾದ ಸೇವನೆಯು ಗರ್ಭಿಣಿಯರಲ್ಲಿ ಗರ್ಭಾಶಯವನ್ನು ಉತ್ತೇಜಿಸುತ್ತದೆ. ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.
  • ಹಾರ್ಮೋನ್ ಅಸಮತೋಲನ: ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಜೀರಿಗೆಯ ಅತಿಯಾದ ಸೇವನೆಯು ಮಹಿಳೆಯರ ಋತುಸ್ರಾವದ ಮೇಲೆ ಪರಿಣಾಮ ಬೀರುತ್ತದೆ.