ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ತಲೆನೋವು ( Headache Health Tips ) ಸಾಮಾನ್ಯವಾಗಿದೆ. ಈ ದಿನಗಳಲ್ಲಿ ಬಹುತೇಕ ಎಲ್ಲಾ ವಯಸ್ಸಿನ ಜನರು ತಲೆನೋವಿನಿಂದ ಬಳಲುತ್ತಿದ್ದಾರೆ. ತಲೆನೋವಿನಿಂದ ಬಳಲುತ್ತಿರುವ ಅನೇಕ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇದು ಅವರಿಗೆ ತಕ್ಷಣದ ಉಪಶಮನವನ್ನು ನೀಡುತ್ತದೆ, ಅವರು ತಲೆನೋವು ಬಂದಾಗ ತಕ್ಷಣ ಈ ಔಷಧಿಯನ್ನು ಬಳಸುತ್ತಾರೆ. ಆದರೆ ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಇವು ಕೆಲವೊಮ್ಮೆ ತಲೆನೋವಿಗಿಂತಲೂ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ನಾವು ಇಂದು ನಿಮಗೆ ಕೆಲವು ಸರಳ ಸಲಹೆ ನೀಡುತ್ತಿದ್ದೇವೆ.
ತಲೆನೋವಿಗೆ ಸಲಹೆಗಳು ( Headache Health Tips )
1. ದೇಹಕ್ಕೆ ನಿದ್ರೆ ಬೇಕು. ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ಅಗತ್ಯವಿದೆ. ಹಾಗಾಗಿ ಹೆಚ್ಚು ನಿದ್ದೆ ಮಾಡುವುದು ಒಳ್ಳೆಯದಲ್ಲ. ಆದ್ದರಿಂದ ನಿದ್ರೆ-ಎಚ್ಚರ ಸಮಯವನ್ನು ಸಮಾನವಾಗಿಡಲು ಪ್ರಯತ್ನಿಸಿ.
2. ಲವಂಗವು ತಲೆನೋವಿಗೆ ಸಹ ಉಪಯುಕ್ತವಾಗಿದೆ. ಇದರಲ್ಲಿ ಲವಂಗವನ್ನು ಸ್ವಲ್ಪ ಬಿಸಿ ಮಾಡಿ ಪುಡಿ ಮಾಡಿ ತಲೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ. ಇನ್ನೊಂದು ವಿಧಾನವೆಂದರೆ ಲವಂಗದ ಪುಡಿ ಮತ್ತು ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸುವುದು. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ತಕ್ಷಣ ಪರಿಹಾರ ಸಿಗುತ್ತದೆ.
3. ಬೇಸಿಗೆಯಲ್ಲಿ ತಲೆ ನೋವು ಕಾಣಿಸಿಕೊಂಡರೆ ತೆಂಗಿನೆಣ್ಣೆಯಿಂದ ತಲೆಗೆ 15 ನಿಮಿಷ ಮಸಾಜ್ ಮಾಡುವುದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ. ಇದು ತಲೆಯನ್ನು ತಂಪಾಗಿಸುತ್ತದೆ. ಇದು ನೋವನ್ನು ಸಹ ಕಡಿಮೆ ಮಾಡುತ್ತದೆ.ಗ್ಯಾಸ್, ಅಸಿಡಿಟಿಯಿಂದ ತಲೆನೋವು ಇದ್ದರೆ ತಲೆಯ ಇತರ ಭಾಗದಲ್ಲಿ ನೋವಿರುತ್ತದೆ.
4. ಬೆಳ್ಳುಳ್ಳಿ ತಲೆನೋವಿನಲ್ಲಿ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಬೆಳ್ಳುಳ್ಳಿಯ ಕೆಲವು ತುಂಡುಗಳನ್ನು ತೆಗೆದುಕೊಂಡು ರಸವನ್ನು ಹಿಂಡಿ ಕುಡಿಯಿರಿ. ಇದು ತಲೆನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.
5: ನಿಯಮಿತ ವ್ಯಾಯಾಮ ತಲೆನೋವೂ ಸೇರಿದಂತೆ ಹಲವು ತೊಂದರೆಗಳು ಬಾರದೇ ಇರಲು ನೆರವಾಗುತ್ತದೆ. ಏರೋಬಿಕ್, ನಡಿಗೆ, ಸೈಕ್ಲಿಂಗ್, ಈಜು, ಜಾಗಿಂಗ್ ಮೊದಲಾದವುಗಳನ್ನು ನಿತ್ಯವೂ ಒಂದೇ ಸಮಯದಲ್ಲಿ ಅನುಸರಿಸಿ.
6: ದೇಹದಲ್ಲಿ ಅಗತ್ಯ ಪ್ರಮಾಣದ ನೀರಿನ ಅಂಶ ಕಡಿಮೆಯಾದಾಗ ತಲೆನೋವು ಎದುರಾಗುವ ಸಾಧ್ಯತೆ ಹೆಚ್ಚು. ಇದು ಕೆಲವರಲ್ಲಿ ಅತಿ ಹೆಚ್ಚು ಕಂಡು ಬಂದರೆ ಕೆಲವರಲ್ಲಿ ಮತ್ತು ನೀರಿನ ಕೊರತೆ ಇರುವ ಪ್ರದೇಶದ ನಿವಾಸಿಗಳಲ್ಲಿ ಇರುವುದಿಲ್ಲ. ಏಕೆಂದರೆ ನೀರಿನ ಅಂಶ ಕಡಿಮೆ ಇರುವುದು ಅವರ ದೇಹಕ್ಕೆ ಒಗ್ಗಿಕೊಂಡಿರುತ್ತದೆ. ಉಳಿದವರಲ್ಲಿ ನೀರಿನ ಅಂಶ ಕಡಿಮೆಯಾದಾಗ ಮೆದುಳಿನ ಕ್ಷಮತೆಗೆ ಅಗತ್ಯವಿರುವಷ್ಟು ನೀರು ಲಭಿಸದೇ ಇದರ ಕೊರತೆಯನ್ನು ನೋವಿನ ಮೂಲಕ ಪ್ರಕಟಿಸುತ್ತದೆ.
ಹಣೆ ಮತ್ತು ಕುತ್ತಿಗೆಯ ಮೇಲೆ ಮಂಜುಗಡ್ಡೆ ತುಂಬಿದ ಬಟ್ಟೆಯನ್ನು 10-15 ನಿಮಿಷಗಳ ಕಾಲ ಇರಿಸುವ ಮೂಲಕವೂ ತಲೆನೋವನ್ನು ಕಡಿಮೆ ಮಾಡಬಹುದು. ನೆನಪಿರಲಿ, ತಲೆನೋವು ಶೀತದಿಂದ ಎದುರಾಗಿದ್ದರೆ ಇದನ್ನು ಪ್ರಯತ್ನಿಸಬಾರದು.