ಲೈಫ್‌ಸ್ಟೈಲ್

ನೀವು ಟೀ ಕುಡಿಯುವಾಗ ಈ ತಪ್ಪು ಮಾಡ್ತಿದ್ದೀರಾ? ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಚ್ಚರ!

ನಾವು ದಿನನಿತ್ಯ ಸೇವಿಸುವ ಉಪ್ಪು ಮತ್ತು ಸಕ್ಕರೆಯಲ್ಲಿ ಮೈಕ್ರೋಪ್ಲಾಸ್ಟಿಕ್ ಇದೆ ಎಂಬ ಸುದ್ದಿ ಜನರನ್ನು ಒತ್ತಡಕ್ಕೆ ಸಿಲುಕಿದೆ. ಅಧ್ಯಯನದ ಫಲಿತಾಂಶದಲ್ಲಿಯೂ ನಿಜವೆಂದು ಕಂಡುಬಂದಿದೆ. ಉಪ್ಪು ಮತ್ತು ಸಕ್ಕರೆಯ ಹೊರತಾಗಿ, ಮೈಕ್ರೋಪ್ಲಾಸ್ಟಿಕ್​ಗಳು​ ​ನಮ್ಮ ದೇಹವನ್ನು ಹಲವಾರು ರೀತಿಯಲ್ಲಿ ಪ್ರವೇಶಿಸುತ್ತಿವೆ. ಇದರ ಪರಿಣಾಮ ಜನರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಾವು ದಿನನಿತ್ಯ ಸೇವಿಸುವ ‘ಟೀ’ನಿಂದಲೂ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಸೇರುತ್ತಿವೆ.

ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಮೈಕ್ರೋಪ್ಲಾಸ್ಟಿಕ್ ಅನೇಕ ರೋಗಗಳ ಅಪಾಯವನ್ನು ಉಂಟುಮಾಡುತ್ತದೆ. ಇದು ಸಂತಾನೋತ್ಪತ್ತಿ ಸಮಸ್ಯೆಗಳಿಂದ ಹಿಡಿದು ಕ್ಯಾನ್ಸರ್​ವರೆಗಿನ ಅನೇಕ ರೋಗಗಳಿಗೆ ಕಾರಣವಾಗಬಹುದು. ತಿಳಿದೋ, ತಿಳಿಯದೆಯೋ ಕೆಲವು ವಸ್ತುಗಳ ಮೂಲಕ ಪ್ಲಾಸ್ಟಿಕ್ ಅನ್ನು ನಮ್ಮ ದೇಹಕ್ಕೆ ಕಳುಹಿಸುತ್ತಿದ್ದೇವೆ. ನಾವು ಕುಡಿಯುವ ಚಹಾದಲ್ಲೂ ಪ್ಲಾಸ್ಟಿಕ್ ಇರುತ್ತದೆ.

ಅನೇಕ ಜನರು ತಮ್ಮ ಮನೆಗಳಲ್ಲಿ ಚಹಾವನ್ನು ಫಿಲ್ಟರ್ ಮಾಡಲು ಪ್ಲಾಸ್ಟಿಕ್ ಸ್ಟ್ರೈನರ್ ಅನ್ನು ಬಳಸುತ್ತಾರೆ. ಬಿಸಿ ಚಹಾವನ್ನು ಅದರ ಮೂಲಕ ಫಿಲ್ಟರ್​ ಮಾಡುತ್ತಾರೆ. ಅದಲ್ಲದೆ, ಅನೇಕರು ಆಫೀಸ್​ಗಳಲ್ಲಿ ಪಾಲಿಥಿನ್​ನಲ್ಲಿ ಟೀ ಆರ್ಡರ್ ಮಾಡಿ ಕುಡಿಯುತ್ತಾರೆ. ಹಾಗೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ಲಾಸ್ಟಿಕ್ ಶಾಖಕ್ಕೆ ಒಡ್ಡಿಕೊಂಡಾಗ, ಹೆಚ್ಚಿನ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳು ಬಿಡುಗಡೆಯಾಗುತ್ತವೆ. ಈ ಕಾರಣಕ್ಕಾಗಿ ಪ್ಲಾಸ್ಟಿಕ್ ಕವರ್‌ನೊಂದಿಗೆ ಚಹಾ ಕುಡಿಯುವುದು ಹಾನಿಕಾರಕವಾಗಿದೆ.

ಸೌಂದರ್ಯವರ್ಧಕ ಉತ್ಪನ್ನಗಳಿಂದ ಹಿಡಿದು ನೀರಿನ ಬಾಟಲಿಗಳವರೆಗೆ ಹಲವಾರು ರೀತಿಯ ಹಾನಿಕಾರಕ ಪ್ಲಾಸ್ಟಿಕ್‌ಗಳನ್ನು ನಮ್ಮ ದೇಹಕ್ಕೆ ಪರಿಚಯಿಸುತ್ತಿದ್ದೇವೆ. ಅನೇಕ ಟೂತ್‌ಪೇಸ್ಟ್‌ಗಳು, ಮುಖದ ಸ್ಕ್ರಬ್‌ಗಳು ಮತ್ತು ವೈಯಕ್ತಿಕ ನೈರ್ಮಲ್ಯ ವಸ್ತುಗಳಿಂದ ಮೈಕ್ರೊಪ್ಲಾಸ್ಟಿಕ್‌ಗಳು ದೇಹವನ್ನು ಪ್ರವೇಶಿಸುವ ಅಪಾಯವಿದೆ.

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ?

ವಿಜ್ಞಾನಿಗಳು ಮೈಕ್ರೋಪ್ಲಾಸ್ಟಿಕ್ ಅನ್ನು ಮನುಕುಲದ ದೊಡ್ಡ ಶತ್ರು ಎಂದು ಪರಿಗಣಿಸುತ್ತಾರೆ. ನಮ್ಮ ದೇಹದಿಂದ ಪ್ಲಾಸ್ಟಿಕ್ ತೆಗೆಯುವುದು ಸುಲಭವಲ್ಲ. ಹೀಗಾಗಿ ಮೊದಲು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ. ದೇಹವನ್ನು ನಿರ್ವಿಷಗೊಳಿಸಲು ಹಸಿರು ತರಕಾರಿ, ಬೆಳ್ಳುಳ್ಳಿ, ಕೋಸುಗಡ್ಡೆ, ಎಲೆಕೋಸು ಹಾಗೂ ಹಣ್ಣುಗಳನ್ನು ಸೇವಿಸಿ. ಇದರ ಜೊತೆಗೆ ನಿಂಬೆರಸ ಕುಡಿದು, ವ್ಯಾಯಾಮ ಮಾಡಿ. ಸಾಧ್ಯವಾದಷ್ಟು ಹೆಚ್ಚು ಆಮ್ಲಜನಕವನ್ನು ಉಸಿರಾಡಿ. (ಏಜೆನ್ಸೀಸ್​)