ಲೈಫ್‌ಸ್ಟೈಲ್

ಫ್ಯಾಷನ್: ಹೆಡ್‌ಬ್ಯಾಂಡ್ ಬಳಕೆಗೆ ಬಂದದ್ದು ಯಾವಾಗ ಗೊತ್ತಾ?

ಹೇರ್ ಆಕ್ಸೆಸರಿಗಳಲ್ಲಿ ಎವರ್ ಗ್ರೀನ್ ಹೆಡ್‌ಬ್ಯಾಂಡ್ ಅಥವಾ ಹೇರ್‌ಬ್ಯಾಂಡ್. ಎಲ್ಲ ವಯೋಮಾನದವರಿಗೂ ಒಪ್ಪುವ ಚೆಂದದ ಹೆಡ್‌ಬ್ಯಾಂಡ್ ಇಂದು-ನಿನ್ನೆಯ ಫ್ಯಾಷನ್ ಅಲ್ಲ. ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಹಾಗೆ ನೋಡಿದರೆ ಮೊದಲು ಹೆಡ್‌ಬ್ಯಾಂಡ್ ಬಳಕೆಗೆ ಬಂದದ್ದು ಗ್ರೀಕ್‌ನಲ್ಲಿ. ಕ್ರಿ.ಪೂ. ೪೭೫-೩೩೦ರ ವೇಳೆಗೆ. ಇದೇ ಅವಧಿಯಲ್ಲಿ ಬಂದ ಅದೆಷ್ಟೋ ಹೇರ್ ಆಕ್ಸೆಸರಿಗಳು ಓಲ್ಡ್ ಫ್ಯಾಷನ್ ಎಂದು ಮೂಲೆಗುಂಪಾದರೂ, ಹೆಡ್‌ಬ್ಯಾಂಡ್ ಮಾತ್ರ ಇಂದಿಗೂ ವುಮನ್ ಫ್ಯಾಷನ್ ಆಗಿದೆ.

ಹೆಡ್‌ಬ್ಯಾಂಡ್‌ನ ಸ್ಪೆಷಾಲಿಟಿಯೇ ಅಂಥದ್ದು. ಇದರಲ್ಲಿ ಇಂದು ಬಂದ ಪ್ಯಾಟರ್ನ್ ನಾಳೆ ಬರುವುದಿಲ್ಲ. ಸಾಮಾನ್ಯ ಜನರನ್ನಷ್ಟೇ ಅಲ್ಲದೆ, ಸೆಲೆಬ್ರಿಟಿಗಳ ಕೂದಲನ್ನೂ ಅಲಂಕರಿಸಿದ, ಅಲಂಕರಿಸುತ್ತಿರುವ ಹೆಡ್‌ಬ್ಯಾಂಡ್ ಔಟ್ ಆಫ್ ಫ್ಯಾಷನ್ ಅಲ್ಲವೇ ಅಲ್ಲ ಎನ್ನುತ್ತಾರೆ ಬಲ್ಲವರು. ಡಿಫರೆಂಟ್ ಫ್ಯಾಬ್ರಿಕ್, ಮೆಟೀರಿಯಲ್, ಟೆಕ್ನಿಕ್‌ಗಳಲ್ಲಿ ಸಿಗುವ ಹೆಡ್‌ಬ್ಯಾಂಡ್ ಕಲೆಕ್ಷನ್‌ಗಳು ಆನ್‌ಲೈನ್ ಹಾಗೂ ಎಲ್ಲಾ ಶಾಪಿಂಗ್ ಮಾಲ್‌ಗಳಲ್ಲೂ ಕಣ್ಮನ ಸೆಳೆಯುತ್ತವೆ. ಕಡಿಮೆ ಎಂದರೂ ೫೦ಕ್ಕೂ ಹೆಚ್ಚಿನ ಪ್ಯಾಟರ್ನ್ಗಳಲ್ಲಿ ಲಭ್ಯವಿದ್ದು, ನೋಡಿದರೆ, ಮಗದೊಮ್ಮೆ ಖರೀದಿಸುವ ಮನಸ್ಸಾಗುವುದು ಸುಳ್ಳಲ್ಲ!

ಯಾರ‍್ಯಾರು ಧರಿಸಬಹುದು?
ಇದು ಕೇವಲ ಹೆಣ್ಣುಮಕ್ಕಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಸೊಂಪು ಕೂದಲ ಗಂಡು ಮಕ್ಕಳ ತಲೆಯಲ್ಲಿ, ಚಿಕ್ಕ ಮಕ್ಕಳ ಪುಡಿ ಕೂದಲಲ್ಲಿ ರಾರಾಜಿಸುತ್ತಿರುತ್ತದೆ. ಹೆಡ್‌ಬ್ಯಾಂಡ್ ಪ್ರತಿಯೊಬ್ಬರ ಹೇರ್‌ಸ್ಟೆöÊಲನ್ನು ಮತ್ತಷ್ಟು ಸುಂದರಗೊಳಿಸುತ್ತದೆಯಾದರೂ, ಕೆಲವು ಹೇರ್ ಸ್ಟೆöÊಲ್‌ಗಳು ಮಾತ್ರ ಹೆಡ್‌ಬ್ಯಾಂಡ್‌ಗೆ ಪರ್ಫೆಕ್ಟ್ ಮ್ಯಾಚ್ ಅನ್ನಬಹುದು. ಉದಾಹರಣೆಗೆ ಬಂದನ ಮತ್ತು ರಿಬ್ಬನ್ ಟೈಗಳು. ಈ ಹೆಡ್ ಬ್ಯಾಂಡ್‌ಗಳು ಸ್ಟೆçöÊಟ್ ಹೇರ್‌ನವರಿಗೆ, ಓಪನ್ ಹೇರ್ ಬಿಟ್ಟಾಗ ಅಂದವಾಗಿ ಕಾಣಿಸುತ್ತದೆ. ಅದ್ಹೇಗೆ ಕಾಣಿಸಲಿ, ಮುಂಗುರಳನ್ನು ಅಂಕೆಯಲ್ಲಿಟ್ಟುಕೊAಡು, ಕಿವಿಯ ಆಚೀಚೆ ಹಾರಾಡುವ ಕೂದಲನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಕೆಲಸವನ್ನು ಮಾತ್ರ ನೀಟಾಗಿ ಮಾಡುತ್ತದೆ.

ಹೆಡ್‌ಬ್ಯಾಂಡ್‌ಗಳ ಫ್ಯಾಷನ್
ಸ್ವೀಟ್‌ಬ್ಯಾಂಡ್ಸ್, ಪ್ಲಾಸ್ಟಿಕ್, ಫ್ಯಾಬ್ರಿಕ್, ಟೂಥೆಡ್ ಹೆಡ್‌ಬ್ಯಾಂಡ್‌ಗಳು ಯಾವಾಗಲೂ ಫ್ಯಾಷನಬಲ್ ಲಿಸ್ಟ್ನಲ್ಲಿವೆ. ಟರ‍್ರಿ ಕ್ಲಾಥ್‌ನಲ್ಲಿ ಮಾಡಿರುವ ಸ್ವೀಟ್‌ಬ್ಯಾಂಡ್‌ಗಳು ಸಾಮಾನ್ಯವಾಗಿ ಹಣೆಗೆ ತಾಗುವಂತಿರುತ್ತದೆ. ಇದನ್ನು ಕ್ರೀಡಾಪಟುಗಳು ಹೆಚ್ಚಾಗಿ ಧರಿಸುತ್ತಾರೆ. ಪ್ಲಾಸ್ಟಿಕ್ ಹೆಡ್‌ಬ್ಯಾಂಡ್ ಅಂತೂ ಜಗತ್ಪçಸಿದ್ಧ. ಟಿನೇಜರ್‌ಗಳ ಫೇವರಿಟ್. ಅಗ್ಗವೂ ಕೂಡ. ಇದರ ಶೇಪ್‌ಗಳು ವೇವಿ ಮತ್ತು ರೌಂಡ್‌ನಲ್ಲಿ ಬರುತ್ತವೆ. ಬ್ರೆöÊಟ್ ಕಲರ್‌ನಲ್ಲಿ ದೊರೆಯುತ್ತವೆ. ಇನ್ನು ಫ್ಯಾಬ್ರಿಕ್‌ನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಪ್ಲಾಸ್ಟಿಕ್ ಹೆಡ್‌ಬ್ಯಾಂಡ್. ಫ್ಯಾಬ್ರಿಕ್‌ನಿಂದ ಕವರ್ ಆಗಿರುತ್ತದೆ. ಎರಡನೆಯದು ಫ್ಯಾಬ್ರಿಕ್‌ನಲ್ಲಿಯೇ ಫಿಟ್ ಎಲಾಸ್ಟಿಕ್ ಅಳವಡಿಸಿರುತ್ತಾರೆ. ಅಗಲ ಪಟ್ಟಿಯಿರುತ್ತದೆ. ಚಿಕ್ಕ ಪಟ್ಟಿಯಲ್ಲಿ ಬರುವುದು ನೋಡಲು ಸ್ಟೆöÊಲೀಷ್ ಆಗಿ ಕಾಣುತ್ತದೆ. ೧೯೭೦-೮೦ರಲ್ಲಿ ಇದರ ಬಳಕೆ ತುಸು ಹೆಚ್ಚೇ ಇತ್ತು. ಟೂಥೆಡ್ ಹೆಡ್‌ಬ್ಯಾಂಡ್‌ಗಳನ್ನು ಮೆಟಾಲಿಕ್ ಹಾಗೂ ಪ್ಲಾಸ್ಟಿಕ್ ವೈರ್‌ಗಳಲ್ಲಿ ಮಾಡಿರುತ್ತಾರೆ. ಇದನ್ನು ಧರಿಸಿದಾಗ ಕೂದಲನ್ನು ಬಾಚಿರುವ ರೀತಿಯಲ್ಲಿ ಫೀಲ್ ಆಗುತ್ತದೆ.

ಬಾಲಿವುಡ್‌ನಿಂದ- ಸ್ಯಾಂಡಲ್‌ವುಡ್‌ವೆರೆಗೆ…
ತಾರೆಯರನ್ನು ಬಿಟ್ಟಿಲ್ಲ ಹೆಡ್‌ಬ್ಯಾಂಡ್‌ಗಳ ಮೋಡಿ. ‘ಕುಚ್ ಕುಚ್ ಹೋಥಾ ಹೈ’ ಚಿತ್ರದಲ್ಲಿ ಕಾಜೋಲ್ ಶಾರ್ಟ್ ಹೇರ್ ಅನ್ನು ಅಪ್ಪಿದ್ದು ಇದೇ ಹೆಡ್‌ಬ್ಯಾಂಡ್. ಈ ಚಿತ್ರ ನೋಡಿದ ಬಹಳಷ್ಟು ಹುಡುಗಿಯರು ಇದೇ ಸ್ಟೆöÊಲನ್ನು ಕಾಪಿ ಮಾಡಿದ್ದು ನೆನಪಿರಬಹುದು. ಇತ್ತೀಚೆಗೆ ‘ಅಜಬ್ ಪ್ರೇಮ್ ಕಿ ಘಜಬ್ ಕಹಾನಿ’ ಚಿತ್ರದ ಬಹುತೇಕ ದೃಶ್ಯ ಹಾಗೂ ಹಾಡುಗಳಲ್ಲಿ ಕತ್ರೀನಾ ಕೂಡ ಹೆಡ್‌ಬ್ಯಾಂಡ್ ಹಾಕಿ ನಟಿಸಿದ್ದರು. ಆಲಿಯಾ ಭಟ್, ಪರಿಣೀತಿ ಚೋಪ್ರಾ, ಐಶ್ವರ್ಯಾ ರೈ, ಕಂಗನಾ ಪ್ರತಿಯೊಬ್ಬರೂ ಸ್ಟಡೆಡ್, ಫ್ಲೋರಲ್, ಬಂದನ್‌ನAತರ ಹೆಡ್‌ಬ್ಯಾಂಡ್‌ಗಳನ್ನು ಹಾಕಿ ಕ್ಯಾಮೆರಾಗೆ ಫೋಸು ನೀಡಿದವರೇ. ಕನ್ನಡ ನಟಿಮಣಿಯರ ಪೈಕಿ ‘ಎಕ್ಸ್ಕ್ಯೂಸ್ ಮಿ’ ಚಿತ್ರದ ಹಾಡಿನಲ್ಲಿ ರಮ್ಯಾ, ‘ಡ್ರಾಮಾ’ದಲ್ಲಿ ರಾಧಿಕಾ ಪಂಡಿತ್ ಹೆಡ್‌ಬ್ಯಾಂಡ್ ಧರಿಸಿದ್ದರು.