Weight loss : ಹೊಸ ವರ್ಷವು ಹೊಸ ಆರಂಭ ಎಂದು ಹಲವರು ಭಾವಿಸುತ್ತಾರೆ. ಹೀಗಾಗಿ ತಮ್ಮ ಜೀವನದಲ್ಲಿ ಕೆಲವು ಸುಧಾರಣೆಗಳನ್ನು ತರಲು ಹೊಸ ಅವಕಾಶವನ್ನಾಗಿ ಬಳಸುತ್ತಾರೆ. ನಿಮ್ಮ ಆರೋಗ್ಯ ಸುಧಾರಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಿಮಗಿದು ಉತ್ತಮ ಸಮಯ. ಹೀಗಾಗಿ ಸ್ವಲ್ಪವೂ ಯೋಚನೆ ಮಾಡದೆ ನಿಮ್ಮಲ್ಲಿ ನೀವು ಕೆಲವು ಬದಲಾವಣೆಗೆ ಒಡ್ಡಿಕೊಳ್ಳಿ.
ಅನೇಕರಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ತೂಕ ಹೆಚ್ಚಳವು ಕೂಡ ಒಂದು. ಸ್ಥೂಲಕಾಯ ಅನೇಕ ಸಮಸ್ಯೆಗಳನ್ನು ತೊಂದೊಡ್ಡುತ್ತದೆ. ಹೀಗಾಗಿ 2025ರಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರು ಒಂದಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ತಪ್ಪದೇ ಮಾಡಿದ್ದಲ್ಲಿ ನಿಮ್ಮ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.
ಸಕ್ಕರೆ ಆಹಾರಗಳನ್ನು ಮುಟ್ಟಬೇಡಿ. ಸಕ್ಕರೆಯನ್ನು ಸೇವಿಸುವುದರಿಂದ ಸುಲಭವಾಗಿ ತೂಕ ಹೆಚ್ಚಾಗುತ್ತದೆ. ಹೀಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆ ಆಹಾರಗಳನ್ನು ಆದಷ್ಟು ತಪ್ಪಿಸಿ. ಇದರಿಂದ ನೀವು ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳುತ್ತೀರಿ. ಸಿಹಿತಿಂಡಿಗಳನ್ನು ತಿನ್ನುವ ಬಯಕೆ ಇದ್ದರೆ ಸಾಂದರ್ಭಿಕವಾಗಿ ಜೇನುತುಪ್ಪವನ್ನು ಸೇವಿಸಬಹುದು. ಇತರೆ ಸಿಹಿ ತಿನಿಸುಗಳನ್ನು ತಿನ್ನುವುದಾದರೆ ತೀರಾ ಅಪರೂಪವಾಗಿರಲಿ ಮತ್ತು ಮಿತಿಯಾಗಿರಲಿ.
ಕೆಲವರು ತೂಕ ಇಳಿಸುವ ಉದ್ದೇಶದಿಂದ ಕಡಿಮೆ ಆಹಾರ ಸೇವಿಸುತ್ತಾರೆ. ಆದರೆ, ಇದು ಸರಿಯಾದ ಕ್ರಮವಲ್ಲ. ಈ ರೀತಿ ಮಾಡುವುದರಿಂದ ಶಕ್ತಿಯನ್ನು ಕಳೆದುಕೊಂಡು ನಿಸ್ತೇಜರಾಗುತ್ತಾರೆ. ಇದರ ಬದಲಾಗಿ ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸಬೇಕು. ಆದರೆ, ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬಾರದು. ಎಲ್ಲ ಪೋಷಕಾಂಶಗಳೊಂದಿಗೆ ಸಮತೋಲಿತ ಆಹಾರವನ್ನು ಸೇವಿಸಬೇಕು. ಆವಕಾಡೋ, ಡ್ರೈಫ್ರೂಟ್ಸ್, ಚಿಯಾ ಬೀಜಗಳು ಮತ್ತು ಅಗಸೆಬೀಜಗಳಂತಹ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಒಳ್ಳೆಯದು.
ನಿಮಗೆ ಹಸಿವಾಗಿದೆ ಎಂಬ ಕಾರಣಕ್ಕಾಗಿ ತಿನ್ನಬೇಡಿ. ತಿನ್ನುವುದೂ ಒಂದು ಕೆಲಸ. ಇದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ನೀವು ನಿಮ್ಮ ಆಹಾರವನ್ನು ಚೆನ್ನಾಗಿ ಅಗಿದರೆ ಮತ್ತು ಮನಸ್ಸಿಟ್ಟು ತಿನ್ನುತ್ತಿದ್ದರೆ, ನೀವು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ನೀವು ಅರಿತುಕೊಳ್ಳುತ್ತೀರಿ ಮತ್ತು ಹೆಚ್ಚು ತಿನ್ನುವುದನ್ನು ತಪ್ಪಿಸುತ್ತೀರಿ.
ನೀವು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನೀವು ಸಾಕಷ್ಟು ದೈಹಿಕ ಚಟುವಟಿಕೆಯನ್ನು ಮಾಡುತ್ತಿದ್ದರೆ ಹೆಚ್ಚು ನೀರು ಕುಡಿಯಬೇಕು. ಅಲ್ಲದೆ, ನೀವು ಕನಿಷ್ಠ 7 ಗಂಟೆಗಳ ಕಾಲ ಮಲಗಬೇಕು. ನಿದ್ರೆ ಇಲ್ಲದೆ, ನೀವು ತೂಕವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.