ಲೈಫ್‌ಸ್ಟೈಲ್

ಗರಿ-ಗರಿಯಾದ ರುಚಿಕರ ಕಡಲೆಕಾಳು ದೋಸೆ ಎಂದಾದರೂ ತಿಂದಿದ್ದೀರಾ? ಮಾಡೋದು ಹೇಗೆ ತಿಳಿಯಿರಿ.. | Delicious

Delicious : ಎಲ್ಲರಿಗೂ ದಕ್ಷಿಣ ಭಾರತದ ಖಾದ್ಯಗಳು ಎಂದ್ರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ರುಚಿಕರವಾದ ದೋಸೆಯನ್ನು ಯಾರು ತಿನ್ನಲು ಬಯಸುವುದಿಲ್ಲ ಹೇಳಿ? ಸಾಮಾನ್ಯವಾಗಿ ನೀವು ಅಕ್ಕಿ ಜತೆಗೆ ಉದ್ದಿನ ಬೆಳೆ ದೋಸೆಯನ್ನು ತಿನ್ನುತ್ತೀರಾ. ಇದು ಭಾರತದಲ್ಲಿ ಎಲ್ಲಿ ಬೇಕಾದರೂ ಸಿಗುತ್ತೆ. ಆದ್ರೆ, ಕೆಲ ರುಚಿಕರ ದೋಸೆಗಳ ಬಗ್ಗೆ ತಿಳಿದಿರುತ್ತದೆ. ಅದರೆ, ಎಂದು ತಿನ್ನಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ, ಇದೀಗ ಕಡಲೆಕಾಳು ದೋಸೆ ಮಾಡೊದೇಗೆ ಎಂಬುದು ತಿಳಿಯೋಣ.

ಕಪ್ಪು ಕಡಲೆಕಾಳು ದೋಸೆಗೆ ಬೇಕಾದ ಪದಾರ್ಥಗಳು

ಕಡಲೆಕಾಳು - ಅರ್ಧ ಕಪ್​

ಶುಂಠಿ-ಮೂರು

ಹಸಿ ಮೆಣಸಿನಕಾಯಿ- 2

ಬೆಳ್ಳುಳ್ಳಿ ಎಸಳು-6-7

ಜೀರಿಗೆ - 1 ಟೀಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು - ಕೈಬೆರಳೆಣಿಕೆಯಷ್ಟು

ರವೆ - ½ ಕಪ್

ಮೊಸರು- ¼ ಕಪ್

ಕರಿಬೇವು - ಒಂದು ಚಿಗುರು

ನೀರು - 1 ಕಪ್

ಎಣ್ಣೆ - ಅಡುಗೆಗೆ ಬೇಕಾದಷ್ಟು

ಮೊಸರು ಚಟ್ನಿಗೆ ಬೇಕಾಗುವ ಸಾಮಗ್ರಿಗಳು

ಬೆಳ್ಳುಳ್ಳಿ ಎಸಳುಗಳು - 5

ಹಸಿ ಮೆಣಸಿನಕಾಯಿಗಳು - 2

ಉಪ್ಪು - ಒಂದು ಚಿಟಿಕೆ

ಜೀರಿಗೆ - 1 ಚಮಚ

ಪುದೀನ ಎಲೆಗಳು - ಒಂದು ಹಿಡಿ

ಕೊತ್ತಂಬರಿ ಸೊಪ್ಪು - ಒಂದು ಹಿಡಿ

ಉಪ್ಪು - ಒಂದು ಚಿಟಿಕೆ

ಅರಿಶಿನ - ಒಂದು ಚಿಟಿಕೆ

ದಪ್ಪ ಮೊಸರು - 1 ಕಪ್

ಸಣ್ಣ ಸೌತೆಕಾಯಿ - 1

ಸಾಸಿವೆ ಎಣ್ಣೆ (ಇಚ್ಛಾನುಸಾರ) - 1 ಚಮಚ

ಮಾಡುವ ವಿಧಾನ ತಿಳಿಯಿರಿ..

ಮೊದಲು,ಕಡಲೆಕಾಳು ಬೇಳೆಯನ್ನು ರಾತ್ರಿ ಇಡಿ ನೆನೆಸಿಬೇಕು. ಬೆಳಿಗ್ಗೆ ಅದನ್ನು ಮಿಕ್ಸರ್‌ನಲ್ಲಿ ಹಾಕಿ. ಹಸಿರು ಮೆಣಸಿನಕಾಯಿ, ಶುಂಠಿ, ಜೀರಿಗೆ, ಬೆಳ್ಳುಳ್ಳಿ, ಸ್ವಲ್ಪ ಉಪ್ಪು, ರವೆ, ಕೊತ್ತಂಬರಿ ಸೊಪ್ಪು, ಮೊಸರು, ಕರಿಬೇವು ಮತ್ತು ಅರ್ಧ ಕಪ್ ನೀರು ಸೇರಿಸಿ ಮಿಕ್ಸರ್‌ನಲ್ಲಿ ಪುಡಿಮಾಡಿ. ಒಂದು ಬಟ್ಟಲಿನಲ್ಲಿ ಹಾಕಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಮೊಸರು ಚಟ್ನಿ ವಿಧಾನ..

ಮೊಸರು ಚಟ್ನಿ ಮಾಡಲು ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಉಪ್ಪು, ಜೀರಿಗೆ ಸೇರಿಸಿ ಕಲ್ಲಿನಲ್ಲಿ ರುಬ್ಬಿಕೊಳ್ಳಿ. ಅದು ರುಬ್ಬಿದಾಗ, ಪುದೀನ, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿನ ಪುಡಿ ಸೇರಿಸಿ ರುಬ್ಬಿಕೊಳ್ಳಿ. ಪೇಸ್ಟ್ ಚಟ್ನಿಯಂತೆಯೇ ಆದಾಗ, ಅದನ್ನು ಒಂದು ಬಟ್ಟಲಿನಲ್ಲಿ ತೆಗೆಯಿರಿ. ಇನ್ನೊಂದು ಬಟ್ಟಲಿನಲ್ಲಿ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಅದಕ್ಕೆ ತುರಿದ ಸೌತೆಕಾಯಿಯನ್ನು ಕೂಡ ಸೇರಿಸಬಹುದು. ರುಚಿಕರವಾದ ಮತ್ತು ಆರೋಗ್ಯಕರವಾದ ಮೊಸರು ಚಟ್ನಿ ಸಿದ್ಧವಾಗಿದೆ.

ಈಗ ಒಲೆಯ ಮೇಲೆ ಕಾದ ದೋಸೆ ಪ್ಯಾನ್​ ಮೇಲೆ ಹಿಟ್ಟನ್ನು ಹರಡಿ. ಎರಡು ಬದಿ ತಿರುಗಿಸಿ ಬೆಯಿಸಿ. ಗೋಲ್ಡನ್​​ ಬ್ರೌನ್​ ಬಣ್ಣ ಬರುವವರೆಗೂ ಬೆಯಿಸಿ. ಇದೀಗ ರುಚಿಕಾರವಾದ ಕಡಲೆಕಾಳು ದೋಸೆ ರೆಡಿ.(ಏಜೆನ್ಸೀಸ್​)